ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ನಿನ್ನೆಯಿಂದ ಸಾರ್ವಜನಿಕರ ಬಳಕೆಗಾಗಿ ತೆರೆಯಲಾಗಿದೆ. 2018ರ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿರವರು ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಗೆ ಅಡಿಪಾಯ ಹಾಕಿದ್ದರು.

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ಮೂರು ವರ್ಷಗಳಲ್ಲಿ ಈ ಎಕ್ಸ್‌ಪ್ರೆಸ್ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿದೆ. ನಿತಿನ್ ಗಡ್ಕರಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಕ್ಸ್‌ಪ್ರೆಸ್‌ವೇಯನ್ನು ಸಾರ್ವಜನಿಕರಿಗೆ ತೆರೆಯುತ್ತಿರುವ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ಎಕ್ಸ್‌ಪ್ರೆಸ್‌ವೇಯಿಂದ ದೆಹಲಿ - ಮೀರತ್ ನಡುವಿನ ಪ್ರಯಾಣ ಅವಧಿಯು 2.5 ಗಂಟೆಗಳಿಂದ ಕೇವಲ 45 ನಿಮಿಷಗಳಿಗೆ ಇಳಿಯಲಿದೆ.

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಯು 82 ಕಿ.ಮೀ ಉದ್ದವನ್ನು ಹೊಂದಿದೆ. ಇದರಲ್ಲಿ 60 ಕಿ.ಮೀ ಎಕ್ಸ್‌ಪ್ರೆಸ್ ವೇಯಾದರೆ, 22 ಕಿ.ಮೀ ರಾಷ್ಟ್ರೀಯ ಹೆದ್ದಾರಿಯ ವಿಸ್ತಾರವಾಗಿದೆ. ಈ ಯೋಜನೆಗೆ ರೂ.8,346 ಕೋಟಿ ವ್ಯಯಿಸಲಾಗಿದೆ.

MOST READ: ನಿರ್ವಹಣಾ ವೆಚ್ಚ ತಗ್ಗಿಸಲು ವಾಣಿಜ್ಯ ವಾಹನಗಳಿಗಾಗಿ ಹೊಸ ಎಂಜಿನ್ ಪರಿಚಯಿಸಿದ ಟಾಟಾ ಮೋಟಾರ್ಸ್

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟು 24 ಸಣ್ಣ ಹಾಗೂ ದೊಡ್ಡ ಸೇತುವೆಗಳಿವೆ. ಇದರ ಜೊತೆಗೆ ಈ ಎಕ್ಸ್‌ಪ್ರೆಸ್‌ವೇಯಲ್ಲಿ 10 ಫ್ಲೈಓವರ್‌, 3 ರೈಲ್ವೆ ಸೇತುವೆ, 95 ಅಂಡರ್‌ಪಾಸ್‌ ಹಾಗೂ ಪಾದಚಾರಿಗಳಿಗಾಗಿ ಹಲವಾರು ಓವರ್‌ಬ್ರಿಡ್ಜ್‌ಗಳನ್ನು ನಿರ್ಮಿಸಲಾಗಿದೆ.

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯನ್ನು ನಾಲ್ಕು ವಿಭಿನ್ನ ಹಂತಗಳಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತವು ನಿಜಾಮುದ್ದೀನ್ ಸೇತುವೆಯಿಂದ ಉತ್ತರಪ್ರದೇಶದ ಗಡಿಯವರೆಗೆ ಇದ್ದರೆ, ಎರಡನೇ ಹಂತವು ಉತ್ತರ ಪ್ರದೇಶದ ಗಡಿಯಿಂದ ದಸ್ನಾವರೆಗೂ, ಮೂರನೇ ಹಂತವು ದಸ್ನಾದಿಂದ ಹಾಪುರ್'ವರೆಗೂ, ಕೊನೆಯ ಹಂತವು ಹಾಪುರದಿಂದ ಮೀರತ್'ವರೆಗೆ ಸಂಪರ್ಕಿಸುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ವಿವಿಧ ಭಾಗಗಳಲ್ಲಿ ವಾಹನಗಳಿಗೆ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 80 ಕಿ.ಮೀಗಳಿಂದ 100 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ. ಪ್ರತಿ ವಾಹನದ ವೇಗವನ್ನು ತೋರಿಸಲು ಪ್ರತಿ 10 ಕಿ.ಮೀಗೆ ಒಂದರಂತೆ ಡಿಸ್ ಪ್ಲೇ ಸ್ಕ್ರೀನ್'ಗಳನ್ನು ಅಳವಡಿಸಲಾಗಿದೆ.

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ಭದ್ರತೆಗಾಗಿ ಎಕ್ಸ್‌ಪ್ರೆಸ್‌ವೇಯ ನಾಲ್ಕನೇ ಹಂತದಲ್ಲಿ ದಸ್ನಾದಿಂದ ಮೀರತ್‌ವರೆಗೆ 72 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಇಡೀ ರಸ್ತೆಯಲ್ಲಿ 4,500ಕ್ಕೂ ಹೆಚ್ಚು ದೀಪ ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಸೈಕಲ್ ಸವಾರರು ಹಾಗೂ ಪಾದಚಾರಿಗಳಿಗೂ ಸಹ ಅವಕಾಶ ಕಲ್ಪಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ 2.5 ಮೀಟರ್ ಸೈಕಲ್ ಕಾರಿಡಾರ್ ಹಾಗೂ 1 ಮತ್ತು 2ನೇ ಹಂತದ ರಸ್ತೆಗಳ ಉದ್ದಕ್ಕೂ 2 ಮೀಟರ್ ಅಗಲದ ಫುಟ್‌ಪಾತ್ ನೀಡಲಾಗಿದೆ.

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ರಾತ್ರಿಯಲ್ಲಿ ಪ್ರಯಾಣವನ್ನು ಆರಾಮದಾಯಕವಾಗಿಸಲು ಎಕ್ಸ್‌ಪ್ರೆಸ್‌ವೇಯಲ್ಲಿ ಬಣ್ಣದ ಫ್ಲ್ಯಾಷ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಪಾದಚಾರಿ ಹಾಗೂ ಸೈಕಲ್ ಟ್ರ್ಯಾಕ್‌ಗಳಲ್ಲಿ ಪ್ರತ್ಯೇಕವಾಗಿ ಲೈಟ್‌ಗಳನ್ನು ಅಳವಡಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ಮೊದಲ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ (ಎಎನ್‌ಪಿಆರ್) ಹೊಂದಿರುವ ಫಾಸ್ಟ್‌ಟ್ಯಾಗ್ ಆಧಾರಿತ ಮಲ್ಟಿ ಲೇನ್ ಫ್ರೀ ಫ್ಲೋ ಟೋಲಿಂಗ್ ಸಿಸ್ಟಂ ಅನ್ನು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಪರಿಚಯಿಸಲಾಗಿದೆ.

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ಈ ಸಿಸ್ಟಂ ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚಿನ ವೇಗದ ಹರಿವನ್ನು ಖಚಿತಪಡಿಸುತ್ತದೆ. ಫಾಸ್ಟ್‌ಟ್ಯಾಗ್ ಸಿಸ್ಟಂನಿಂದಾಗಿ ವಾಹನಗಳು ಟೋಲ್ ಗೇಟ್‌ನಲ್ಲಿ ಟೋಲ್ ಪಾವತಿಸಲು ವಾಹನ ನಿಲ್ಲಿಸುವ ಅಗತ್ಯವಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ಸುತ್ತಮುತ್ತಲಿನ ಪ್ರದೇಶಗಳ ಜೊತೆ ಸಂಪರ್ಕ ಕಲ್ಪಿಸುವ ಸಲುವಾಗಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಹಲವಾರು ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ನೀಡಲಾಗಿದೆ. ಇವುಗಳು ಅಕ್ಷರ್ ಧಾಮ್, ದುಂಡಾಹೇರಾ, ಸರೈ ಕೇಲ್ ಖಾನ್, ದಸ್ನಾ, ಇಂದ್ರಪುರಂ ಹಾಗೂ ನೋಯ್ಡಾದಲ್ಲಿವೆ.

ಎರಡೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸುತ್ತದೆ ಈ ಎಕ್ಸ್‌ಪ್ರೆಸ್‌ವೇ

ತುರ್ತು ಸನ್ನಿವೇಶದಲ್ಲಿ ಕರೆ ಮಾಡಲು ಎಕ್ಸ್‌ಪ್ರೆಸ್‌ವೇಯಾದ್ಯಂತ ವಿಶೇಷ ಇಸಿಬಿಗಳನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಆಂಬ್ಯುಲೆನ್ಸ್, ಕ್ರೇನ್, ಪೆಟ್ರೋಲ್ ಬಂಕ್, ರೆಸ್ಟೋರೆಂಟ್'ನಂತಹ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Delhi Meerut Expressway reduces travel time from two and half hours to 45 minutes. Read in Kannada.
Story first published: Friday, April 2, 2021, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X