ಪೋರ್ಚುಗೀಸ್ ಮೂಲದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಇತ್ತೀಚೆಗೆ ದುಬಾರಿ ಮೌಲ್ಯದ ಬುಗಾಟಿ ಕಾರನ್ನು ಖರೀದಿ ಮಾಡಿದ್ದು, ಹೊಸ ಕಾರಿನ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಳೆದ ತಿಂಗಳಷ್ಟೇ 15 ಕೋಟಿಗೂ ಅಧಿಕ ಮೌಲ್ಯದ ಫೆರಾರಿ ಟಾಪ್ ಎಂಡ್ ಕಾರು ಖರೀದಿ ಮಾಡಿದ್ದ ರೊನಾಲ್ಡೊ, ಇದೀಗ ಮತ್ತೊಂದು ದುಬಾರಿ ಮೌಲ್ಯದ ಕಾರೊಂದು ಖರೀದಿ ಮಾಡಿದ್ದಾರೆ. ಹಾಗಾದ್ರೆ ಇಷ್ಟೊಂದು ದುಬಾರಿ ಬೆಲೆಯ ಕಾರನ್ನು ಯಾರಿಗಾಗಿ ಖರೀದಿ ಮಾಡಿದ್ದಾರೆ ಗೊತ್ತಾ?
ನಿಜಕ್ಕೂ ಈ ಕುರಿತು ಕೋಟ್ಯಾಂತರ ಸಂಖ್ಯೆಯಲ್ಲಿ ರೊನಾಲ್ಡೊ ಅಭಿಮಾನಿಗಳಿಗೆ ಭಾರೀ ಕೂತೂಹಲ ಉಂಟಾಗಿತ್ತು. ಹೀಗಾಗಿ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ಉತ್ತರಿಸಿರುವ ರೊನಾಲ್ಡೊ ಇದೆಲ್ಲಾ ನನ್ನ ಮಗನ ಆಸೆ ಪೂರೈಸಲು ಬುಗಾಟಿ ಕಾರು ಖರೀದಿಸಿದ್ದಾಗಿ ಹೇಳಿಕೊಂಡಿದ್ದಾರೆ.


ಹೌದು ಅವರು ಹೇಳಿದಂತೆ ಕಾರು ರೇಸ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ರೊನಾಲ್ಡೊ ಹಿರಿಯ ಮಗನಾದ ಕ್ರಿಸ್ಟಿಯಾನೋ ರೊನಾಲ್ಡೊ ಜೂನಿಯರ್, ತಂದೆಯಂತೆ ಪುಟ್ಬಾಲ್ ಅಭ್ಯಾಸದಲ್ಲಿ ಈಗಾಗಲೇ ಮಿಂಚುತ್ತಿದ್ದಾನೆ.
ಜೊತೆಗೆ ಕಳೆದೆರಡು ವರ್ಷಗಳಿಂದಲೇ ಬುಗಾಟಿ ಕಾರಿನ ಬಗ್ಗೆ ತಂದೆಯ ಬಳಿ ಕುತೂಹಲ ವ್ಯಕ್ತಪಡಿಸುತ್ತಿರುವ ಕ್ರಿಸ್ಟಿಯಾನೋ ರೊನಾಲ್ಡೊ ಜೂನಿಯರ್, ಬುಗಾಟಿ ಖರೀದಿಸುವಂತೆ ರೊನಾಲ್ಡೊ ಬಳಿ ಕೇಳಿಕೊಳ್ಳುತ್ತಿದ್ದನಂತೆ.
ಈ ಹಿನ್ನೆಲೆ 18 ಕೋಟಿ ಮೌಲ್ಯದ ಕಾರನ್ನು ಖರೀದಿ ಮಾಡಿರುವ ಕ್ರಿಸ್ಟಿಯಾನೋ ರೊನಾಲ್ಡೊ, ಕೊನೆಗೂ ತಮ್ಮ ಮಗನ ಆಸೆ ಪೂರೈಸಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಆದ್ರೆ ಹೊಸ ಕಾರಿನಿದಾಗಿ ಫೆರಾರಿ ಬಗೆಗೆ ತನ್ನ ಒಲವು ಕಡಿಮೆ ಆಗಿಲ್ಲವೆಂದಿದ್ದಾರೆ.
ಇನ್ನು ಬುಗಾಟಿ ಬಗೆಗೆ ಹೇಳುವುದಾದರೇ ಜಗತ್ತಿನ ಅತಿಹೆಚ್ಚು ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ಕಾರು ಮಾದರಿಗಳಲ್ಲಿ ಒಂದಾಗಿರುವ ಬುಗಾಟಿ, ಕಸ್ಟಮೆಜ್ಡ್ ವೈಶಿಷ್ಟ್ಯತೆಗಳೊಂದಿಗೆ ಕೇವಲ 3.5 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿಯನ್ನು ಹೊಂದಿವೆ.
ಇದಲ್ಲದೇ ಕ್ರಿಸ್ಟಿಯಾನೋ ರೊನಾಲ್ಡೊ ಸ್ಪೋರ್ಟ್ ಕಾರು ಕಲೆಕ್ಷನ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರುಗಳಿದ್ದು, ಫೆರಾರಿ ಎಫ್430, ಬೆಟ್ಲಿ ಜಿಟಿ ಸ್ಪೀಡ್, ಆಸ್ಟನ್ ಮಾರ್ಟಿನ್ ಟಿಬಿ9, ಆಡಿ ಆರ್8 ಸೇರಿ ಹಲವು ಐಷಾರಾಮಿ ಕಾರನ್ನು ಕೂಡಾ ಹೊಂದಿದ್ದಾರೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark