ಹಳೇ ಕಾರು ಕೊಳ್ಳುವವರೇ ಎಚ್ಚರ: ಪಾರ್ಕ್ ಮಾಡಿದ್ದರೂ ಕಾರನ್ನು ಗುಜುರಿಗೆ ಹಾಕುತ್ತಾರೆ ಹುಷಾರ್!
ಹಳೆಯ ವಾಹನಗಳನ್ನು ಕಡಿಮೆ ಬೆಲೆಗೆ ಕೊಳ್ಳುವವರು ಈ ಸುದ್ದಿಯನ್ನು ಖಂಡಿತವಾಗಿಯೂ ಓದಬೇಕು. ಯಾಕೆಂದರೆ ನೀವು ನಿಮ್ಮ ಹಳೇ ವಾಹನಗಳನ್ನು ರಸ್ತೆ ಬದಿಯಲ್ಲಿ ಎಲ್ಲಾದರೂ ಪಾರ್ಕ್ ಮಾಡಿದರೆ ಅದು ಅಲ್ಲಿಂದ ಆಯವಾಗುವ ಸಾಧ್ಯತೆಗಳಿದೆ. ಅದಕ್ಕೆ ಕಾರಣವೇನೆಂದು ತಿಳಿಯಲು ಈ ಲೇಖನವನ್ನು ಕೊನೆಯವೆಗೂ ಓದಿ.
ಈಗಾಗಲೇ ಸುಮಾರು ಹದಿನೈದು ವರ್ಷ ಹಳೆಯ ಪೆಟ್ರೋಲ್ ಕಾರನ್ನು ಮತ್ತು ಹತ್ತು ವರ್ಷ ಹಳೆಯ ಡೀಸೆಲ್ ಕಾರನ್ನುರಸ್ತೆಯ ಮೇಲೆ ಓಡಿಸುವಂತಿಲ್ಲ ನಿಯಮ ಬಹುತೇಕ ಎಲ್ಲಾ ಕಡೆ ಇದ್ದರೂ ಇದು ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎಂಬುದು ಹಗಲಿನಷ್ಟೇ ಸತ್ಯ. ಆದರೆ ಈ ಕುರಿತಾಗಿ ದೆಹಲಿ ಸರ್ಕಾರ (Delhi Government) ಹೊಸದಾದ ಸುತ್ತೋಲೆಯೊಂದನ್ನು ಹೊರಡಿಸಿದೆ.

ಇತ್ತೀಚೆಗಷ್ಟೇ ದೆಹಲಿ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಇನ್ನು ಮುಂದೆ ಹಳೆಯ ವಾಹನಗಳು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿದ್ದರೂ ಅದನ್ನು ತೆಗೆದುಕೊಂಡು ಟೋ ಮಾಡಿ, ಸೀಝ್ ಮಾಡಿ ಗುಜುರಿಗೆ ಹಾಕಬಹುದು. ಈ ಮೂಲಕ ಹಳೆ ಕಾರುಗಳ ಮಾಲೀಕರ ಮನದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.
2021 ರಲ್ಲಿ ನ್ಯಾಷನಲ್ ಗ್ರೀನ್ ಟ್ರಿಬುನಲ್ ಮತ್ತು ಸುಪ್ರೀಂ ಕೋರ್ಟ್ ಸೇರಿ ಎನ್‌ಸಿಆರ್ ವಲಯದಲ್ಲಿ ಅಂದರೆ ನ್ಯಾಷನಲ್ ಕ್ಯಾಪಿಟಲ್ ರೀಜನ್ ನಲ್ಲಿ ಗಮನಾರ್ಹ ಮಟ್ಟದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ನಿಯಂತ್ರಿಸಲು ಮತ್ತು ಅಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಕೆಲವು ನಿಯಮಗಳ ರೂಪು ರೇಷೆಗಳನ್ನು ಸಿದ್ದಗೊಳಿಸಿತ್ತು.

ಇದರ ಪ್ರಕಾರ ದೆಹಲಿ ಸಾರಿಗೆ ಇಲಾಖೆಯು ರಸ್ತೆಯಲ್ಲಿ ಬಳಸುತ್ತಿರುವ ಹದಿನೈದು ವರ್ಷ ಹಳೆಯ ಪೆಟ್ರೋಲ್ ಕಾರನ್ನು ಮತ್ತು ಹತ್ತು ವರ್ಷ ಹಳೆಯ ಡೀಸೆಲ್ ಕಾರುಗಳನ್ನು ಸೀಜ್ ಮಾಡಲು ನೇರ ಅನುಮತಿಯನ್ನು ನೀಡಿತ್ತು. ಇದು ಅಲ್ಲಿನ ಕಾರು ಮಾಲೀಕರ ಮನದಲ್ಲಿ ಆತಂಕವನ್ನು ಸೃಷ್ಟಿಸಿತ್ತು.
ಹೀಗಾಗಿ ಇಷ್ಟು ಹಳೆಯ ವರ್ಷದ ಕಾರುಗಳನ್ನು ಹೊಂದಿದ್ದ ಅಲ್ಲಿನ ಕಾರು ಮಾಲೀಕರು ಬಲವಂತವಾಗಿ ತಮ್ಮ ಕಾರುಗಳನ್ನು ಮಾರಬೇಕಿತ್ತು ಇಲ್ಲವೇ ಗುಜುರಿಗೆ ಹಾಕಬೇಕಿತ್ತು. ಇನ್ನು ಇವೆರಡನ್ನೂ ಮಾಡದ ಮಾಲೀಕರು ತಮ್ಮ ಕಾರುಗಳನ್ನು ಸಾರ್ವಜನಿಕ ರಸ್ತೆಗೆ ಇಳಿಸುವ ಹಾಗೆ ಇರಲಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬೇಕಾಗಿದೆ.
ಇನ್ನು ದೆಹಲಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ದೆಹಲಿಯ ಈ ನಿಯಮಗಳನ್ನು ಅಲ್ಲಿನ ಸಾರಿಗೆ ಇಲಾಖೆ ಹಿಂಬಾಲಿಸುತ್ತಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಸಾಕ್ಷಿಗಳೆಂಬಂತೆ ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಹಳೆಯ ವಾಹನಗಳನ್ನು ಸೀಜ್ ಮಾಡಿರುವುದನ್ನುನ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications