ಮಂಗಳೂರು: ಗೃಹಲಕ್ಷ್ಮಿ ದುಡ್ಡು ಕೂಡಿಟ್ಟು ಗಂಡನಿಗೆ ಹೊಸ 'ಹೋಂಡಾ' ಸ್ಕೂಟರ್ ಕೊಡಿಸಿದ ಹೆಂಡತಿ.. ಸನ್ಮಾನ!

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ (GruhaLakshmi) ಕೂಡ ಪ್ರಮುಖವಾಗಿದೆ. ಲಕ್ಷಾಂತರ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ ರೂ.2,000 ಜಮೆ ಮಾಡುತ್ತದೆ. ಈ ಹಣವನ್ನು ಮಹಿಳೆಯರು, ಉತ್ತಮವಾಗಿಯೇ ಸದ್ಬಳಕೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ, ಮಹಿಳೆಯೊಬ್ಬರು ಇದೇ ದುಡ್ಡಲ್ಲಿ ಫ್ರಿಡ್ಜ್ ಕೊಂಡುಕೊಂಡಿದ್ದರು. ಅಕ್ಟೋಬರ್‌ನಲ್ಲಿ ಬೆಳಗಾವಿ ಮಹಿಳೆಯೊಬ್ಬರು ತಮ್ಮ ಮಗನಿಗೆ ಹೊಸ ಹೋಂಡಾ ಮೋಟಾರ್‌ಸೈಕಲ್ ಖರೀದಿಸಲು, ಗೃಹಲಕ್ಷ್ಮಿ ಹಣವನ್ನು ಮುಂಗಡವಾಗಿ ಪಾವತಿಸಿದ್ದರು.

ಸದ್ಯ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ‌ ಶಾಂತಿನಗರದ ಮಿಸ್ರಿಯಾ ಎಂಬುವರು ತಮ್ಮ ಪತಿ ಸಲೀಂಗೆ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಹೋಂಡಾ ಡಿಯೋ 125 ಸ್ಕೂಟರ್‌ನ್ನು ಕೂಡಿಸಿದ್ದಾರೆ. ಸಲೀಂ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ದೂರದ ಊರುಗಳಿಗೆ ಕೆಲಸಕ್ಕೆ ಹೋಗಲು ಕಷ್ಟಪಡುತ್ತಿದ್ದರು. ಇದನ್ನು ಕಣ್ಣಾರೆ ಕಂಡಿದ್ದ ಪತ್ನಿ ಮಿಸ್ರಿಯಾ ತಮ್ಮ ಗೃಹಲಕ್ಷ್ಮಿ ಹಣದಿಂದ ಪತಿಗೆ ಸಹಾಯ ಮಾಡಿದ್ದಾರೆ.

Dakshina Kannada Gruhalakshmi Scheme Money Wife Gifts Husband Honda Dio 125 Scooter Details

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ 'ತನ್ನ ಹೆಂಡತಿ ಕೂಡಿಟ್ಟ ಗೃಹಲಕ್ಷ್ಮಿ ಹಣದಿಂದ ಸ್ಕೂಟರ್ ಖರೀದಿಸಿದ ಕೋಡಿಂಬಾಡಿ‌ ಶಾಂತಿನಗರ ನಿವಾಸಿ ಸಲೀಂ ಅವರನ್ನು ಸನ್ಮಾನಿಸಲಾಯಿತು' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ನೂತನ ಹೋಂಡಾ ಡಿಯೋ 125 ಸ್ಕೂಟರ್‌ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ರೂ.83,850 ರಿಂದ ರೂ.91,750 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 123.92 ಸಿಸಿ ಏರ್-ಕೋಲ್ಡ್ ಫ್ಯುಯೆಲ್-ಇಂಜೆಕ್ಟ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.28 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಹೋಂಡಾ ಡಿಯೋ 125 ಸ್ಕೂಟರ್‌ 48 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸ್ಪೋರ್ಟ್ಸ್ ರೆಡ್, ಪರ್ಲ್ ನೈಟ್‌ಸ್ಟಾರ್ ಬ್ಲ್ಯಾಕ್, ಪರ್ಲ್ ಸೈರನ್ ಬ್ಲೂ ಮತ್ತು ಪರ್ಲ್ ಡೀಪ್ ಗ್ರೌಂಡ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗ (ರೇರ್) 3-ಸ್ಟೆಪ್ ಅಡ್ಜಸ್ಟಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ & ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಮುಂದೆ 90/90-12 ಅಳತೆ ಮತ್ತು ಹಿಂದೆ 90/100-10 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.

ನೂತನ ಹೋಂಡಾ ಡಿಯೋ 125 ಸ್ಕೂಟರ್‌ನ ಗ್ರೌಂಡ್ ಕ್ಲಿಯರೆನ್ಸ್ 171 ಎಂಎಂ ಮತ್ತು ಸೀಟ್ ಹೈಟ್ 708 ಎಂಎಂ ಇದೆ. 5.3 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದ್ದು, 104 ಕೆಜಿ ತೂಕವಿದೆ. ಈ ಸ್ಕೂಟರ್‌ಗೆ ಸುಜುಕಿ ಆಕ್ಸೆಸ್ 125, ಟಿವಿಎಸ್ ಜುಪಿಟರ್ 125 ಮತ್ತು ಹೀರೋ ಜೂಮ್ 125 ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಒಟ್ಟಾರೆಯಾಗಿ, ರಾಜ್ಯದಲ್ಲಿ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣವನ್ನು ಮಹಿಳೆಯರು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈಗ ದಕ್ಷಿಣ ಕನ್ನಡ ಜಿಲ್ಲೆಯ ಕೋಡಿಂಬಾಡಿ‌ಯಲ್ಲಿ ಪತಿ ಕೆಲಸಕ್ಕೆ ಹೋಗಲು ಪತ್ನಿ ಹೊಸ ಸ್ಕೂಟರ್ ಕೊಡಿಸಿರುವುದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 11, 2024, 11:56 [IST]
English summary
Dakshina kannada gruhalakshmi scheme money wife gifts husband honda dio 125 scooter details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+