ಮನಮೆಚ್ಚುವ ಕಥೆ: ಪ್ರಾಣ ಉಳಿಸಿದ್ದಕ್ಕೆ ಮರುದಿನವೇ ಹೊಸ Tata ಕಾರು ಖರೀದಿಸಿದ ಗ್ರಾಹಕ
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ತೆಗೆದುಕೊಳ್ಳಬೇಕೆಂಬುದು ಬಹು ದೊಡ್ಡ ಕನಸಾಗಿರುತ್ತದೆ. ಅದಕ್ಕಾಗಿ ತಮ್ಮ ಬಜೆಟ್‌ನಲ್ಲಿ ಸಿಗುವ ಬೆಸ್ಟ್ ಕಾರನ್ನು ಹುಡುಕುತ್ತಿರುತ್ತಾರೆ. ಅದರಲ್ಲಿಯೂ ಆಕರ್ಷಕ ವೈಶಿಷ್ಟ್ಯ, ವಿನ್ಯಾಸ, ಮೈಲೇಜ್ ಹಾಗೂ ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈಗ, ಟೆಸ್ಟ್ ಡ್ರೈವ್ ನಡೆಸದೇ ಯಾರು ನೂತನ ಕಾರನ್ನು ಖರೀದಿಸುವುದೇ ಇಲ್ಲ.
ಇತ್ತೀಚೆಗೆ ಟೆಸ್ಟ್ ಡ್ರೈವ್ ನಡೆಸುವಾಗ ಟಾಟಾ ಪಂಚ್ ಎಸ್‌ಯುವಿ ಅಪಘಾತಕ್ಕೆ ಒಳಗಾಗಿದ್ದು, ಜೀವ ಉಳಿಸಿದ್ದಕ್ಕಾಗಿ ಗ್ರಾಹಕನೊಬ್ಬ ಇದೇ ಕಾರನ್ನು ಮರುದಿನ ಖರೀದಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತ ವಿಡಿಯೋವೊಂದನ್ನು ಅಪ್ಲೋಡ್ ಮಾಡಲಾಗಿದೆ. ಖರೀದಿದಾರನೊಬ್ಬ ನೂತನ ಕಾರನ್ನು ಕೊಂಡುಕೊಳ್ಳಲು ನಿರ್ಧರಿಸಿ, ತನ್ನ ಸಹೋದರನೊಂದಿಗೆ ಗುಜರಾತ್‌ನಲ್ಲಿರುವ ಟಾಟಾ ಡೀಲರ್‌ಶಿಪ್‌ಗೆ ತೆರಳಿದ್ದಾರೆ. ಅಲ್ಲಿ ಪಂಚ್ ಕಾರನ್ನು ಟೆಸ್ಟ್ ಡ್ರೈವಿಂಗ್ ಮಾಡಲು ತೆಗೆದುಕೊಂಡು ಹೋಗಿದ್ದಾರೆ.

ಬಹುಶಃ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಡ್ರೈವ್ ಮಾಡಲು ಹೋಗಿದಂತೆ ಕಾಣುತ್ತದೆ. ಕಾರನ್ನು ಗಂಟೆಗೆ 80-90 ಕಿಮೀ ವೇಗದಲ್ಲಿ ಓಡಿಸಲಾಗುತ್ತಿತ್ತು. ಆದರೆ, ಮುಂಭಾಗ ಹೋಗುತ್ತಿದ್ದ ಟ್ರಕ್ ಏಕಾ-ಏಕಿ ಬ್ರೇಕ್ ಹಾಕಿದೆ. ಕಾರನ್ನು ನಿಧಾನಗೊಳಿಸಿ, ಬ್ರೇಕ್ ಹಾಕಲು ಸಮಯವಿಲ್ಲದ ಕಾರಣ, ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು, ಚಾಲಕ ಬಲಭಾಗಕ್ಕೆ ಕಾರನ್ನು ತಿರುಗಿಸಿದ್ದಾರೆ.
ಆದರೆ, ಈ ಪಂಚ್ ಕಾರು, ಹೆದ್ದಾರಿ ಬದಿಯಲ್ಲಿ ನಿರ್ಮಿಸಲಾದ ಚರಂಡಿ ಕಾಲುವೆ ತಡೆ ಗೋಡೆಗೆ ಡಿಕ್ಕಿಯಾಗಿದೆ. ಏರ್‌ಬ್ಯಾಗ್ ಓಪನ್ ಆಗಿದ್ದು, ಡೀಲರ್‌ಶಿಪ್‌ನ ಮಾರಾಟ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಬಲಭಾಗದ ಡೋರ್ಸ್, ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್‌ಗಳಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿರುವದನ್ನು ವಿಡಿಯೋದಲ್ಲಿ ಕಾಣಬಹುದು.

ಟೆಸ್ಟ್ ಡ್ರೈವ್ ವೇಳೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಪಘಾತವಾದರೂ ಪ್ರಾಣ ಉಳಿಸಿದ ಟಾಟಾಗೆ ಆ ಗ್ರಾಹಕ ಧನ್ಯವಾದ ಹೇಳಿದ್ದು, ಮರುದಿನವೇ ಶೋರೂಂಗೆ ಭೇಟಿ ನೀಡಿ, ಹೊಚ್ಚ ಹೊಸ ಪಂಚ್ ಕಾರನ್ನು ಖರೀದಿಸಿದ್ದಾರೆ. ಇಲ್ಲಿ ಡೀಲರ್‌ಶಿಪ್ ಸಿಬ್ಬಂದಿಯನ್ನು ಮೆಚ್ಚಲೇಬೇಕು. ವರದಿ ಪ್ರಕಾರ, ಟೆಸ್ಟ್ ಡ್ರೈವ್ ವೇಳೆ ಕಾರಿಗೆ ಭಾರೀ ಹಾನಿಯಾಗಿದ್ದರು. ಅದಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವಂತೆ ಅವರು ಕೇಳಿಲ್ಲ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್ ರೂ.6 ಲಕ್ಷದಿಂದ ರೂ.9.52 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಜೊತೆಗೆ ನಾಲ್ಕು ರೂಪಾಂತರ ಆಯ್ಕೆಯಲ್ಲಿ ಲಭ್ಯವಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 88 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್/ 5-ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಈ ಟಾಟಾ ಪಂಚ್ ಕಾರು, 18.8 - 20.09 kmpl ಮೈಲೇಜ್ ನೀಡುತ್ತದೆ. ಐದು ಆಸನ ವ್ಯವಸ್ಥೆ ಹೊಂದಿದ್ದು, ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ, 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಹೆಡ್‌ಲೈಟ್ಸ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications