ಸಕತ್ ಬ್ಯೂಟಿ ಡೈಮ್ಲರ್ ಸ್ವಯಂಚಾಲಿತ ಟ್ರಕ್
ವಾಹನೋದ್ಯಮದಲ್ಲಿ ಸದಾ ನಾವೀನ್ಯತೆಗೆ ಸಾಕ್ಷಿಯಾಗಿರುವ ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಡೈಮ್ಲರ್ ನೂತನ ಸ್ವಯಂಚಾಲಿತ ಸೆಮಿ ಟ್ರಕ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
ಜಗತ್ತಿನೆಲ್ಲ ಮುಂಚೂಣಿಯ ಸಂಸ್ಥೆಗಳು ಭವಿಷ್ಯದ ವಾಹನಗಳನ್ನು ಅಭಿವೃದ್ಧಪಡಿಸುವದರಲ್ಲಿ ತಲ್ಲೀನವಾಗಿರುವ ಇದೇ ಹೊತ್ತಿನಲ್ಲಿ ಬೆಂಝ್ ಐಷಾರಾಮಿ ಟ್ರಕ್ ವಿಶಿಷ್ಟತೆಗೆ ಕಾರಣವಾಗಿದೆ.

ವಾಹನೋದ್ಯಮದ ಕ್ರಾಂತಿಕಾರಿ ತಂತ್ರಗಾರಿಕೆಯ ಭಾಗವಾಗಿ ಡೈಮ್ಲರ್ ಟ್ರಕ್ ಆಗಮನವಾಗಲಿದೆ. ಇದು ನೈಜ ಜಗತ್ತಿನಲ್ಲಿ ದೊಡ್ಡ ಪರಿಣಾಮವನ್ನೇ ಉಂಟು ಮಾಡಲಿದೆ ಎಂದು ನಂಬಲಾಗಿದೆ.

ಲಾಸ್ ವೇಗಾಸ್ ನ ಹೆದ್ದಾರಿಯಲ್ಲಿ ಈ 18 ಚಕ್ರಗಳ ದೈತ್ಯಕಾರಾದ ಡೈಮ್ಲರ್ ಟ್ರಕ್ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ಇದು ಜಗತ್ತಿನ ಮೊದಲ ರಸ್ತೆ ಸುರಕ್ಷಾ ಸ್ವಯಂಚಾಲಿತ ಟ್ರಕ್ ಆಗಿರಲಿದೆ. ಅಲ್ಲದೆ ಹೈವೇ ಪೈಲಟ್ ವ್ಯವಸ್ಥೆಯನ್ನು ಇದರಲ್ಲಿ ಅನುಸರಿಸಲಾಗಿದೆ.

ಮರ್ಸಿಡಿಸ್ ಫ್ಯೂಚರ್ ಟ್ರಕ್ 2025 ಭಾಗವಾಗಿ ಸೆಲ್ಪ್ ಡ್ರೈವಿಂಗ್ ಟ್ರಕ್ ಗಳು ಅಭಿವೃದ್ಧಿಯಾಗುತ್ತಿದೆ. ಇವೆಲ್ಲವೂ ಟ್ರಕ್ ತಂತ್ರಜ್ಞಾನಕ್ಕೆ ಹೊಸ ಆಯಾಮವನ್ನು ತರಲಿದೆ.

ಅಮೆರಿಕದಲ್ಲಿ ಶೇಕಡಾ 40ರಷ್ಟು ಟ್ರಕ್ ಮಾರುಕಟ್ಟೆಯನ್ನು ಡೈಮ್ಲರ್ ಟ್ರಕ್ಸ್ ಆಕ್ರಮಿಸಿಕೊಂಡಿದೆ. ಅಲ್ಲದೆ ಭವಿಷ್ಯದಲ್ಲೂ ತನ್ನ ಬದ್ಧತೆಯನ್ನು ಪ್ರದರ್ಶಿಸುವಲ್ಲಿ ತಲ್ಲೀನವಾಗಿದೆ.

ಪ್ರಸ್ತುತ ಸೆಲ್ಪ್ ಡ್ರೈವಿಂಗ್ ಟ್ರಕ್ ಗಳು ಪರೀಕ್ಷೆಯ ಕಾಲಘಟ್ಟದಲ್ಲಿದೆ. ಅಲ್ಲದೆ ಹೆದ್ದಾರಿ ಪಯಣದಲ್ಲಿ ಟ್ರಕ್ ನೂತನ ತಂತ್ರಜ್ಞಾನವು ಸ್ಪೂರ್ತಿದಾಯಕವಾಗಿದೆ.

ಇದಕ್ಕಾಗಿ ವಿಶೇಷ ರೀತಿಯ ಕ್ಯಾಮೆರಾ, ಸೆನ್ಸಾರ್ ಗಳನ್ನು ಆಳವಡಿಸಲಾಗಿದೆ. ಇನ್ನು ಸಂಪೂರ್ಣ ಎಲ್ ಇಡಿ ಜೊತೆಗೆ ಕನೆಕ್ಟಿವಿಟಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಡೈಮ್ಲರ್ ಟ್ರಕ್ ಗೆ ವೇಗ ನಿಯಂತ್ರಣ, ಜಿಪಿಎಸ್ ಮುಂತಾದ ವ್ಯವಸ್ಥೆಗಳನ್ನು ಲಗತ್ತಿಸಲಾಗಿದೆ. ಒಟ್ಟಿನಲ್ಲಿ ನಾವೀನ್ಯತೆಗೆ ಕಾರಣವಾಗಿದೆ.


Click it and Unblock the Notifications








