ದುಬಾರಿ ಬೆಲೆಯ ಆಡಿ ಕ್ಯೂ8 ಎಸ್‍ಯುವಿ ಖರೀದಿಸಿದ ದಂಗಲ್ ನಟಿ ಸನ್ಯಾ ಮಲ್ಹೋತ್ರಾ
ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಇರುತ್ತದೆ. ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ಮೆಚ್ಚಿನ ಐಷಾರಾಮಿ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸುತ್ತಾರೆ.

ಆಡಿ ಕ್ಯೂ8 ಯಾವಾಗಲೂ ಸೆಲೆಬ್ರಿಟಿಗಳೊಂದಿಗೆ ಜನಪ್ರಿಯವಾಗಿದೆ, ದಂಗಲ್ ಚಿತ್ರ ಖ್ಯಾತಿಯ ನಟಿ ಸನ್ಯಾ ಮಲ್ಹೋತ್ರಾ ಹೊಸ ಆಡಿ ಕ್ಯೂ8 ಎಸ್‍ಯುವಿಯನ್ನು ಖರೀ ನಟ ಆಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದಲ್ಲಿ ಆಮೀರ್ ಖಾನ್ ಮಗಳ ಪಾತ್ರದ ಮೂಲಕ ಸಾನ್ಯಾ ಮಲ್ಹೋತ್ರಾ ಹೆಚ್ಚು ಜನಪ್ರಿಯತೆಗಳನ್ನು ಗಳಿಸಿದ್ದರು. ಇತ್ತೀಚೆಗೆ ಸನ್ಯಾ ಮಲ್ಹೋತ್ರಾ ಲವ್ ಹಾಸ್ಟೆಲ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅವರೊಂದಿಗೆ ಬಾಬಿ ಡಿಯೋಲ್ ಮತ್ತು ವಿಕ್ರಾಂತ್ ಮಾಸ್ಸೆ ಕೂಡ ಕಾಣಿಸಿಕೊಂಡಿದ್ದರು. ಇದಲ್ಲದೆ, ಅವರು ಹಿಟ್ ದಿ ಫಸ್ಟ್ ಕೇಸ್‌ನಲ್ಲಿ ರಾಜ್‌ಕುಮಾರ್ ರಾವ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

ನಟಿ ಸನ್ಯಾ ಮಲ್ಹೋತ್ರಾ ಖರೀದಿಸಿದ ಆಡಿ ಕ್ಯೂ8 ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯು ಸೆಲೆಬ್ರೇಶನ್ ಮತ್ತು ಸ್ಟ್ಯಾಂಡರ್ಡ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ರೂಪಾಂತರಗಳ ಬೆಲೆಗಳು ಕ್ರಮವಾಗಿ ರೂ.1.03 ಕೋಟಿ ಮತ್ತು ರೂ.1.38 ಕೋಟಿಯಾಗಿದೆ. ಈ ಬೆಲೆಗಳು ಭಾರತದ ಎಕ್ಸ್ ಶೊರೂಂ ಪ್ರಕಾರವಾಗಿದೆ.

ಆಡಿ ಕ್ಯೂ8 ಎಸ್‍ಯುವಿ ವೈಶಿಷ್ಟ್ಯಗಳ ಹೋಸ್ಟ್ ಅನ್ನು ಪ್ಯಾಕ್ ಮಾಡುತ್ತದೆ, ಆರಾಮದಾಯಕ ಹಿಂಬದಿಯ ಸೀಟ್ ಮತ್ತು ಪ್ರಬಲವಾದ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು ಅದು ಜಾಗತಿಕವಾಗಿ ಮತ್ತು ಭಾರತದಲ್ಲಿ ಮಾಲೀಕರಲ್ಲಿ ಜನಪ್ರಿಯವಾಗಿದೆ.

ಈ ಆಡಿ ಕ್ಯೂ8 ಕಂಪನಿಯ ಪೋರ್ಟ್ಪೋಲಿಯೊದಲ್ಲಿ ಕ್ಯೂ7 ಎಸ್‍ಯುವಿಗಿಂತ ಮೇಲೆನ ಸ್ಥಾನದಲ್ಲಿರುತ್ತದೆ. ಕ್ಯೂ7 ಎಸ್‍ಯುವಿಗೆ ಹೋಲಿಸಿದರೆ Q8 ಹೆಚ್ಚಿನ ಫೀಚರ್ಸ್‍ಗಳನ್ನು ಹೊಂದಿದೆ. ಹೊಸ ಕ್ಯೂ8 ಮುಂಭಾಗದಲ್ಲಿ ಆಕರ್ಷಕ ದೊಡ್ಡ ಗ್ರಿಲ್ ಅನ್ನು ಹೊಂದಿದ್ದು, ಇದರ ಸುತ್ತಲೂ ಸಿಲ್ವರ್ ಅಸೆಂಟ್‍ಗಳನ್ನು ಅಳವಡಿಸಲಾಗಿದೆ.

ಇನ್ನೂ ಪೂರ್ಣ ಪ್ರಮಾಣದ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಬ್ರ್ಯಾಂಡ್‍ನ ಮ್ಯಾಟ್ರಿಕ್ಸ್ ಎಲ್‍ಇಡಿ ಯುನಿಟ್‍ಗಳಿವೆ. ಜೊತೆಗೆ 21 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಈ ಆಡಿ ಕ್ಯೂ8 ಎಸ್‍ಯುವಿಯು ಆಕರ್ಷಕ ಮತ್ತು ಲಕ್ಷುರಿ ಲುಕ್ ಅನ್ನು ಹೊಂದಿದೆ.

ಈ ಆಡಿ ಕ್ಯೂ8 ಎಸ್‍ಯುವಿಯಲ್ಲಿ 3.0 ಬಿಎಸ್-6 ಟಿಎಫ್‍ಎಸ್‍ಐ 48 ವಿ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ ಮತ್ತು ಕಂಪನಿಯ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಅನ್ನು ಅಳವಡಿಸಲಾಗಿದೆ.

ಈ ಕ್ಯೂ8 ಎಸ್‍ಯುವಿಯು ಕೇವಲ 5.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಆಡಿ ಕ್ಯೂ8 ಎಸ್‍ಯುವಿಯು ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ Q8 ಎಸ್‍ಯುವಿ ಮೂರು ಝೋನ್ ಕ್ಲೈಮೆಂಟ್ ಕಂಟ್ರೋಲ್, ರೇರ್ ವೀವ್ ಮಿರರ್, ಡಿಜಿಟಲ್ ಕಂಪಾಸ್, ಪನಾರೋಮಿಕ್ ಸನ್‍ರೂಫ್, ಹೊಂದಾಣಿಕೆ ಮಾಡಬಹುದಾದ ಪವರ್ ಫ್ರಂಟ್ ಸೀಟ್‍ಗಳನ್ನು ಹೊಂದಿದೆ.

ಇನ್ನು ಇನ್ಫೋಟೇನ್‍ಮೆಂಟ್ ಮೋಡ್‍ಗಳಲ್ಲಿ ಕಾರ್ಯನಿರ್ವಹಿಸುವ 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನಿತರ ಅತ್ಯಾಧುನಿಕ ಫೀಚರ್ಸ್‍ಗಳನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಫೀಚರ್ಸ್‍ಗಳನ್ನು ಹೊಂದಿದೆ,

ಇದರಲ್ಲಿ ಸುರಕ್ಷತೆಗಾಗಿ, ಆರು - ಏರ್‍ಬ್ಯಾಗ್‍ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಎಬಿಎಸ್ ನೊಂದಿಗೆ ಇಬಿಡಿ, ಟಯರ್ ಫ್ರಶರ್ ಮ್ಯಾನೇಜ್‍ಮೆಂಟ್ ಸಿಸ್ಟಂ, ಎಲೆಕ್ಟ್ರೊ ಮ್ಯಾಗ್ನೆಟಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೋವರ್ ಆಂಕರ್‍ಗಳನ್ನು ಅಳವಡಿಸಲಾಗಿದೆ.

ಇನ್ನು ಆಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ 2022ರ ಆಡಿ ಎ8 ಎಲ್ ಸೆಡಾನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಈ ವರ್ಷ ಬಿಡುಗಡೆಯಾಗುವ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿದೆ. ಕಂಪನಿಯು ಅಧಿಕೃತವಾಗಿ 2022ರ ಆಡಿ ಎ8 ಎಲ್ ಸೆಡಾನ್ ಖರೀದಿಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಆಸಕ್ತ ಖರೀದಿದಾರರು ರೂ. 10 ಲಕ್ಷ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಈ ಐಷಾರಾಮಿ ಸೆಡಾನ್ ಅನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ನಲ್ಲಿ ಮುಂಗಡವಾಗಿ ಬುಕ್ ಮಾಡಬಹುದು.

2022ರ ಆಡಿ ಎ8 ಎಲ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಹೊಸ ಆಡಿ ಎ8 ಎಲ್ ಜೊತೆಗೆ, ನಾವು ನಮ್ಮ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಪ್ರಮುಖ ಕಾರುಗಳ ಮೇಲೆ ನಮ್ಮ ಗಮನವನ್ನು ಮುಂದುವರಿಸುತ್ತಿದ್ದೇವೆ, ಏಕೆಂದರೆ ನಾವು ಉತ್ತಮ ಬೇಡಿಕೆಯನ್ನು ವೀಕ್ಷಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. 2022ರ ಆಡಿ ಎ8 ಎಲ್ ಸೆಡಾನ್ ದೊಡ್ಡದಾದ ಗ್ರಿಲ್ ಮತ್ತು ಹೆಚ್ಚು ಅಗ್ರೇಸಿವ್ ಮೆಶ್ ಮಾದರಿ ಮತ್ತು ದಪ್ಪವಾದ ಬಂಪರ್ ಅನ್ನು ಒಳಗೊಂಡಿರುವ ಸ್ಪೋರ್ಟಿ ನಿಲುವುಗಳೊಂದಿಗೆ ಬರುತ್ತದೆ.

ಆಡಿ ಕಾರುಗಳಿಗೆ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಾರುಗಳು ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸಲು Q8 ಹೆಚ್ಚಿನ ಸಹಾಯವಾಗುತ್ತಿದೆ. ಈ ಆಡಿ ಕ್ಯೂ8 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್, ಪೋರ್ಷೆ ಕೇನ್, ಬಿಎಂಡಬ್ಲ್ಯು ಎಕ್ಸ್ 7 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications