ಸಾಯುವವರನ್ನು ಬದುಕಿಸುತ್ತೆ ದೆಹಲಿ ಸರ್ಕಾರದ ಈ ಹೊಸ ಮಸೂದೆ !!
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರವು ರಾಜ್ಯದ ಜನತೆಗೆ ಹೊಸ ಅಪಘಾತ ಪರಿಹಾರ ಯೋಜನೆ ಘೋಷಿಸಿದ್ದು, ಈ ಐತಿಹಾಸಿಕ ಯೋಜನೆಗೆ ಎಲ್ಲಾರಿಂದಲೂ ಸಹ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರವು ರಾಜ್ಯದ ಜನತೆಗೆ ಹೊಸ ಅಪಘಾತ ಪರಿಹಾರ ಯೋಜನೆ ಘೋಷಿಸಿದ್ದು, ಈ ಐತಿಹಾಸಿಕ ಯೋಜನೆಗೆ ಎಲ್ಲಾರಿಂದಲೂ ಸಹ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೌದು, ರಾಜ್ಯದಲ್ಲಿ ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಗೊಂಡ ವ್ಯಕ್ತಿಗೆ ದೆಹಲಿಯಲ್ಲಿರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಅನುವು ಮಾಡಿಕೊಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಮತ್ತು ಅಪಘಾತದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ದೆಹಲಿಯ ರಸ್ತೆಗಳ ಮೇಲೆ ಅಪಘಾತಕ್ಕೊಳಗಾದ ಜನರಿಗೆ ಸಕಾಲಿಕವಾಗಿ ಚಿಕಿತ್ಸೆಯು ಲಭ್ಯವಾಗದ ಕಾರಣ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಸಕಾಲಿಕ ಚಿಕಿತ್ಸೆ ಸಿಗದಿರುವ ಕಾರಣ ಪ್ರತಿವರ್ಷವೂ ಕೂಡ ದೆಹಲಿ ರಸ್ತೆಗಳ ಮೇಲೆ ಸುಮಾರು 8,000 ಅಪಘಾತಗಳು ಸಂಭವಿಸುತಿದ್ದು, ಹೆಚ್ಚು ಕಡಿಮೆ 15,000 ರಿಂದ 20,000 ಜನರು ರಸ್ತೆಯ ಮೇಲೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಆಮ್ ಆದ್ಮಿ ಸರಕಾರದ ಕ್ಯಾಬಿನೆಟ್ ಸಚಿವರೆಲ್ಲರೂ ಸಹ ಈ ಮಸೂದೆಗೆ ಸಹಿ ಹಾಕಿದ್ದು, ಈಗಾಗಲೇ ಮಸೂದೆಯನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಕಳುಹಿಸಲಾಗಿದೆ. ಮಸೂದೆ ಅಂಗೀಕಾರವಾದ ನಂತರ ಈ ಯೋಜನೆ ಜಾರಿಗೆ ಬರಲಿದೆ ಎಂದು ದೆಹಲಿಯ ಸರಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಘೋಷಿಸಿದ್ದಾರೆ.

"ಯಾವುದೇ ನಾಗರಿಕನಿಗೆ ದೆಹಲಿಯ ಬೀದಿಗಳಲ್ಲಿ ಅಪಘಾತದ ಸಂಭವಿಸಿದರೆ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ದೆಹಲಿ ಸರ್ಕಾರವು ಭರಿಸಲಿದೆ ಮತ್ತು ವ್ಯಕ್ತಿಯ ಜೀವವನ್ನು ಉಳಿಸುವುದು ಮೊದಲ ಆದ್ಯತೆಯಾಗಿದೆ. ಖಾಸಗಿ ಆಸ್ಪತ್ರೆ ಸಮೀಪದಲ್ಲಿದ್ದರೂ ಸಹ ಹೆಚ್ಚಿನ ಜನರು ರಸ್ತೆ ಅಪಘಾತಕ್ಕೊಳಗಾದವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸುತ್ತಾರೆ, ಇದನ್ನು ತಪ್ಪಿಸಲು ಈ ಮಸೂದೆ ತರಲಾಗಿದೆ" ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಭಾರತದಲ್ಲಿಯೇ ಅತಿ ಹೆಚ್ಚು ವಾಹನ ದಟ್ಟಣೆ ಇರುವ ದೆಹಲಿಯಲ್ಲಿ ಸರ್ಕಾರದ ಈ ಕ್ರಮವು ಅಪಘಾತಕ್ಕೊಳಗಾದ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಭಾರತದ ಇತರೆ ರಾಜ್ಯಗಳೂ ಸಹ ದೆಹಲಿಯ ಸರ್ಕಾರದ ಜಾರಿಗೆ ತರುವ ನಿರೀಕ್ಷೆ ಇದೆ.


Click it and Unblock the Notifications








