ಭಾರತ ಟಿ20 ತಂಡದ ನೂತನ ನಾಯಕ ಸೂರ್ಯಕುಮಾರ್ ಹೊಸ ಕಾರು ಖರೀದಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರನ್ನು ತಿಳಿಯದ ಭಾರತೀಯರಿಲ್ಲ. ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಲಾಂಗ್ ಆಫ್ನತ್ತ ಬಾರಿಸಿದ್ದ ಬಾಲ್ ಅನ್ನು ಬೌಂಡರಿ ಲೈನ್ನಲ್ಲಿ ಓಡಿ ಬಂದು ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕ್ರಿಕೆಟ್‌ನಲ್ಲಿ ಮಿಸ್ಟರ್ 360 ಎಂದು ಕರೆಯಲ್ಪಡುವ ಎಬಿ ಡಿವಿಲಿಯರ್ಸ್‌ನ ರೀತಿ ಸ್ಟೈಲ್ ನಲ್ಲಿ ಬ್ಯಾಟ್ ಬೀಸುವ ಸೂರ್ಯಕುಮಾರ್ ಯಾದವ್ ಅವರನ್ನು ಮಿಸ್ಟರ್ 360 ಎಂದು ಕರೆಯುತ್ತಾರೆ.
ಸೂರ್ಯಕುಮಾರ್ ಯಾದವ್ ಅವರು ಯಾವುದೇ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲುವ ಭಾರತೀಯ ಲೈನ್-ಅಪ್‌ನಲ್ಲಿರುವ ಆಟಗಾರ. ರೋಹಿತ್ ಶರ್ಮಾ ನಿವೃತ್ತಿಯ ನಂತರ ತೆರವಾಗಿದ್ದ ಭಾರತೀಯ ಟಿ20 ತಂಡದ ನಾಯಕತ್ವವನ್ನೂ ಸ್ಕೈ ವಹಿಸಿಕೊಂಡರು. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದು ಕೂಡ ದೊಡ್ಡ ಚರ್ಚೆಯಾಗಿತ್ತು.

ಟಿ20 ವಿಶ್ವಕಪ್‌ನಲ್ಲಿ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಬದಲಿಗೆ ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ಲಂಕಾ ವಿರುದ್ಧದ ಸರಣಿಯಲ್ಲಿ ನಾಯಕನನ್ನಾಗಿ ಮಾಡಿದೆ. ಈ ಸರಣಿಯಲ್ಲಿ ಮಾತ್ರವಲ್ಲದೆ ಮುಂಬರುವ ಎಲ್ಲಾ ಟಿ20 ಸರಣಿಗಳಲ್ಲೂ ಸ್ಕೈ ಭಾರತವನ್ನು ಮುನ್ನಡೆಸಲಿದೆ. ಕ್ರಿಕೆಟ್ ನಂತರ ಭಾರತದ ನೂತನ ನಾಯಕನಿಗೆ ಕಾರುಗಳ ಮೇಲೆ ಹೆಚ್ಚಿನ ಕ್ರೇಜ್ ಆನ್ನು ಹೊಂದಿದಾರೆ.
ಮುಂಬರುವ ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ತಮ್ಮ ಹೊಸ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೊಚ್ಚ ಹೊಸ ಐಷಾರಾಮಿ ಎಸ್‍ಯುವಿಯನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಭಾರತೀಯ ಟಿ 20 ಕ್ರಿಕೆಟ್ ತಂಡದ ನಾಯಕ ಮರ್ಸಿಡಿಸ್-ಬೆಂಝ್ ಲೈನ್‌ನ ಅತ್ಯಂತ ಜನಪ್ರಿಯ ಮಾದರಿಯಾದ ಜಿ-ವ್ಯಾಗನ್ ಅನ್ನು ಖರೀದಿಸಿದ್ದಾರೆ. ಇದು ಮರ್ಸಿಡಿಸ್ G63 AMG ಎಸ್‍ಯುವಿ ಮಾದರಿಯಾಗಿದೆ.

ಸೂರ್ಯಕುಮಾರ್ ಯಾದವ್ ಅವರ ಎಸ್‍ಯುವಿಯ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ CS12 Vlogs ನಲ್ಲಿ ಸಹ ಹಂಚಿಕೊಳ್ಳಲಾಗಿದೆ. ಈ ಕಿರು ವೀಡಿಯೊದಲ್ಲಿ, ಭಾರತೀಯ ಕ್ರಿಕೆಟಿಗನು ತನ್ನ ಹೊಸ G63 AMG ಐಷಾರಾಮಿ ಎಸ್‍ಯುವಿಯನ್ನು ಚಾಲನೆ ಮಾಡುವುದನ್ನು ಕಾಣಬಹುದು. ಜಿ-ವ್ಯಾಗನ್‌ನ ಮ್ಯಾಟ್ ಕಪ್ಪು ಬಣ್ಣದ ಆಯ್ಕೆಯನ್ನು ಹೊಂದಿದೆ. ಸೂರ್ಯಕುಮಾರ್ ಯಾದವ್ ಜಿ3 ಎಎಂಜಿ ಗ್ರ್ಯಾಂಡ್ ಎಡಿಷನ್ ರೂಪಾಂತರವನ್ನು ಖರೀದಿಸಿದ್ದಾರೆ
ಮರ್ಸಿಡಿಸ್ G63 AMG ಗ್ರ್ಯಾಂಡ್ ಎಡಿಷನ್ ರೂಪಾಂತರರ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.4 ಕೋಟಿಯಾಗಿದೆ. ಮುಂಬೈನಲ್ಲಿ ಈ ಐಷಾರಾಮಿ ಸ್ಪೋರ್ಟ್ ಯುಟಿಲಿಟಿ ವಾಹನದ ಆನ್-ರೋಡ್ ಬೆಲೆ ತೆರಿಗೆ ಮತ್ತು ವಿಮೆ ಸೇರಿದಂತೆ ಸುಮಾರು 4.67 ಕೋಟಿ ರೂಪಾಯಿ ಎಂದು ವರದಿಯಾಗಿದೆ. ವಿಶ್ವಾದ್ಯಂತ ಕೇವಲ 1000 ಯುನಿಟ್‌ಗಳಿಗೆ ಸೀಮಿತವಾಗಿದ್ದು, ಮರ್ಸಿಡಿಸ್-ಬೆಂಝ್ ಜಿ-ವ್ಯಾಗನ್ ಗ್ರ್ಯಾಂಡ್ ಎಡಿಷನ್‌ನ ಕೇವಲ 25 ಯುನಿಟ್‌ಗಳು ಭಾರತದಲ್ಲಿ ಮಾರಾಟವಾಗುತ್ತವೆ.

ಮರ್ಸಿಡಿಸ್-ಬೆಂಝ್ ಮೇಬ್ಯಾಕ್, ಎಸ್-ಕ್ಲಾಸ್ ಮತ್ತು ಮರ್ಸಿಡಿಸ್ ಎಎಂಜಿ ಗ್ರಾಹಕರು ಜಿ-ವ್ಯಾಗನ್‌ನ ಈ ವಿಶೇಷ ಆವೃತ್ತಿಯನ್ನು ಖರೀದಿಸಲು ಮೊದಲಿಗರಾಗಿರುತ್ತಾರೆ. G63 AMG ಗ್ರಾಂಡ್ ಆವೃತ್ತಿಯು ಗೋಲ್ಡನ್ ಗ್ರಾಫಿಕ್ಸ್‌ನೊಂದಿಗೆ ಮ್ಯಾನುಫ್ಯಾಕ್ಚರರ್ ನೈಟ್ ಬ್ಲ್ಯಾಕ್ ಮ್ಯಾಗ್ನೋ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಈ ಮರ್ಸಿಡಿಸ್ G63 AMG ಗ್ರ್ಯಾಂಡ್ ಆವೃತ್ತಿಯು 22-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ.
ಈ ಮರ್ಸಿಡಿಸ್ G63 AMG ಎಸ್‍ಯುವಿಯಲ್ಲಿ 4.0 ಲೀಟರ್ V8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 585 bhp ಪವರ್ ಮತ್ತು 850 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಜಿ-ವ್ಯಾಗನ್ ಹೊರತಾಗಿ, ಸೂರ್ಯಕುಮಾರ್ ಯಾದವ್ ಅವರ ಗ್ಯಾರೇಜ್‌ನಲ್ಲಿ ಮರ್ಸಿಡಿಸ್-ಬೆಂಝ್ GLS ಐಷಾರಾಮಿ ಎಸ್‍ಯುವಿಯನ್ನು ಸಹ ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








