ಪೂರ್ಣಗೊಂಡ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಫೋಟೊ ಹಂಚಿಕೊಂಡ ಗಡ್ಕರಿ... ಕೇವಲ 12 ಗಂಟೆಗಳ ಪ್ರಯಾಣ
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದು, ನಿರ್ಮಾಣವು ಪೂರ್ಣಗೊಂಡಿರುವುದಾಗಿ ತಿಳಿಸಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ರಾಷ್ಟ್ರೀಯ ರಾಜಧಾನಿ ಮತ್ತು ದೇಶದ ವ್ಯಾಪಾರ ರಾಜಧಾನಿಯ ನಡುವೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಹಂಚಿಕೊಂಡಿರುವ ಫೋಟೋಗಳು ಮಧ್ಯಪ್ರದೇಶದ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್‌ವೇ ವಿಭಾಗವಾಗಿದೆ. ಒಟ್ಟಾರೆ ದೆಹಲಿ ಹಾಗೂ ಮುಂಬೈ ನಡುವಿನ ಈ ಎಕ್ಸಪ್ರೆಸ್ ವೇ ಉದ್ದವು 1,386 ಕಿ.ಮೀ ಇದ್ದು, ಇದರಲ್ಲಿ ಮಧ್ಯಪ್ರದೇಶ ರಾಜ್ಯವು ಸುಮಾರು 240 ಕಿ.ಮೀ ಪಾಲನ್ನು ಹೊಂದಿರುತ್ತದೆ. ಈಗಾಗಲೇ ಮೊದಲ ಹಂತವಾಗಿ ದೆಹಲಿ ಮತ್ತು ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯನ್ನು ಆರಂಭಿಸಲಾಗಿದೆ.

ದೆಹಲಿ ಮತ್ತು ರಾಜಸ್ಥಾನದ ದೌಸಾ ನಡುವೆ ಹಾದು ಹೋಗುವ ಮೊದಲ ಹಂತದ 209 ಕಿ.ಮೀ ಎಕ್ಸ್‌ಪ್ರೆಸ್‌ವೇಯನ್ನು ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಮುಂದಿನ ಕೆಲವು ತಿಂಗಳುಗಳಲ್ಲಿ ದೆಹಲಿಯಿಂದ ಮುಂಬೈಗೆ ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಅನ್ನು ಹಂತ ಹಂತವಾಗಿ ತೆರೆಯಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಯೋಜನೆಯು ಪೂರ್ಣಗೊಂಡರೆ 1,386 ಕಿ.ಮೀ ಉದ್ದದಲ್ಲಿ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿರಲಿದ್ದು, ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣದ ಅಂತರವನ್ನು 24 ಗಂಟೆಗಳಿಂದ 12 ಗಂಟೆಗಳವರೆಗೆ ಅಂದರೆ ಸುಮಾರು ಅರ್ಧದಷ್ಟು ಕಡಿತಗೊಳಿಸುತ್ತದೆ. ಜೊತೆಗೆ ಇಡೀ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ದೆಹಲಿ- ಮುಂಬೈ ಎಕ್ಸ್‌ಪ್ರೆಸ್ ವೇ ಒಟ್ಟು ದೂರ: ದೆಹಲಿ- ಮುಂಬೈ ನಡುವಿನ ಪ್ರಯಾಣದ ಅಂತರವು 1,424 ಕಿ.ಮೀ ನಿಂದ 1,242 ಕಿ.ಮೀಗೆ ಕಡಿಮೆಯಾಗಿದೆ. ಯೋಜನೆಯ ಒಟ್ಟಾರೆ ಬಜೆಟ್ 98,000 ಕೋಟಿ ರೂ. ಎಂದು ವರದಿಯಾಗಿದೆ. ಈ ಹೊಸ ಎಕ್ಸ್‌ಪ್ರೆಸ್ ಹೈವೇ ತನ್ನ ಸುತ್ತಮುತ್ತಲಿನ ಪ್ರದೇಶಗಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಲಿದೆ.
ಇನ್ನು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯು ದೇಶದ ಪ್ರಮುಖ ರಾಜ್ಯಗಳಾದ ದೆಹಲಿ, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ದೆಹಲಿಯು ಒಂಬತ್ತು ಕಿ.ಮೀಗಳಷ್ಟು ಕಡಿಮೆ ವಿಸ್ತಾರವನ್ನು ಹೊಂದಿದೆ. ಹಾಗಾಗಿ ಎಕ್ಸ್‌ಪ್ರೆಸ್‌ವೇಯ ಹೆಚ್ಚಿನ ಭಾಗವು ಗುಜರಾತ್‌ನಲ್ಲಿ 423 ಕಿ.ಮೀ ಪಾಲನ್ನು ಹೊಂದಿರುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ಈ ಐದು ರಾಜ್ಯಗಳ ಮೂಲಕ ಹಾದುಹೋಗುವಾಗ ಕೋಟಾ, ಇಂದೋರ್, ಜೈಪುರ, ಭೋಪಾಲ್, ವಡೋದರಾ ಮತ್ತು ಸೂರತ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಈ ಮೂಲಕ ಪ್ರಯಾಣಿಕರು ತಮ್ಮ ಗಮ್ಯ ಸ್ಥಳಗಳನ್ನು ಮೊದಲಿಗಿಂತಲು ವೇಗವಾಗಿ ತಲುಪಬಹುದಾಗಿದ್ದು, 40 ಕ್ಕೂ ಹೆಚ್ಚು ಪ್ರಮುಖ ಇಂಟರ್‌ಚೇಂಜ್‌ಗಳನ್ನು ನೀಡುತ್ತದೆ. ಒಟ್ಟಾರೆ ಇದು ದೆಹಲಿ ಮತ್ತು ಮುಂಬೈ ನಡುವಿನ ಅಂತರವನ್ನು 180 ಕಿಲೋಮೀಟರ್ ಕಡಿಮೆ ಮಾಡುತ್ತದೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ವೇಗದ ಮಿತಿ: ಕಾರುಗಳಂತಹ ಲಘು ವಾಹನಗಳಿಗೆ ಎಕ್ಸ್‌ಪ್ರೆಸ್‌ವೇಯ ಗರಿಷ್ಠ ವೇಗವು ಗಂಟೆಗೆ 120 ಕಿ.ಮೀ ಆಗಿದ್ದು, ದ್ವಿಚಕ್ರ ವಾಹನಗಳು ಅಥವಾ ನಿಧಾನವಾಗಿ ಚಲಿಸುವ ವಾಹನಗಳನ್ನು ಈ ರಸ್ತೆಯಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ. ಪ್ರತಿ 10 ಕಿಲೋಮೀಟರ್‌ಗೆ, ಅತಿ ವೇಗದ ಕಾರುಗಳನ್ನು ಗುರುತಿಸಲು ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಪ್ರತಿ ಕಿಲೋಮೀಟರ್ ನಂತರ, ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.


Click it and Unblock the Notifications