ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಣಾಗಿದ್ದಾರೆ. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 110 ಗಳ ಗಡಿ ದಾಟಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100 ರ ಗಡಿ ದಾಟಿದೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಇಂಧನಗಳ ಬೆಲೆ ಏರಿಕೆಗೆ - ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಒಪೆಕ್ ದೇಶಗಳು ಕಡಿಮೆ ಪ್ರಮಾಣದಲ್ಲಿ ಇಂಧನ ಉತ್ಪಾದಿಸುತ್ತಿರುವುದು, ಭಾರತದಲ್ಲಿ ಇಂಧನಗಳ ಮೇಲೆ ವಿಧಿಸಲಾಗುವ ವಿವಿಧ ತೆರಿಗೆಗಳು ಸೇರಿದಂತೆ ಹಲವು ಕಾರಣಗಳಿವೆ. ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಇದಾದ ನಂತರ ಹಲವು ರಾಜ್ಯ ಸರ್ಕಾರಗಳು ಸಹ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ತಮ್ಮ ವ್ಯಾಟ್‌ ಶುಲ್ಕವನ್ನು ಕಡಿಮೆ ಮಾಡಿವೆ. ತೆರಿಗೆ ಕಡಿತದ ನಂತರ ವ್ಯಾಟ್ ಹಾಗೂ ಸೇವಾ ಶುಲ್ಕವು ಪೆಟ್ರೋಲ್ ಮೇಲೆ 50% ನಷ್ಟು ಹಾಗೂ ಡೀಸೆಲ್ ಮೇಲೆ 40% ನಷ್ಟು ಕಡಿಮೆಯಾಗಿದೆ. ದೀಪಾವಳಿಗೂ ಮುನ್ನಾ ವ್ಯಾಟ್ ಹಾಗೂ ಸೇವಾ ಶುಲ್ಕ ಕಡಿತ ಮಾಡುವ ಮೊದಲು, ದೆಹಲಿಯಲ್ಲಿ ಪೆಟ್ರೋಲ್ ಮೇಲಿನ ಒಟ್ಟು ತೆರಿಗೆ 54% ನಷ್ಟಿತ್ತು.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಇದರದಲ್ಲಿ ಕೇಂದ್ರ ಅಬಕಾರಿ ಸುಂಕವು ಲೀಟರ್‌ಗೆ ರೂ. 32.90 ಗಳಾದರೆ, ವ್ಯಾಟ್ ಶುಲ್ಕ 30% ನಷ್ಟಿತ್ತು. ಈ ತೆರಿಗೆಗಳಿಂದ ದೆಹಲಿಯಲ್ಲಿ ಪೆಟ್ರೋಲ್ ಮೇಲಿನ ಒಟ್ಟು ತೆರಿಗೆ 54% ನಷ್ಟಿತ್ತು. ಈಗ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿ ಕಡಿತಗೊಳಿಸಿರುವುದರಿಂದ ಒಟ್ಟಾರೆ ತೆರಿಗೆ ಹೊರೆಯು 50% ನಷ್ಟು ಕುಸಿದಿದೆ. ಅದೇ ರೀತಿ ಡೀಸೆಲ್ ಮೇಲೆ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ರೂ. 31.80 ಗಳಾದರೆ, 16.75% ನಷ್ಟು ವ್ಯಾಟ್ ಶುಲ್ಕ ವಿಧಿಸಲಾಗುತ್ತಿತ್ತು.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಇದೇ ವೇಳೆ ಪ್ರತಿ ಕಿ.ಲೀಗೆ 250 ದರದಲ್ಲಿ ಏರ್ ಆಂಬಿಯೆಂಟ್ ಶುಲ್ಕ ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ಲೀಟರ್‌ಗೆ ರೂ. 10 ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ದೆಹಲಿಯಲ್ಲಿ ಡೀಸೆಲ್ ಮೇಲಿನ ಒಟ್ಟಾರೆ ತೆರಿಗೆಯು 48% ನಿಂದ 40% ಗಳಿಗೆ ಇಳಿದಿದೆ. ದೆಹಲಿ ಸರ್ಕಾರವು ಇನ್ನೂ ತನ್ನ ವ್ಯಾಟ್ ದರಗಳನ್ನು ಇಳಿಸಿಲ್ಲ. ದೆಹಲಿ ಸರ್ಕಾರವು ಈ ಶುಲ್ಕವನ್ನು ಕಡಿತಗೊಳಿಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಮತ್ತಷ್ಟು ಇಳಿಕೆಯಾಗಲಿದೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಇದರಿಂದ ಸಹಜವಾಗಿಯೇ ದೇಶದ ಉಳಿದ ಭಾಗಗಳಂತೆ ದೇಹಲಿಯಲ್ಲಿಯೂ ಇಂಧನ ಬೆಲೆಯಲ್ಲಿ ಇಳಿಕೆಯಾಗಲಿದೆ. ಇದೇ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಸತತ ಮೂರನೇ ದಿನವೂ ಸ್ಥಿರವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೇಲ್ ಕಚ್ಚಾ ತೈಲದ ಬೆಲೆ 85 ಡಾಲರ್ ಗಳಿಗೆ ತಲುಪಿದೆ. ಇದರಿಂದ ಇಂಧನದ ಚಿಲ್ಲರೆ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಇಂಧನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಭಾರತ ಸರ್ಕಾರವು ಸೌದಿ ಅರೇಬಿಯಾ ಹಾಗೂ ರಷ್ಯಾದಂತಹ ತೈಲ ರಫ್ತು ಮಾಡುವ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಆದರೆ ಈ ಮಾತುಕತೆಗಳು ಇದುವರೆಗೂ ಯಾವುದೇ ಫಲಿತಾಂಶಗಳನ್ನು ನೀಡಿಲ್ಲ. ಒಂದು ವೇಳೆ ಈ ಮಾತಕತೆ ಫಲಪ್ರದವಾದರೆ ದೇಶಿಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ಇಳಿಕೆ ಕಂಡು ಬರಲಿದೆ. ವಾಹನ ಸವಾರರು ಈಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸುಲಭವಾಗಿ ಕಂಡು ಹಿಡಿಯಬಹುದು. ವಾಹನ ಸವಾರರು ತಮ್ಮ ಸ್ಮಾರ್ಟ್‌ಫೋನ್‌ನಿಂದ ದೈನಂದಿನ ಇಂಧನ ಬೆಲೆಗಳನ್ನು ಸಹ ಪರಿಶೀಲಿಸಬಹುದು.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಇದಕ್ಕಾಗಿ ಗ್ರಾಹಕರು ಇಂಡಿಯನ್ ಆಯಿಲ್ ಎಸ್ಎಂಎಸ್ ಸರ್ವೀಸ್ ಸಂಖ್ಯೆಯಾದ 9224992249 ಗೆ ಎಸ್‌ಎಂಎಸ್ ಕಳುಹಿಸಬೇಕು. ಇಂಧನಗಳ ಇತ್ತೀಚಿನ ದರಗಳ ಬಗ್ಗೆ ತಿಳಿಯಲು ಗ್ರಾಹಕರು RSP <�ಸ್ಪೇಸ್ >ಪೆಟ್ರೋಲ್ ಬಂಕ್ ಡೀಲರ್ ಕೋಡ್ ಟೈಪ್ ಮಾಡಿ ಎಸ್‌ಎಂಎಸ್ ಕಳುಹಿಸಬೇಕು. ಗ್ರಾಹಕರು ತಮ್ಮ ಪ್ರದೇಶದ RSP ಕೋಡ್ ಅನ್ನು ಇಂಟರ್ ನೆಟ್ ಮೂಲಕ ತಿಳಿಯಬಹುದು. ಸಂದೇಶವನ್ನು ಕಳುಹಿಸಿದ ನಂತರ, ಪೆಟ್ರೋಲ್ ಹಾಗೂ ಡೀಸೆಲ್'ನ ಇತ್ತೀಚಿನ ದರದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಿಂದ ಕೇವಲ ವಾಹನ ಮಾಲೀಕರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಕೂಡಾ ಸಾಕಷ್ಟು ಹೊರೆಯಾಗುತ್ತಿತ್ತು. ಇಂಧನಗಳ ಬೆಲೆ ಏರಿಕೆಯಿಂದಾಗಿ ಸೇವಾ ವಲಯದ ಕಾರ್ಯಾಚರಣೆಯ ವೆಚ್ಚವು ಹೆಚ್ಚಿರುವುದರಿಂದ ಅದರ ಹೊರೆ ಪ್ರತಿಯೊಬ್ಬರಿಗೂ ತಟ್ಟುತ್ತಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಯ ಸಮರದಿಂದಾಗಿ ದುಬಾರಿಯಾಗುತ್ತಿರುವ ಇಂಧನ ಬೆಲೆಯನ್ನು ನಿಯಂತ್ರಿಸಲು ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿದೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಸುವಂತೆ ದೇಶಾದ್ಯಂತ ವಾಹನ ಸವಾರರು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ದೇಶಾದ್ಯಂತ ನಿರಂತರ ಒತ್ತಡ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ದೇಶದ ಜನರಿಗೆ ಅತಿ ದೊಡ್ಡ ಅಬಕಾರಿ ಸುಂಕ ಕಡಿಮೆ ಮಾಡಿ ದೊಡ್ಡ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 5 ಹಾಗೂ ಡೀಸೆಲ್ ಮೇಲೆ ರೂ.10 ಅಬಕಾರಿ ಸುಂಕ ಕಡಿತ ಮಾಡಿದೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಅಬಕಾರಿ ಸುಂಕ ಕಡಿತದ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 107.64 ಗಳಾದರೆ, ಪ್ರತಿ ಲೀಟರ್‌ ಡೀಸೆಲ್ ಬೆಲೆ ರೂ. 92.03 ಗಳಾಗಿದೆ. ಕೇಂದ್ರ ಸರ್ಕಾರವು ಅಬಕಾರಿ ಸುಂಕ ಕಡಿತಗೊಳಿಸುತ್ತಿದ್ದಂತೆ ಕರ್ನಾಟಕ ಸರ್ಕಾರವು ಸಹ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 6.29 ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ರೂ. 12.47 ಸುಂಕ ಕಡಿತ ಮಾಡಿದೆ. ಅಂದ ಹಾಗೆ ಹೊಸ ತೈಲ ಬೆಲೆಗಳು ಪ್ರತಿ ದಿನ 6 ಗಂಟೆಗೆ ಜಾರಿಗೆ ಬರುತ್ತವೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೆಪ್ಟೆಂಬರ್ 24 ರಿಂದ ಡೀಸೆಲ್ ಬೆಲೆಯನ್ನು ಹಾಗೂ ಸೆಪ್ಟೆಂಬರ್ 28 ರಿಂದ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುತ್ತಿವೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ. ಇದಲ್ಲದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಇತರ ಅಂಶಗಳಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್, ಡೀಲರ್ ಕಮಿಷನ್, ಸರಕು ಶುಲ್ಕ ಇತ್ಯಾದಿಗಳು ಸೇರಿವೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ. ಕೆಲವು ದಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿತ್ತು. ಆದರೆ ಈಗ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಕಳೆದ ಎರಡು ವರ್ಷಗಳಿಂದ ಇಂಧನದ ಮೇಲಿನ ಅಬಕಾರಿ ಸುಂಕ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸಹ ಇಂಧನಗಳ ಬೆಲೆ ನಿರಂತರ ಏರಿಕೆಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಈ ಕಾರಣದಿಂದಾಗಿ ಮೊದಲ ಬಾರಿಗೆ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 100 ಗಳ ಗಡಿ ದಾಟಿತ್ತು.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ಉಚಿತ ಕೋವಿಡ್ 19 ಲಸಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ ರಾಮೇಶ್ವರ ತೇಲಿರವರು ಕೆಲವು ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, ಇಂಧನ ಬೆಲೆಗಳು ಹೆಚ್ಚಾಗಿಲ್ಲ. ಆದರೆ ಅವುಗಳ ಮೇಲೆ ವಿಧಿಸುತ್ತಿರುವ ತೆರಿಗೆಗಳು ಅಧಿಕವಾಗಿವೆ.

ತೆರಿಗೆ ಕಡಿತದ ನಂತರ ರಾಷ್ಟ್ರ ರಾಜಧಾನಿಯಲ್ಲೂ ಇಳಿಕೆಯಾದ ಇಂಧನ ದರ

ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೋವಿಡ್ 19 ಲಸಿಕೆ ನೀಡಬೇಕು. ಲಸಿಕೆ ನೀಡುವುದಕ್ಕೆ ಹಣ ಎಲ್ಲಿಂದ ಬರುತ್ತದೆ? ಅದಕ್ಕಾಗಿಯೇ ಇಂಧನಗಳ ಮೇಲೆ ಈ ರೀತಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದ್ದರು. ಅಂದ ಹಾಗೆ ರಾಮೇಶ್ವರ ತೇಲಿರವರು ಅಸ್ಸಾಂನ ದಿಬ್ರುಗಡ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಭಾರತದಲ್ಲಿ 130 ಕೋಟಿ ಜನರಿಗೆ ಉಚಿತ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ ಎಂದು ಹೇಳುವ ಬದಲು ಅವರು ಈ ರೀತಿ ಹೇಳಿಕೆ ನೀಡಿ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದಾರು. ಇಷ್ಟು ಮಾತ್ರವಲ್ಲದೇ ಇಂಧನ ಬೆಲೆಯನ್ನು ಪ್ಯಾಕೇಜ್ ಮಾಡಿದ ಕುಡಿಯುವ ನೀರಿನೊಂದಿಗೆ ಹೋಲಿಸಿದ್ದಾರೆ. ಗುಣಮಟ್ಟದ ಪ್ಯಾಕೇಜ್ ಮಾಡಲಾದ ನೀರನ್ನು ಕುಡಿಯಲು ಬಯಸಿದರೆ ಪ್ರತಿ ಬಾಟಲಿಗೆ ರೂ. 100 ಪಾವತಿಸಬೇಕು. ಈಗ ಪೆಟ್ರೋಲ್, ಡೀಸೆಲ್‌ ಪರಿಸ್ಥಿತಿಯೂ ಹಾಗೆ ಇದೆ ಎಂದು ಅವರು ಹೇಳಿದ್ದರು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Decrease in vat rate brings down fuel price in delhi details
Story first published: Monday, November 8, 2021, 14:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X