ಡ್ಯಾನ್ಸ್ ಕಿಂಗ್ ವಿನೋದ್‌ರಾಜ್ ಬಳಿಯಿದೆ ಬಂಡೆಗಳ ಮೇಲೂ ನುಗ್ಗುವ ನೀವ್ಯಾರೂ ನೋಡಿರದ ‘ಚಾಲೆಂಜರ್’
ವಿನೋದ್ ರಾಜ್‌ಕುಮಾರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಚಲನ ಚಿತ್ರಗಳಲ್ಲಿ ನಟಿಸಿದ್ದಾರಾದರು, ಅವರು ನಟಿಸಿರುವ ಪಾತ್ರಗಳಿಗಿಂತ, ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿರುವುದು ಅವರ ಡ್ಯಾನ್ಸ್. ಆದರೆ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಸುದ್ದಿಮಾಡುತ್ತಿರುವುದು ಅವರ ಬಳಿಯಿರುವ ಕಾರುಗಳಿಗಿಂದ ಎಂಬುದು ಸುಳ್ಳಲ್ಲ.
ಹೌದು, ಕನ್ನಡದ ಹಲವಾರು ಮಾಧ್ಯಮಗಳು ವಿನೋದ್ ರಾಜ್ ಅವರ ಬಳಿಯಿರುವ ಕಾರುಗಳಿಗೆ ಫಿಧಾ ಆಗಿದ್ದಾರೆ. ಯೂಟ್ಯೂಬ್‌ನಲ್ಲಂತೂ ಇವರ ಕಾರುಗಳದ್ದೇ ಮಾತು. ಪ್ರತಿಯೊಂದು ವಿಡಿಯೋನ ಕಾಮೆಂಟ್ ಸೆಕ್ಷನ್‌ಗಳಲ್ಲಂತೂ ಅವರ ಕಾರುಗಳ ಕುರಿತಾಗಿನ ಮಾತುಗಳೇ. ಇಂದು ಈ ಲೇಖನದಲ್ಲಿ ವಿನೋದ್ ರಾಜ್ ಬಳಿಯಿರುವ ಪ್ರಮುಖ ಕಾರುಗಳು ಯಾವುದೆಂದು ನಾವು ತಿಳಿಸಿಕೊಡುತ್ತಿದ್ದೇವೆ.

ಮಿತ್ಸಿಬಿಷಿ ಚಾಲೆಂಜರ್: ವಿನೋದ್ ರಾಜ್ (Vinod Raj) ಬಳಿ ಇರುವ ಮೊದಲ ಪ್ರಮುಖ ಕಾರೆಂದರೆ ಈ ಮಿತ್ಸಿಬಿಷಿ ಚಾಲೆಂಜರ್. ಈ ಕಾರಿನ ಹೆಸರು ಕೇಳಿರುವವರ ಸಂಖ್ಯೆ ಬಹಳ ವಿರಳ ಎಂದೇ ಹೇಳಬಹುದು. 2.8 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುವ ಈ ಕಾರು ತನ್ನ ಆಫ್‌ರೋಡ್ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾಗಿದೆ.
4 ಸಿಲಿಂಡರ್ ಎಂಜಿನ್ ಅನ್ನು ಹೊಂದಿರುವ ಈ ಕಾರು ಗುಡ್ಡಗಾಡು ಮತ್ತು ಕಠಿಣವಾದ ರಸ್ತೆಗಳಲ್ಲಿ ನೀರು ಕುಡಿದಷ್ಟು ನಿರಾಯಾಸವಾಗಿ ಚಲಿಸುತ್ತದೆ. ವಿನೋದ್ ರಾಜ್ ಅವರ ಬಳಿ ಇರುವ ಕಾರುಗಳ ಪೈಕಿ, ಈ ಮಿತ್ಸಿಬಿಷಿ ಚಾಲೆಂಜರ್ ಅವರ ಅಚ್ಚುಮೆಚ್ಚಿನ ಕಾರಾಗಿದೆ. ತಮ್ಮ ತಾಯಿ ಮತ್ತು ಕನ್ನಡದ ಪ್ರಖ್ಯಾತ ಹಿರಿ ಕಲಾವಿದರಾಗಿರುವ ಲೀಲಾವತಿಯವರನ್ನು ಆಗಾಗ ಈ ಕಾರಿನಲ್ಲಿ ಕೂರಿಸಿಕೊಂಡು ಆಫ್‌ರೋಡ್ ಹೋಗುತ್ತಾರಂತೆ.

ಈ ಕಾರಿನಲ್ಲಿ ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಫೋರ್ ವ್ಹೀಲ್ ಡಿಫರೆನ್ಶಿಯಲ್ ಲಾಕ್ ಎಂಬ ಫೀಚರ್ ಇರುವುದರಿಂದ ಎಂತಹ ಪ್ರದೇಶದಲ್ಲಾದರೂ ಆತ್ಮವಿಶ್ವಾದಿಂದ ಓಡಿಸಲು ಸಹಕಾರಿಯಾಗಿದೆ. ಈ ಕಾರಿನ ಚಕ್ರಗಳನ್ನು ಸಹ ಬದಲಾಯಿಸಬಹುದು. ಯಾವುದಾದರೂ ಪ್ರಕೃತಿ ವಿಕೋಪ ಸಂಭವಿಸಿದಾಗ ಟ್ರ್ಯಾಕ್ಟರ್ ಚಕ್ರಗಳನ್ನೂ ಸಹ ಈ ಕಾರಿಗೆ ಅಳವಡಿಸಬಹುದು ಎನ್ನುವುದು ಇದರ ಇನ್ನೊಂದು ವಿಶೇಷ.
ಆಡಿ ಕ್ಯೂ7: ಪ್ರತಿಷ್ಟಿತ ಕಾರು ತಯಾರಿಕಾ ಕಂಪೆನಿಯಾದ ಆಡಿ ಯ, ಆಡಿ ಕ್ಯೂ7 ಎಂಬ ಕಾರ ವಿನೋದ್ ರಾಜ್ ಅವರ ಕಾರು ಕಲೆಕ್ಷನ್‌ನಲ್ಲಿ ಇದೆ. ಸದ್ಯಕ್ಕೆ ಭಾರತದಲ್ಲಿ ಜನಪ್ರಿಯತೆ ಗಳಿಸಿರುವ ಕಾರುಗಳಲ್ಲಿ ಇದೂ ಸಹ ಒಂದು. 3 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿರುವ ಈ ಕಾರು ಆಲ್ ವ್ಹೀಲ್ ಡ್ರೈವ್ ಫೀಚರನ್ನು ಸಹ ಹೊಂದಿದೆ.
ಸುಮಾರು 335 ಬಿಹೆಚ್‌ಪಿಗಳನ್ನು ಉತ್ಪಾದಿಸುವ ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಸುಮಾರು 84.74 ಲಕ್ಷದಿಂದ 92.30 ಲಕ್ಷಗಳು. ಇಷ್ಟು ಮಾತ್ರವಲ್ಲದೇ ವಿನೋದ್ ರಾಜ್ ಅವರ ಬಳಿ ಇತರ ಪ್ರಸಿದ್ದ ಕಾರುಗಳಾದಂತಹ ಟೊಯೋಟಾ ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೋ ಮುಂತಾದ ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








