ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ವಾಹನಗಳ ಬಗ್ಗೆ ಹುಚ್ಚು ಹೊಂದಿರುವವರು ತಮ್ಮ ನೆಚ್ಚಿನ ವಾಹನಗಳ ಫೋಟೋ ಅಥವಾ ಆಟಿಕೆಗಳನ್ನು ಖರೀದಿಸಿ ತಮ್ಮ ವೈಯಕ್ತಿಕ ಕೋಣೆಯಲ್ಲಿಡುತ್ತಾರೆ. ಇನ್ನೂ ಕೆಲವರು ಈ ಮಾದರಿಗಳನ್ನು ತಮ್ಮ ಆಫೀಸ್ ಡೆಸ್ಕ್ ಗಳಲ್ಲಿ ಇಡುತ್ತಾರೆ.

ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ಕಾರು ಉತ್ಸಾಹಿಗಳನ್ನು ಆಕರ್ಷಿಸಲು ಬಾಣಸಿಗರೊಬ್ಬರು ಚಾಕೊಲೇಟ್'ನಿಂದ ಬೈಕ್ ಅನ್ನು ನಿರ್ಮಿಸಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವರು ಈ ಚಾಕೊಲೇಟ್ ಬೈಕ್ ನಿರ್ಮಿಸಿದ್ದಾರೆ. ಚಾಕೊಲೇಟ್‌ನಿಂದ ತಯಾರಾದ ಈ ಬೈಕ್ ನೋಡುಗರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ಅದರಲ್ಲೂ ಕಾರು ಉತ್ಸಾಹಿಗಳು ಹಾಗೂ ಚಾಕೊಲೇಟ್ ಪ್ರಿಯರು ಈ ಬೈಕಿನತ್ತ ಆಕರ್ಷಿತರಾಗಿದ್ದಾರೆ. ಸ್ವಿಟ್ಜರ್ಲೆಂಡ್‌ನ ಜಿನೀವಾ ಮೂಲದ ಅಮೌರಿ ಗುಯಿಚಾನ್ ಎಂಬುವವರೇ ಈ ಚಾಕೋಲೇಟ್ ಬೈಕ್ ತಯಾರಿಸಿದವರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ಅವರು ಸಿಹಿತಿಂಡಿ ಹಾಗೂ ಬೇಕರಿ ಉತ್ಪನ್ನಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದಾರೆ. ಅವರು ತಿಂಡಿ ತಿನಿಸುಗಳನ್ನು ವಿಭಿನ್ನ ಬಗೆಯಲ್ಲಿ ತಯಾರಿಸುವುದಕ್ಕೂ ಜನಪ್ರಿಯರಾಗಿದ್ದಾರೆ. ಈ ಹಿಂದೆ ದೂರದರ್ಶಕ ಹಾಗೂ ಆನೆಗಳನ್ನು ಚಾಕೊಲೇಟ್'ನಿಂದ ತಯಾರಿಸಿದ್ದರು.

ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ಈಗ ಚಾಕೊಲೇಟ್‌ನಿಂದ ಬೈಕ್ ತಯಾರಿಸಿದ್ದಾರೆ. ನಿಜವಾದ ಬೈಕಿನಂತೆ ಕಾಣುವ ಈ ಬೈಕಿನಲ್ಲಿ ಚಾಕೊಲೇಟ್ ಹೊರತುಪಡಿಸಿ ಬೇರೆ ಏನೂ ಬಳಸಲಾಗಿಲ್ಲ. ಈ ಕಾರಣಕ್ಕೆ ಚಾಕೊಲೇಟ್ ಹೊರತುಪಡಿಸಿ ಬೇರೆ ಯಾವುದೇ ವಸ್ತುವನ್ನು ಕಾಣಲಾಗುವುದಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ಈ ಬೈಕ್ ಅನ್ನು ಎಡಿಬಲ್ ಚಾಕೊಲೇಟ್‌ನಿಂದ ತಯಾರಿಸಲಾಗಿದೆ. ಬೈಕಿಗೆ ಬಣ್ಣ ನೀಡಲು ಆಹಾರಕ್ಕೆ ಬಳಸುವ ಬಣ್ಣಗಳನ್ನು ಬಳಸಿದ್ದಾರೆ. ಅಮೌರಿ ಗುಯಿಚಾನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬೈಕ್ ಅನ್ನು ಹೇಗೆ ವಿನ್ಯಾಸಗೊಳಿಸಲಾಯಿತು ಎಂಬುದನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ಈ ಕಿರು ವೀಡಿಯೊದಲ್ಲಿ ಬೈಕ್ ತಯಾರಿಕೆ ವಿಧಾನಗಳನ್ನು ವಿವರಿಸಿದ್ದಾರೆ. ಅಂದ ಹಾಗೆ ಕ್ರೂಸರ್ ಮಾದರಿಯ ಬೈಕ್ ಅನ್ನು ಚಾಕೊಲೇಟ್‌ನಿಂದ ತಯಾರಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಚಾಕೊಲೇಟ್‌ನಿಂದ ತಯಾರಾದ ಈ ಬೈಕ್ ವಿಶೇಷ ಸಿಲಿಂಡರ್‌, ಎಂಜಿನ್ ಕೇಸ್, ಹೆಡ್‌ಲೈಟ್, ಎಕ್ಸಾಸ್ಟ್, ವ್ಹೀಲ್ ಹಾಗೂ ಸ್ಪೋಕ್ ವೈರ್‌ಗಳನ್ನು ಹೊಂದಿದೆ. ಈ ಎಲ್ಲವೂ ಚಾಕೊಲೇಟ್‌ನಿಂದಲೇ ತಯಾರಾಗಿವೆ.

ಚಾಕೊಲೇಟ್‌ನಿಂದ ತಯಾರಾದ ಕ್ರೂಸರ್ ಮಾದರಿಯ ಬೈಕ್

ಇದರ ಜೊತೆಗೆ ಡಿಸ್ಕ್ ಬ್ರೇಕ್, ಸೀಟ್ ಹಾಗೂ ಹೆಡ್‌ಲೈಟ್‌ನಲ್ಲಿರುವ ಮಿರರ್ ಎಲ್ಲವೂ ಚಾಕೊಲೇಟ್‌ನಿಂದಲೇ ತಯಾರಾಗಿರುವುದು ವಿಶೇಷ. ಹೆಡ್‌ಲೈಟ್‌ನಲ್ಲಿರುವ ಮಿರರ್ ಅನ್ನು ಸಕ್ಕರೆ ತಿರುಳಿನಿಂದ ತಯಾರಿಸಲಾಗಿದೆ. ಒಟ್ಟಾರೆಯಾಗಿ ಈ ಬೈಕ್ ಎಡಿಬಲ್ ಪದಾರ್ಥಗಳಿಂದ ತಯಾರಾಗಿದೆ.

Most Read Articles
 

Kannada
English summary
Cruiser bike model made from chocolate. Read in Kannada.
Story first published: Wednesday, February 10, 2021, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X