ಟಿವಿಎಸ್‌ ಎಕ್ಸ್‌ಎಲ್‌ ಇನ್ನೂ ಮರೆಯದ ಡಾಲಿ: ಹುಡುಗರ ಫಸ್ಟ್‌ ಲವ್‌ ಯಾವತ್ತಿದ್ದರೂ ಅಜರಾಮರವೇ

ಡಾಲಿ ಧನಂಜಯ್‌ (Daily Dhananjay ) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಷ್ಟಪಟ್ಟು ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ ಎಂದು ಹೇಳಲು ಧನಂಜಯ್‌ಗಿಂತ ಬೇರೆ ಉದಾಹರಣೆ ಬೇಕಿಲ್ಲ. ಟಿವಿಎಸ್‌ ಎಕ್ಸ್‌ಎಲ್‌ ಸೂಪರ್‌ ಎಂಬ ಪುಟ್ಟ ಬೈಕ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಧನಂಜಯ್‌ ಇಂದು ಕೋಟಿ ಬೆಲೆಬಾಳುವ ಕಾರುಗಳ ಒಡೆಯ.

ಹೌದು, 2013 ರಲ್ಲಿ ಡೈರೆಕ್ಟರ್‌ ಸ್ಪೆಷಲ್‌ ಎಂಬ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಾಗ ಧನಂಜಯ್‌ ಬಳಿ ಇದ್ದದ್ದು ಟಿವಿಎಸ್‌ ಕಂಪನಿಯ ಪುಟ್ಟ ದ್ವಿಚಕ್ರ ವಾಹನವಾದಂತಹ ಎಕ್ಸ್‌ಎಲ್‌ ಸೂಪರ್‌ ಎಂಬ ಮೊಪೆಡ್. ಅದಾದ ಬಳಿಕ ಸಮಯ ಕಳೆದಂತೆ ಧನಂಜಯ್‌ ಒಂದೊಂದೇ ಐಷಾರಾಮಿ ಕಾರುಗಳನ್ನು ಕೊಳ್ಳಲು ಆರಂಭಿಸಿದರು.

Daali Dhananjay’s First Motorcycle TVS XL Super

ಮನುಷ್ಯ ಎಷ್ಟೇ ದೊಡ್ಡವನಾದರೂ ತಾನು ಬಂದ ಹಾದಿಯನ್ನು ಮರೆತಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ರೇಂಜ್‌ ರೋವರ್‌ ಕಂಪನಿಯ ಐಷಾರಾಮಿ ಇವೋಕ್ ಎಸ್‌ಯುವಿಯನ್ನು ಖರೀದಿಸಿದಾಗಲೂ ತನ್ನ ಹಳೆಯ ಟಿವಿಎಸ್‌ ಎಕ್ಸ್‌ಎಲ್‌ ಸೂಪರ್ ಅನ್ನು ಮರೆತಿರಲಿಲ್ಲ. ಇದಕ್ಕೆ ವಾಹನ ಪೂಜೆ ಸಂಧರ್ಭದ ಫೋಟೋ ಸಾಕ್ಷಿ.

ತನ್ನ ಹೊಸ ರೇಂಜ್‌ ರೋವರ್‌ ಇವೋಕನ್ನು ಪೂಜೆ ಮಾಡಿಸುವಾಗ ಪಕ್ಕದಲ್ಲೇ ತನ್ನ ನೆಚ್ಚಿನ ಟಿವಿಎಸ್‌ ಎಕ್ಸ್‌ಎಲ್‌ ಸೂಪರ್‌ ಅನ್ನು ಸಹ ಪಕ್ಕದಲ್ಲಿ ನಿಲ್ಲಿಸಿ, ಅದಕ್ಕೂ ಪೂಜೆ ಮಾಡಿ ಅದರ ಜೊತೆ ನಗುಮುಖದ ಫೋಟೋ ಕ್ಲಿಕ್ಕಿಸಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದು ಆ ಸಂಧರ್ಭದಲ್ಲಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗೆ ಸಾಕ್ಷಿಯಾಗಿತ್ತು.

ಟಿವಿಎಸ್‌ ಎಕ್ಸ್‌ಎಲ್‌ ಸೂಪರ್: ಸದ್ಯಕ್ಕೆ ಭಾರತದಲ್ಲಿ ಈ ಸ್ಕೂಟರ್‌ನ ಉತ್ಪಾದನೆ ನಿಲ್ಲಿಸಲಾಗಿದೆ. ಕೇವಲ 70cc ಎಂಜಿನ್‌ ಅನ್ನು ಹೊಂದಿದ್ದ ಈ ಸ್ಕೂಟರ್ ಮೂರು ಲೀಟರ್‌ನಷ್ಟು ಸಾಮರ್ಥ್ಯ ಹೊಂದಿದ್ದ ಪೆಟ್ರೋಲ್‌ ಟ್ಯಾಂಕನ್ನು ಹೊಂದಿತ್ತು. ಜೊತೆಗೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮೆಷಿನ್‌ ಅನ್ನು ಹೊಂದಿದ್ದು, ಇದರ ತೂಕ ಸುಮಾರು 66 ಕಿಲೋ ಗ್ರಾಂನಷ್ಟು ಇತ್ತು.

ದಿನ ನಿತ್ಯದ ಬಳಕೆಗೆ ಟಿವಿಎಸ್ ಸ್ಕೂಟರ್‌ ಹೇಳಿ ಮಾಡಿಸಿದ್ದಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ರೈತರ ಮತ್ತು ಕೆಳ ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ಮೊಪೆಡ್ ಆಗಿದ್ದ ಇದು ಅಗತ್ಯದ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಧಿಸಲು ಹೆಚ್ಚು ಸಹಕಾರಿಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಇಂದು ಡಾಲಿ ಧನಂಜಯ್‌ ಬಳಿ ಹಲವಾರು ಐಷಾರಾಮಿ ಕಾರುಗಳಿದೆ. ಅದರಲ್ಲಿ ಮಹೀಂದ್ರಾ ಎಕ್ಸ್‌ಯುವಿ, ಟೊಯೋಟಾ ಫಾರ್ಚ್ಯುನರ್‌, ರೇಂಜ್‌ರೋವರ್‌ ಇವೋಕ್ ಹಾಗೂ ಇತ್ತೀಚೆಗೆ ಸ್ಯಾಂಡಲ್‌ವುಡ್‌ಗೆ ಬಂದು 10 ವರ್ಷವಾದ ಹಿನ್ನಲೆಯಲ್ಲಿ ಡಾಲಿ ಧನಂಜಯ್‌ಗೆ ಚಿತ್ರ ನಿರ್ಮಾಪಕರೊಬ್ಬರು ಕೊಟ್ಟ ಟೊಯೋಟಾ ಕಂಪನಿಯ ವೆಲ್‌ಫೀರ್‌ ಕಾರುಗಳು ಪ್ರಮುಖವಾದವು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 9, 2023, 11:12 [IST]
English summary
Daali dhananjay s first motorcycle was tvs xl super
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+