ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ದೆಹಲಿಯಲ್ಲಿ ಆನ್‌ಲೈನ್ ಕಲಿಕಾ ಪರವಾನಗಿ ನೀಡುವ ಪ್ರಕ್ರಿಯೆ ಆರಂಭವಾದ ಎರಡು ತಿಂಗಳೊಳಗೆ 66,900 ಅರ್ಜಿದಾರರಿಗೆ ಇ ಲರ್ನರ್ ಪರವಾನಗಿ ನೀಡಲಾಗಿದೆ. ದೆಹಲಿ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ರವರು ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಸುಮಾರು 94% ನಷ್ಟು ಜನರಿಗೆ ಇ ಲರ್ನರ್ ಪರವಾನಗಿಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಈ ದೊಡ್ಡ ಬದಲಾವಣೆಯನ್ನು ಸ್ವಾಗತಿಸಿದ್ದಕ್ಕಾಗಿ ಅವರು ಜನರಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ದೆಹಲಿಯ ಜನರ ಸೇವೆಗೆ ಸದಾ ಸಿದ್ಧರಿರುವುದಾಗಿ ಅವರು ಭರವಸೆ ನೀಡಿದ್ದಾರೆ. ಅಕ್ಟೋಬರ್ 7 ರವರೆಗೆ ಆನ್‌ಲೈನ್ ಮೂಲಕ ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದ 66,900 ಜನರಿಗೆ ಇ ಲರ್ನರ್ ಪರವಾನಗಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಚಾಲನಾ ಪರವಾನಗಿಗೆ ಸಂಬಂಧಿಸಿದ ವಿಚಾರಣೆಗಾಗಿ ಸಹಾಯವಾಣಿ ಸಂಖ್ಯೆ 1076 ಕ್ಕೆ ಕರೆ ಮಾಡುವಂತೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಂದ ಹಾಗೆ ದೆಹಲಿಯಲ್ಲಿ ಕಲಿಕಾ ಪರವಾನಗಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆಗಸ್ಟ್ 11 ರಿಂದ ಆರಂಭಿಸಲಾಯಿತು. ಇದರ ಅನ್ವಯ ಅರ್ಜಿದಾರರು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಕಲಿಕಾ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಕಲಿಕಾ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವವರಿಗೆ ಆನ್‌ಲೈನ್ ಪರೀಕ್ಷೆಯ ದಿನಾಂಕ ಹಾಗೂ ಸಮಯದ ಬಗ್ಗೆ ತಿಳಿಸಲಾಗುವುದು. ನಂತರ ಅರ್ಜಿದಾರರು ನಿಗದಿತ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಕಲಿಕಾ ಪರವಾನಗಿ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ಇದು ಆಧಾರ್ ಸಕ್ರಿಯಗೊಳಿಸಿದ ವೇದಿಕೆಯಾಗಿದ್ದು ಅರ್ಜಿದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಸಾಫ್ಟ್‌ವೇರ್ ಗುರುತಿಸುತ್ತದೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಅರ್ಜಿದಾರರು ಪರೀಕ್ಷೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಈ ಸಾಫ್ಟ್‌ವೇರ್ ತೋರಿಸುತ್ತದೆ. ಈ ಆನ್‌ಲೈನ್ ಪರೀಕ್ಷೆಯ ನಂತರ, ಅರ್ಜಿದಾರರು ಶಾಶ್ವತ ಪರವಾನಗಿ ಪಡೆಯಲು ಆರ್‌ಟಿಒ ಕಚೇರಿಗೆ ತೆರಳಿ ಚಾಲನಾ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ದೆಹಲಿ ಸರ್ಕಾರವು ಆರಂಭಿಸಿರುವ ಆನ್‌ಲೈನ್ ಸೇವೆಗಳನ್ನು ಪಡೆಯಲು ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು. ಅರ್ಜಿದಾರರು ದೆಹಲಿ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗ್ ಇನ್ ಮಾಡಿ ಅರ್ಜಿ ಸಲ್ಲಿಸಬಹುದು.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸೇವೆಗಳನ್ನು ಪಡೆಯಲು ಅರ್ಜಿದಾರರು ತಮ್ಮ ದೈಹಿಕ ಸಾಮರ್ಥ್ಯದ ವೈಯಕ್ತಿಕ ವಿವರಗಳನ್ನು ಹಾಗೂ ಸ್ವಯಂ ಘೋಷಣೆಯನ್ನುನಮೂದಿಸಬೇಕಾದ ಪ್ರತ್ಯೇಕ ನಮೂನೆಗಳನ್ನು ಭರ್ತಿ ಮಾಡಬೇಕು. ಅರ್ಜಿದಾರರು ಅರ್ಜಿ ಸಲ್ಲಿಸಿದ ನಂತರ ತಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಅರ್ಜಿ ಸಂಖ್ಯೆಯನ್ನು ಸ್ವೀಕರಿಸುತ್ತಾರೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವವರಿಗೆ 20 ಪ್ರಶ್ನೆಗಳನ್ನು ಒಳಗೊಂಡ ಆನ್‌ಲೈನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ಚಿಹ್ನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. 10 ಪ್ರಶ್ನೆಗಳಿಗೆ ಆರು ಅಥವಾ ಹೆಚ್ಚಿನ ಅಂಕಗಳನ್ನು ಪಡೆಯುವವರನ್ನು ಉತ್ತೀರ್ಣರಾಗಿದ್ದಾರೆಂದು ಪರಿಗಣಿಸಲಾಗುತ್ತದೆ. ಬೇರೊಬ್ಬರ ಸಹಾಯ ಪಡೆದು ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಶಾಶ್ವತ ಚಾಲನಾ ಪರವಾನಗಿ ಪಡೆಯಲು ಸಾರಿಗೆ ಕಚೇರಿಯಿಂದ ನಡೆಸಲಾಗುವ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ದೆಹಲಿ ಸಾರಿಗೆ ಇಲಾಖೆಯು ಒಟ್ಟು 33 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುತ್ತದೆ. ಇವುಗಳಲ್ಲಿ ನಕಲಿ ಚಾಲನಾ ಪರವಾನಗಿ, ವಿಳಾಸ ಬದಲಾವಣೆ, ಹೊಸ ಕಂಡಕ್ಟರ್ ಪರವಾನಗಿ, ನೋಂದಣಿ ಪ್ರಮಾಣಪತ್ರ, ಎನ್‌ಒಸಿ, ಕೈಗಾರಿಕಾ ಚಾಲನಾ ಪರವಾನಗಿ, ಡಿ‌ಎಲ್ ಬದಲಿ, ರಸ್ತೆ ತೆರಿಗೆ, ವಿಮೆ ಎನ್‌ಒಸಿ, ಸರಕು ವಾಹನಕ್ಕೆ ಹೊಸ ಪರವಾನಗಿ, ಪರವಾನಗಿ ನವೀಕರಣ, ನಕಲಿ ಪರವಾನಗಿ, ಶರಣಾಗತಿ ಪರವಾನಗಿ, ಪರವಾನಗಿ ವರ್ಗಾವಣೆ, ಪ್ರಯಾಣಿಕ ಸೇವಾ ವಾಹನದ ಬ್ಯಾಡ್ಜ್‌ಗಳು ಹಾಗೂ ಇನ್ನಿತರ ಸೇವೆಗಳನ್ನು ಸೇರಿಸಲಾಗಿದೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಇದರ ಜೊತೆಗೆ ದೆಹಲಿ ಸಾರಿಗೆ ಇಲಾಖೆಯು ಡ್ರೈವಿಂಗ್ ಟೆಸ್ಟ್ ನಲ್ಲಿ ಫೇಲ್ ಆಗುವವರ ತಪ್ಪುಗಳನ್ನು ಸರಿ ಪಡಿಸಲು ಮುಂದಾಗಿದೆ. ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅನುತ್ತೀರ್ಣರಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸಾರಿಗೆ ಇಲಾಖೆಯು (ಡಿಟಿಸಿ) ವೀಡಿಯೋ ರೆಕಾರ್ಡಿಂಗ್‌ಗಳನ್ನು ಶೇರ್ ಮಾಡಲು ನಿರ್ಧರಿಸಿದೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಅರ್ಜಿದಾರರು ಈ ವೀಡಿಯೊ ರೆಕಾರ್ಡಿಂಗ್‌ಗಳಲ್ಲಿ ತಾವು ಚಾಲನಾ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ವೀಕ್ಷಿಸುವ ಮೂಲಕ ಮುಂದಿನ ಬಾರಿ ಡ್ರೈವಿಂಗ್ ಟೆಸ್ಟ್ ನಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಬಹುದು. ಮೂಲಗಳ ಪ್ರಕಾರ ಆಟೊಮೇಟೆಡ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳುವ ಅರ್ಜಿದಾರರಿಗೆ ಅಕ್ಟೋಬರ್ ತಿಂಗಳಿನಿಂದ ಈ ಸೌಲಭ್ಯವನ್ನು ಆರಂಭಿಸಲಾಗಿದೆ.

ಎರಡು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಇ ಲರ್ನರ್ ಪರವಾನಗಿ ವಿತರಿಸಿದ ಸಾರಿಗೆ ಇಲಾಖೆ

ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಅವರು ಮಾಡಿದ ತಪ್ಪಿನ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ಜೊತೆಗೆ ವಿವರವಾದ ಪರೀಕ್ಷಾ ವರದಿಯನ್ನು ನೀಡಲಾಗುತ್ತದೆ. ವರದಿಗಳ ಪ್ರಕಾರ, ಈ ವೀಡಿಯೊ ಕ್ಲಿಪ್ ಅನ್ನು ವಾಟ್ಸಾಪ್ ಸಂದೇಶದ ಮೂಲಕ ಅರ್ಜಿದಾರರಿಗೆ ಕಳುಹಿಸಲಾಗುತ್ತದೆ. ಚಾಲನಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರಿಗೆ ತಮ್ಮಿಂದ ಆಗುವ ತಪ್ಪುಗಳ ಬಗ್ಗೆ ತಿಳಿದಿರುವುದಿಲ್ಲ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi transport department issues more than 60000 e learner license in two months details
Story first published: Wednesday, October 20, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X