10 ಕೋಟಿಯ ಐಷಾರಾಮಿ 'ರೋಲ್ಸ್ ರಾಯ್ಸ್' ಕಾರು ಖರೀದಿಸಿದ ಡಿ-ಬಾಸ್ ಸಿನಿಮಾ ನಟಿ!

ಊರ್ವಶಿ ರೌಟೇಲಾ (Urvashi Rautela) ಜನಪ್ರಿಯ ನಟಿಯಾಗಿದ್ದು, ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ 'ಐರಾವತ' ಸಿನಿಮಾದಲ್ಲಿ ನಾಯಕ ನಟಿಯೂ ಆಗಿದ್ದರು. ಊರ್ವಶಿ ರೌಟೇಲಾ ಕನ್ನಡ ಮಾತ್ರವಲ್ಲದೆ, ಹಿಂದಿ, ಬೆಂಗಾಲಿ, ತಮಿಳು ಹಾಗೂ ತೆಲುಗು ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಸಿನಿಮಾದಲ್ಲೂ ಊರ್ವಶಿ ರೌಟೇಲಾ ನಟಿಸಿದ್ದು, ಹಾಡೊಂದಕ್ಕೆ ಸಖತ್ ಸ್ಟೆಪ್ಸ್ ಹಾಕಿದ್ದರು. ಅದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಹಲ್‌ಚಲ್ ಸೃಷ್ಟಿಸಿತ್ತು.

ಇತ್ತೀಚೆಗೆ, ನಟಿ ಊರ್ವಶಿ ರೌಟೇಲಾ ಹೊಚ್ಚ ಹೊಸ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕುಲ್ಲಿನನ್ (Rolls Royce Cullinan) ಕಾರನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಈ ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಆದರೆ ಊರ್ವಶಿ ರೌಟೇಲಾ ಸ್ವತಃ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೂತನ ರೋಲ್ಸ್ ರಾಯ್ಸ್ ಕಾರಿನಿಂದ ಇಳಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

D Boss Darshan Film Actor Urvashi Rautela Buys Rolls Royce Cullinan Car Details

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಸ ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರು, ರೂ.10.50 ಕೋಟಿಯಿಂದ ರೂ.12.25 ಕೋಟಿ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಆಂಥ್ರಾಸೈಟ್, ಜುಬಿಲಿ ಸಿಲ್ವರ್, ಬ್ಲ್ಯಾಕ್ ಡೈಮಂಡ್, ಡಾರ್ಕ್ ಟಂಗ್‌ಸ್ಟನ್ ಹಾಗೂ ಟೆಂಪೆಸ್ಟ್ ಗ್ರೇ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಇದರಲ್ಲಿ 5 ಮಂದಿ ಸುಲಭಗಾಗಿ ಓಡಾಟ ನಡೆಸಬಹುದು.

ಈ ಕಾರು 6750 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 5000 ಆರ್‌ಪಿಎಂನಲ್ಲಿ 563 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 1600 ಆರ್‌ಪಿಎಂನಲ್ಲಿ 850 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದ್ದು, 6.6 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.

D Boss Darshan Film Actor Urvashi Rautela Buys Rolls Royce Cullinan Car Details

ನೂತನ ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಸ್ಟೀರಿಂಗ್, ಏರ್ ಕಂಡಿಷನರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, 8-ಏರ್‌ಬ್ಯಾಗ್‌ಗಳು ಹಾಗೂ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ನಟಿ ಊರ್ವಶಿ ರೌಟೇಲಾ ಹಲವು ದುಬಾರಿ ಬೆಲೆಯ ಕಾರುಗಳ ಒಡತಿಯೂ ಆಗಿದ್ದಾರೆ. ಅವರ ಬಳಿ ಭಾರೀ ಮೌಲ್ಯದ ಲಂಬೋರ್ಘಿನಿ ಅವೆಂಟಡಾರ್ (Lamborghini Aventador) ಕಾರು ಸಹ ಇದೆ. ಆದರೆ, ಈ ಕಾರಿನ ಮಾರಾಟವನ್ನು ದೇಶೀಯವಾಗಿ ಸ್ಥಗಿತಗೊಳಿಸಲಾಗಿದೆ. ಇದು ರೂ.5.01 ರಿಂದ ರೂ.9 ಕೋಟಿ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿತ್ತು.

ಊರ್ವಶಿ ರೌಟೇಲಾ ಈ ಲಂಬೋರ್ಘಿನಿ ಅವೆಂಟಡಾರ್ ಕಾರು ಮಾತ್ರವಲ್ಲದೆ, ಬಿಎಂಡಬ್ಲ್ಯು 7 ಸೀರೀಸ್, (ರೂ.1.84 ರಿಂದ 1.87 ಕೋಟಿ), ಫೆರಾರಿ ಪೋರ್ಟೊಫಿನೊ (ರೂ.3.50 ಕೋಟಿ) ಹಾಗೂ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ (ರೂ.1.71 ಕೋಟಿ) ಸೇರಿದಂತೆ ಹಲವು ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಇದು ನಟಿಗಿರುವ ವಾಹನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 10, 2025, 22:35 [IST]
English summary
D boss darshan film actor urvashi rautela buys rolls royce cullinan car details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+