195 ದೇಶಗಳ ಪ್ರವಾಸಿಗರಿಗೆ ಅಚ್ಚುಮೆಚ್ಚು ಭಾರತದ ಈ ಬಸ್
ಈ ಆಧುನಿಕ ಯುಗದಲ್ಲಿ ಹೈ ಸ್ಪೀಡ್ ವಿಮಾನಗಳ ಮೂಲಕ ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಕೆಲವೇ ಗಂಟೆಗಳಲ್ಲಿ ತಲುಪಬಹುದು. ಆದರೂ ಕೆಲವು ಪ್ರವಾಸಿಗರು ವಿವಿಧ ದೇಶಗಳಿಗೆ ರಸ್ತೆ ಮೂಲಕವೇ ಪ್ರಯಾಣಿಸಲು ಬಯಸುತ್ತಾರೆ.

ದಾರಿಯುದ್ದಕ್ಕೂ ಕಂಡು ಬರುವ ಪ್ರಕೃತಿ ಸೌಂದರ್ಯವನ್ನು ಆನಂದಿಸುವುದು ಇದರ ಹಿಂದಿರುವ ಉದ್ದೇಶ. ಈ ರೀತಿಯ ಜನರಿಗಾಗಿಯೇ ಖಾಸಗಿ ಪ್ರವಾಸೋದ್ಯಮ ಕಂಪನಿಯೊಂದು ಕಳೆದ ಆಗಸ್ಟ್ ತಿಂಗಳಿನಲ್ಲಿ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಹರಿಯಾಣದ ಗುರುಗ್ರಾಮ ಮೂಲದ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿಯು ದೆಹಲಿಯಿಂದ ಲಂಡನ್‌ಗೆ ಬಸ್ ಸೇವೆ ನೀಡುವುದಾಗಿ ಘೋಷಿಸಿದೆ.

ವಿಶ್ವದ ವಿವಿಧ ದೇಶಗಳ ರಸ್ತೆ ಮೂಲಕ ಪ್ರಯಾಣಿಸುವ ಕಾರಣಕ್ಕೆ ಪ್ರವಾಸ ಪ್ರಿಯರಿಂದ ಈ ಸೇವೆಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ. 195 ದೇಶಗಳ ಪ್ರವಾಸ ಪ್ರಿಯರು ಈ ಸೇವೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದ್ದಾರೆ ಎಂದು ಓವರ್‌ಲ್ಯಾಂಡ್ ಕಂಪನಿ ಹೇಳಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವರದಿಗಳ ಪ್ರಕಾರ, ಸದ್ಯಕ್ಕೆ ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿವೆ. ಈ ಕಾರಣಕ್ಕೆ ಈ ಬಸ್‌ನ ಮೊದಲ ಪ್ರವಾಸವು ಮೇ ತಿಂಗಳಿನಲ್ಲಿ ಆರಂಭವಾಗಲಿದೆ.

ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿಯು ಈ ವರ್ಷದ ಅಂತ್ಯದ ವೇಳೆಗೆ ಪ್ರವಾಸದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ವರದಿಯಾಗಿದೆ.ಈ ಬಸ್ ಸೇವೆಯು ದೆಹಲಿಯಿಂದ ಆರಂಭವಾಗುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಂತರ ಈ ಬಸ್ ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಕಜಕಿಸ್ತಾನ್, ರಷ್ಯಾ, ಲಾಟ್ವಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಜರ್ಮನಿ, ಬೆಲ್ಜಿಯಂ ಸೇರಿದಂತೆ ವಿವಿಧ ದೇಶಗಳ ಮೂಲಕ ಬ್ರಿಟನ್ ರಾಜಧಾನಿ ಲಂಡನ್ ತಲುಪಲಿದೆ. ಈ ಪ್ರವಾಸವು ಪೂರ್ಣಗೊಳ್ಳಲು 70 ದಿನಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.

ದೆಹಲಿ-ಲಂಡನ್ ಬಸ್ ಸೇವೆಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಈ ಬಸ್ಸಿನಲ್ಲಿರುವ ಸೀಟುಗಳ ಸಂಖ್ಯೆ ಸೀಮಿತವಾಗಿದೆ. ಈ ಪ್ರವಾಸಕ್ಕೆ ರೂ.15 ಲಕ್ಷ ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಆಗಿರುವ ಕಾರಣಕ್ಕೆ ಬಸ್ ದರ 3%ನಿಂದ 5%ವರೆಗೂ ಹೆಚ್ಚಾಗುವ ಸಾಧ್ಯತೆಗಳಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಬಸ್ ಹಲವು ದೇಶಗಳ ಮೂಲಕ ಸಾಗುವ ಕಾರಣ, ಈ ಬಸ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗುವುದು. ದೆಹಲಿಯಿಂದ ಲಂಡನ್‌ಗೆ ಸಾಗುವ ಈ ಬಸ್ ಎಲ್ಲಾ ದೇಶಗಳ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ ಎಂದು ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಹೇಳಿದೆ.

ಈ ಬಸ್ ನಲ್ಲಿ ಪ್ರಯಾಣಿಸುವವರಿಗೆ ಈ ಬಸ್ ಪ್ರಯಾಣವು ಜೀವಿತಾವಧಿಯಲ್ಲಿ ಮರೆಯಲಾಗದ ಅನುಭವವನ್ನು ನೀಡುವುದು ಖಚಿತ. ರಸ್ತೆಯ ಮೂಲಕ ಬೇರೆ ಬೇರೆ ದೇಶಗಳಿಗೆ ಸಾಗುವುದು ನಿಜಕ್ಕೂ ವಿಶಿಷ್ಟ ಅನುಭವವನ್ನು ನೀಡುತ್ತದೆ. ಆದರೆ ಟಿಕೆಟ್ ದರ ದುಬಾರಿಯಾಗಿರುವ ಕಾರಣ ಎಲ್ಲರಿಗೂ ಈ ಬಸ್ ಪ್ರಯಾಣ ಸಾಧ್ಯವಿಲ್ಲ. ಈ ಚಿತ್ರಗಳನ್ನು ಅಡ್ವೆಂಚರ್ಸ್ ಓವರ್‌ಲ್ಯಾಂಡ್ ನಿಂದ ಪಡೆಯಲಾಗಿದೆ.


Click it and Unblock the Notifications