ಸಿಂಪಲ್ ಸಾಧನಗಳಿಂದ ಪ್ಯಾರಾ ಮೋಟರ್ ಗ್ಲೈಡರ್ ತಯಾರಿಸಿದ ಸೈಕಲ್ ಮೆಕ್ಯಾನಿಕ್
ಮಾಡಲೇಬೇಕೆಂಬ ಛಲವಿದ್ದರೆ ಸಾಕು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಇದಕ್ಕೆ ಹಲವು ಉದಾಹರಣೆಗಳು ನಮ್ಮ ಸುತ್ತಮುತ್ತಲಿನಲ್ಲೇ ಸಿಗುತ್ತವೆ. ಇದನ್ನು ಮತ್ತೊಮ್ಮೆ ಸಾಭೀತುಪಡಿಸಲೆಂದೇ ಯುವಕನೊಬ್ಬನ ಸಾಧನೆಯನ್ನು ಈ ಲೇಖನದ ಮೂಲಕ ತಂದಿದ್ದೇವೆ. ಬೈಸಿಕಲ್ ರಿಪೇರಿ ಮಾಡುವ ಹುಡುಗ ಪ್ಯಾರಾ ಮೋಟಾರ್ ಗ್ಲೈಡರ್ ತಯಾರಿಸಿ ಹೇಗೆ ಭಾರತೀಯ ಸೇನೆಯಲ್ಲಿ ಕೆಲಸ ಪಡೆದ ಎಂಬುದನ್ನು ಇಲ್ಲಿ ನೋಡೋಣ.
ಯಾರಲ್ಲಿ ಉತ್ಸಾಹ ಮತ್ತು ಹಂಬಲ ಬಲವಾಗಿರುತ್ತವೆಯೋ, ಅವರು ಎಷ್ಟೇ ಕಷ್ಟಗಳು ಬಂದರೂ ತಮ್ಮ ಗಮ್ಯಸ್ಥಾನವನ್ನು ತಲುಪುವವರೆಗೆ ನಿಲ್ಲುವುದಿಲ್ಲ. ಬಡ ಕುಟುಂಬದಲ್ಲಿ ಜನಿಸಿದ ಪಂಜಾಬ್‌ನ ಫರೀದ್‌ಕೋಟ್ ಹುಡುಗ ಹರ್‌ಪ್ರೀತ್ ಈ ಲೇಖನದಲ್ಲಿನ ರಿಯಲ್ ಹೀರೋ ಆಗಿದ್ದಾನೆ. ಕಷ್ಟಗಳ ನಡುವೆಯೂ ಕನಸುಗಳನ್ನು ನನಸಾಗಿಸಿಕೊಂಡು ಸೈಕಲ್ ರಿಪೇರಿ ಮಾಡುತ್ತಲೇ ಪ್ಯಾರಾ ಮೋಟಾರ್ ಗ್ಲೈಡರ್ ತಯಾರಿಸಿ, ಹಲವರಿಗೆ ಮಾದರಿಯಾಗಿದ್ದಾರೆ. ಈತನ ಈ ಸಾಧನೆಗೆ ಹಲವರು ಮೆಚ್ಚಿ ಕೊಂಡಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಹರ್‌ಪ್ರೀತ್ ತಾನು ತಯಾರಿಸಿದ ಈ ವಾಹನವನ್ನು ಪ್ಯಾರಾ ಮೋಟಾರ್ ಗ್ಲೈಡರ್ ಎಂದು ಹೇಳಿಕೊಂಡಿದ್ದಾರೆ. ಈ ಪ್ಯಾರಾ ಮೋಟಾರ್ ಗ್ಲೈಡರ್ ಅನ್ನು ತಯಾರಿಸಲು ಆತ ತುಂಬಾ ಶ್ರಮಪಟ್ಟಿರುವುದಾಗಿ ಹೇಳಿದ್ದಾರೆ. ಅಸ್ಸಾಂನ ಸೇನಾ ಶಿಬಿರದಲ್ಲಿ ತರಬೇತಿ ಪಡೆದ ನಂತರ, ಅದನ್ನು ಪೂರ್ಣಗೊಳಿಸಲು 3 ವರ್ಷಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ. ಈ ಪ್ಯಾರಾ ಮೋಟಾರ್ ಗ್ಲೈಡರ್‌ನಲ್ಲಿ ಕಾರಿನ ಕೆಲ ಬಿಡಿ ಭಾಗಗಳನ್ನು ಅಳವಡಿಸಲಾಗಿದೆ. ಜೊತೆಗೆ ಸೈಕಲ್ ಹ್ಯಾಂಡಲ್ ಬಾರ್ ಅನ್ನು ಕೂಡ ಅಳವಡಿಸಲಾಗಿದೆ.
ಹಾಗೆಯೇ ಪ್ರೊಪೆಲ್ಲರ್‌ಗಾಗಿ ಮರದ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಇನ್ನು ವಾಹನದ ಮುಖ್ಯ ಭಾಗವಾದ ಎಂಜಿನ್‌ಗಾಗಿ ಮೋಟಾರ್‌ಸೈಕಲ್ ಎಂಜಿನ್ ಅನ್ನು ಬಳಸಲಾಗಿದೆ. ಒಟ್ಟಾರೆ ಸಾಮಾನ್ಯ ವಾಹನಗಳಿಂದ ಪ್ರಮುಖ ಭಾಗಗಳನ್ನು ಶೇಖರಿಸುವ ಮೂಲಕ ಹಾರುವ ಪ್ಯಾರಾ ಮೋಟಾರ್ ಗ್ಲೈಡರ್ ಅನ್ನು ತಯಾರಿಸಿದ್ದಾನೆ. ಈ ಪ್ಯಾರಾ ಮೋಟಾರ್ ಗ್ಲೈಡರ್‌ನಲ್ಲಿ ಕೇವಲ ಒಬ್ಬರು ಕೂತು ಹಾರಾಟ ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಇದರ ಲ್ಯಾಂಡಿಂಗ್ ಹಾಗೂ ಟೇಕ್ ಆಫ್‌ಗಾಗಿ ಮೂರು ಚಕ್ರಗಳನ್ನು ಅಳವಡಿಸಲಾಗಿದೆ.

ಸೇನೆಯಲ್ಲಿ ಕೆಲಸ:
ಭಾರತೀಯ ವಾಯುಪಡೆಯು ಪಾಂಡಿಚೇರಿಯಲ್ಲಿ ಹರ್‌ಪ್ರೀತ್‌ಗೆ ಪ್ಯಾರಾ ಮೋಟಾರ್ ಪೈಲಟ್ ಹುದ್ದೆ ನೀಡಿದೆ. ಸದ್ಯ ಅವರು ಪ್ರವಾಸಿಗರನ್ನು ಆಕಾಶದಲ್ಲಿ ವಿಹಾರಕ್ಕೆ ಕರೆದೊಯ್ಯುತ್ತಾರೆ. ತಮ್ಮ ಸ್ಥಳೀಯ ಜನರಿಗಾಗಿ ಎರಡು ಸೀಟಿನ ಪ್ಯಾರಾಮೋಟರ್ ಗ್ಲೈಡರ್ ಅನ್ನು ತಯಾರಿಸಿ ಅದರಲ್ಲಿ ಹಾರಾಟ ನಡೆಸುವುದು ಹರ್‌ಪ್ರೀತ್ ಅವರ ಕನಸಾಗಿದೆ. ಇದಕ್ಕಾಗಿ ಸತತ ಪ್ರಯತ್ನದಲ್ಲಿರುವ ಅವರು, ಶ್ರೀಮಂತರಷ್ಟೇ ಅಲ್ಲದೇ ಬಡವರೆಲ್ಲರೂ ಆಕಾಶದಲ್ಲಿ ಸವಾರಿ ಮಾಡುವುದು ನನ್ನ ಆಸೆಯಾಗಿದೆ ಎನ್ನುತ್ತಾರೆ.
ನನ್ನ ಬಡತನವೇ ನನ್ನ ಆಯುಧ:
ಆರ್ಥಿಕವಾಗಿ ಹಿಂದುಳಿದಿದ್ದ ಹರ್‌ಪ್ರೀತ್ ಕುಟುಂಬವು ಆತನ ಬಾಲ್ಯವನ್ನು ಬಡತನದಲ್ಲಿಯೇ ಕಳೆಯುವಂತೆ ಮಾಡಿತ್ತು. ತಂದೆಯ ಮರಣದ ನಂತರ, ಕುಟುಂಬವು ಇನ್ನೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಈ ಕಷ್ಟಗಳ ನಡುವೆಯೂ ಹರ್‌ಪ್ರೀತ್ ಎಂದೂ ಕುಗ್ಗದೇ ಸೈಕಲ್ ರಿಪೇರಿ ಕೆಲಸ ಮಾಡಲು ಆರಂಭಿಸಿದ್ದರು. ಇದನ್ನು ಮಾಡುತ್ತಲೇ ಏನಾದರು ದೊಡ್ಡ ಸಾಧನೆ ಮಾಡುವ ಹಂಬಲವೂ ಆತನಲ್ಲಿತ್ತು. ವಿಮಾನವೇರಿ ಪೈಲೆಟ್ ಆಗುವ ಕನಸು, ಆದರೆ ಬಡತನದಿಂದ ಉನ್ನತ ಶಿಕ್ಷಣ ಪಡೆಯಲಾಗಲಿಲ್ಲ.

ಬಾಲ್ಯದಿಂದಲೂ ಪೈಲಟ್ ಆಗುವ ಕನಸು:
ಸೈಕಲ್ ರಿಪೇರಿ ಮಾಡುತ್ತಾ ಮೂರು ವರ್ಷಗಳ ಸತತ ಪರಿಶ್ರಮದ ನಂತರ ಪ್ಯಾರಾಮೋಟರ್ ಗ್ಲೈಡರ್ ತಯಾರಿಸಿದರು. ಇದನ್ನು ತಯಾರಿಸಲು ಸುಮಾರು 2.5 ಲಕ್ಷ ರೂ. ವೆಚ್ಚವಾಗಿದೆ ಎಂದು ಹರ್‌ಪ್ರೀತ್ ಹೇಳಿಕೊಂಡಿದ್ದಾರೆ. ಆಕಾಶದಲ್ಲಿ ಹಾರಬಲ್ಲ ಮೋಟಾರ್ ಸೈಕಲ್ ಇಂಜಿನ್ ಅಳವಡಿಸಿ ಪ್ಯಾರಾಮೋಟರ್ ಗ್ಲೈಡರ್ ತಯಾರಿಸಿದ್ದಾರೆ. ಸೇನೆಯಿಂದ ತರಬೇತಿ ಪಡೆದು ಕಡಿಮೆ ವೆಚ್ಚದಲ್ಲಿ ಈ ಪ್ಯಾರಾಮೋಟರ್ ಗ್ಲೈಡರ್ ಸಿದ್ಧಪಡಿಸಿದ್ದಾರೆ. ಈಗ ಪೈಲೆಟ್ ಆಗುವ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications