ವಿಶ್ವದ ಬೆಲೆ ಬಾಳುವ ಕ್ರೀಡಾಪಟುವಿನ 135 ಕೋಟಿ ದುಬಾರಿಯ ಜೆಟ್
ಸ್ಪೇನ್ ನ ಹೆಸರಾಂತ ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಹಾಗೂ ಮುನ್ನಡೆಯ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಖಾಸಗಿ ಜೆಟ್ ವಿಮಾನವೊಂದನ್ನು ಖರೀದಿಸಿದ್ದಾರೆ.
Also Read: ಕಿಂಗ್ ಖಾನ್ ಪಾಲಾಯ್ತು ದುಬಾರಿ ವ್ಯಾನಿಟಿ ಬಸ್
ಇದರ ಬೆಲೆ ಎಷ್ಟಿರಬಹುದು ಎಂಬುದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ ? ಬರೋಬ್ಬರಿ 19 ಮಿಲಿಯನ್ ಯುರೋಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ಇದನ್ನು ನಮ್ಮ ಭಾರತೀಯ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದಾಗ 135 ಕೋಟಿ ರುಪಾಯಿಗಳಷ್ಟು (1352457225.85 ರುಪಾಯಿ) ಬೆಲೆ ಬಾಳುತ್ತದೆ.

ಮೈದಾನದಲ್ಲಿ ತಮ್ಮ ಅದ್ಬುತ ಕಾಲ್ಚೆಂಡಿನ ಆಟದಿಂದಲೇ ಮೈದಾನದ ಹೊರಗೂ ಭಾರಿ ಜನಪ್ರಿಯತೆ ಸಾಧಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಜಗತ್ತಿನ ಅತಿ ಬೆಲೆ ಬಾಳುವ ಕ್ರೀಡಾಪಟುಗಳ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶ್ವದ ದುಬಾರಿ ಕ್ರೀಡಾಪಟು ಎಂದೆನಿಸಿಕೊಂಡಿರುವ ಮೇಲೆ ಸಹಜವಾಗಿಯೇ ಜಗತ್ತಿನೆಲ್ಲೆಡೆಯಿಂದ ಬೇಕಾದಷ್ಟು ಜಾಹೀರಾತು ಆಫರ್ ಗಳು ಬರುತ್ತವೆ. ಅಲ್ಲದೆ ಕ್ರೀಡೆಯ ಹೊರತಾಗಿ ತಮ್ಮದೇ ಆದ ಖಾಸಗಿ ಉದ್ಯಮದಲ್ಲಿ ತೊಡಗಿಸಿಕೊಂಡು ಭಾರಿ ಹೂಡಿಕೆ ಮಾಡುವುದರತ್ತ ಕಾರ್ಯ ಮಗ್ನವಾಗುತ್ತಾರೆ.

ಹೀಗೆ ಎಲ್ಲ ವಿಧದಲ್ಲೂ ತಮ್ಮ ವೈಯಕ್ತಿಕ ಪಯಣಕ್ಕಾಗಿ ರೊನೊಲ್ಡೊ 'ಗಲ್ಪ್ ಸ್ಟ್ರೀಮ್ ಜಿ200' ಎಂಬ ಖಾಸಗಿ ಜೆಟ್ ವಿಮಾನವನ್ನು ಖರೀದಿಸಿದ್ದಾರೆ.

ಗಲ್ಪ್ ಸ್ಟ್ರೀಮ್ ಜಿ200 ಒಂದು ಟ್ವಿನ್ ಎಂಜಿನ್ ನಿಯಂತ್ರಿತ ಖಾಸಗಿ ಜೆಟ್ ವಿಮಾನವಾಗಿದ್ದು, 10 ಮಂದಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ.

ಇದರಲ್ಲಿ ಖಾಸಗಿ ಕೋಣೆಗಳು, ಆತಿಥಿ ಕೋಣೆ, ಶೌಚಾಲಯ, ಅಡುಗೆ ಕೋಣೆ, ಎಸಿ, ಫ್ರಿಡ್ಜ್, ತಂಪು ಪಾನೀಯ ಮುಂತಾದ ವ್ಯವಸ್ಥೆಗಳು ಲಭ್ಯವಾಗಲಿದೆ.

ಇನ್ನು ಆಗಲೇ ಪ್ರೇಯಿಸರ ಜೊತೆಗೆ ಡೇಟಿಂಗ್ ನಲ್ಲಿ ಹೆಸರು ಮಾಡಿರುವ ರೊನಾಲ್ಡೊ ಅವರ ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, 24 ತಾಸಿನಲ್ಲೂ ಇಂಟರ್ ನೆಟ್ ಸೇವೆಯೂ ಇರಲಿದೆ.

ಆಧುನಿಕ ಕ್ರೀಡಾ ಜಗತ್ತಿನ ಅತ್ಯಂತ ಬೆಲೆ ಬಾಳುವ ಕ್ರೀಡಾಪಟುಗಳಲ್ಲಿ ಓರ್ವನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ, ವಿಶ್ವದಲ್ಲೇ ಅತಿ ಹೆಚ್ಚು ಸಂಪಾದಿಸುವ ಕ್ರೀಡಾಪಟುಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಬಾಕ್ಸಿಂಗ್ ದಿಗ್ಗಜ ಫ್ಲಾಯ್ಡ್ ಮೇವೆದರ್
ಜೂನಿಯರ್ ಅಗ್ರಸ್ಥಾನದಲ್ಲಿದ್ದಾರೆ.

ಈಗ ಕ್ರಿಸ್ಟಿಯಾನೊ ರೊನಾಲ್ಡೊ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು


Click it and Unblock the Notifications








