ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan ) ಬಗ್ಗೆ ಕನ್ನಡಿಗರಿಗೆ ಪರಿಚಯದ ಅಗತ್ಯವಿಲ್ಲ. ಕಾಟೇರಾ ಸಿನಿಮಾ ಯಶಸ್ಸಿನ ಬಳಿಕ ದರ್ಶನ್ ಪ್ರಕಾಶ್ ವೀರ್ ನಿರ್ದೇಶನದ ಅವರ ಡೆವಿಲ್ - ದಿ ಹೀರೋ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ. ಪ್ರತಿಭಾವಂತ ನಟ ದರ್ಶನ್ ಸಿನಿಮಾಗಳಷ್ಟೇ ಕಾರುಗಳನ್ನು ಇಷ್ಟಪಡುತ್ತಾರೆ. ದರ್ಶನ್ ಬಳಿ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಲ್ಯಾಂಡ್ ರೋವರ್ ಡಿಫೆಂಡರ್, ಜಾಗ್ವಾರ್, ಪೋರ್ಶೆ, ಆಡಿ ಕ್ಯೂ 7, ರೇಂಜ್ ರೋವರ್, ಮಿನಿ ಕೂಪರ್, ಹಮ್ಮರ್, ಲಂಬೋರ್ಗಿನಿ, ಫಾರ್ಚೂನರ್ , ಜೀಪ್ ಮತ್ತು ಬಿಎಂಡಬ್ಲ್ಯೂ ಕಾರುಗಳನ್ನು ಹೊಂದಿದ್ದಾರೆ. ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ (vijayalakshmi) ಅವರು ಹೊಸ ಐಷಾರಾಮಿ ರೇಂಜ್ ರೋವರ್ ಇವೊಕ್ ಕಾರನ್ನು ಖರೀದಿಸಿದ್ದಾರೆ.

Darshan wife vijayalakshmi Range Rover Evoque

ವಿಜಯಲಕ್ಷ್ಮೀ ಅವರು ಹೊಸ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರನ್ನು ವಿತರಣೆ ಪಡೆಯುವ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಜಯಲಕ್ಷ್ಮೀ ಅವರಿಗೆ ಅಭಿಮಾನಿಗಳು ಕಂಗ್ರ್ಯಾಟ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಬೆಲೆಯ ಬಗ್ಗೆ ಎಂಜಿನ್ ಮಾಹಿತಿ ಇಲ್ಲಿದೆ.

ವಿನ್ಯಾಸ: JLR ನ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಆಲ್ - ವೀಲ್ ಡ್ರೈವ್ ಸ್ಟ್ಯಾಂಡರ್ಡ್ ಆಗಿದೆ. ಬಾಹ್ಯ ನವೀಕರಣಗಳು ತೀರಾ ಕಡಿಮೆಯಿದ್ದು - ದೊಡ್ಡ ರೇಂಜ್ ರೋವರ್‌ಗಳಂತೆಯೇ ವಿವರವಾಗಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಮರುವಿನ್ಯಾಸಗೊಳಿಸಲಾದ LED ರನ್ನಿಂಗ್ ಲ್ಯಾಂಪ್ ಸಿಗ್ನೇಚರ್‌ಗಳೊಂದಿಗೆ ಹೊಸ ಸೂಪರ್ - ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು, ಹೊಸ ರೆಡ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಅಲಾಯ್ ವೀಲ್‌ಗಳಿಗೆ ಹೊಸ ಟ್ವಿನ್ 10 ಸ್ಪೋಕ್ ವಿನ್ಯಾಸವಿದೆ.

Actor Darshan wife vijayalakshmi Range Rover Evoque

ಇಂಟೀರಿಯರ್: ರೇಂಜ್ ರೋವರ್ ಇವೊಕ್ ಇಂಟೀರಿಯರ್‌ನಲ್ಲಿ ವಿಂಡ್ಸರ್ ಲೆದರ್ ಸೀಟುಗಳು, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟ್‌ಗಳು, ಕಸ್ಟಮೈಸ್ ಕ್ಯಾಬಿನ್ ಲೈಟಿಂಗ್ ಮತ್ತು ವಿಸ್ತರಿತ ಆಂತರಿಕ ಸ್ಥಳವನ್ನು ಹೊಂದಿದೆ. ಐದು ಸೀಟುಗಳ ಎಸ್‌ಯುವಿಯು ಹೊಸ ಫ್ಲೋಟಿಂಗ್ 11.4 - ಇಂಚಿನ ಕರ್ವ್ಡ್ ಗ್ಲಾಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಇತ್ತೀಚಿನ ಪಿವಿ ಪ್ರೊ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.

ಇನ್ನು ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, ಪನಾರಮಿಕ್ ಸನ್‌ರೂಫ್, 360 - ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ, ವೈರ್‌ಲೆಸ್ Apple CarPlay ಮತ್ತು Android Auto, OTA ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಹೊಸ PM2.5 ಏರ್ ಪ್ಯೂರಿಫಿಕೇಶನ್ ಸಿಸ್ಟಮ್, ಸುಧಾರಿತ ಸುರಕ್ಷತೆಗಾಗಿ ಕ್ಲಿಯರ್‌ಸೈಟ್ ಗ್ರೌಂಡ್ ವ್ಯೂ ತಂತ್ರಜ್ಞಾನವನ್ನು ಸಹ ಅನ್ನು ಹೊಂದಿದೆ.

Darshan wife vijayalakshmi Range Rover Evoque

ಎಂಜಿನ್: ಈ ರೇಂಜ್ ರೋವರ್ ಇವೊಕ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ. ಈ ಐಷಾರಾಮಿ ಎಸ್‍ಯುವಿ ಲೋಡ್ ಡೈನಾಮಿಕ್ SE ಟ್ರಿಮ್‌ನಲ್ಲಿ ಮಾತ್ರ ಬರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಘಟಕವು 247hp ಪವರ್ ಮತ್ತು 365Nm ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನೊಂದು ಆಯ್ಕೆಯಲ್ಲಿ 2.0 - ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 201hp ಪವರ್ ಮತ್ತು 430Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು 48V ಮೈಲ್ಡ್ - ಹೈಬ್ರಿಡ್ ವ್ಯವಸ್ಥೆಯನ್ನು ಬೆಲ್ಟ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ನೊಂದಿಗೆ ಪಡೆಯುತ್ತವೆ. ಇದನ್ನು 9 - ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.67 ಲಕ್ಷವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, March 18, 2024, 19:46 [IST]
English summary
Darshan wife vijayalakshmi buys new range rover evoque top things
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+