YouTube

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ಕೆಲವರು ಕಾರುಗಳನ್ನು ಪ್ರಯಾಣಕ್ಕಾಗಿ ಖರೀದಿಸಿದರೇ ಇನ್ನೂ ಕೆಲವರು ಪ್ರತಿಷ್ಟೆಗಾಗಿ ಖರೀದಿಸುತ್ತಾರೆ. ತಮ್ಮ ಸ್ಥಾನಮಾನಕ್ಕೆ ಅನುಸಾರವಾಗಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ದುಬಾರಿ ಬೆಲೆಯ ಕಾರು ಖರೀದಿಸಿದ ನಂತರ ಅದರಲ್ಲಿರುವ ನೋಂದಣಿ ಸಂಖ್ಯೆ ವಿಶಿಷ್ಟವಾಗಿರಬೇಕೆಂದು ಬಯಸುವುದು ಸಹಜ. ಈ ಕಾರಣಕ್ಕೆ ಫ್ಯಾನ್ಸಿ ನಂಬರ್ ಖರೀದಿಸಲು ಜನರು ದುಬಾರಿ ಬೆಲೆಯನ್ನು ನೀಡಲು ಸಿದ್ಧರಿದ್ದಾರೆ. ಕಾರು ಖರೀದಿಸಲು ನೀಡುವ ಮಹತ್ವವನ್ನೇ ಫ್ಯಾನ್ಸಿ ನಂಬರ್ ಖರೀದಿಸಲು ಸಹ ನೀಡುತ್ತಾರೆ.

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ದೆಹಲಿಯ ಕಾರು ಖರೀದಿದಾರರು ಹೆಚ್ಚಿನ ಸಂಖ್ಯೆಯ ಫ್ಯಾನ್ಸಿ ನಂಬರ್ ಕ್ರೇಜ್ ಹೊಂದಿದ್ದಾರೆ. ಈ ಕಾರಣಕ್ಕೆ ದೆಹಲಿಯ ಸಾರಿಗೆ ಇಲಾಖೆಯು ಹರಾಜು ಪ್ರಕ್ರಿಯೆ ಮೂಲಕ ಫ್ಯಾನ್ಸಿ ನಂಬರ್ ಗಳನ್ನು ಮಾರಾಟ ಮಾಡುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ದೆಹಲಿ ಸಾರಿಗೆ ಇಲಾಖೆಯು ಫ್ಯಾನ್ಸಿ ನಂಬರ್ ಮಾರಾಟಕ್ಕಾಗಿ 2014ರಿಂದ ಆನ್‌ಲೈನ್ ಇ-ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿದೆ. ವಾಹನದ ನೋಂದಣಿ ಸಂಖ್ಯೆಯಾಗಿ ತಮ್ಮಿಷ್ಟದ ನಂಬರ್ ಪಡೆಯಲು ಬಯಸುವವರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ಈ ಹರಾಜಿನಲ್ಲಿ ಭಾಗವಹಿಸುತ್ತಿರುವವರು ಫ್ಯಾನ್ಸಿ ನಂಬರ್ ಪಡೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 0009 ಸಂಖ್ಯೆಯನ್ನು ರೂ.10.10 ಲಕ್ಷಗಳಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ಜುಲೈ ತಿಂಗಳಿನಲ್ಲಿ 0009 ಸಂಖ್ಯೆಯನ್ನು ಹರಾಜಿನ ಮೂಲಕವೇ ರೂ.7.10 ಲಕ್ಷಗಳಿಗೆ ಮಾರಾಟ ಮಾಡಲಾಗಿತ್ತು. ಈಗ ನಡೆದ ಹರಾಜಿನಲ್ಲಿ ಹಳೆಯ ಮೊತ್ತವನ್ನು ಹಿಂದಿಕ್ಕಲಾಗಿದೆ. 0003 ಹಾಗೂ 0007 ಸಂಖ್ಯೆಗಳನ್ನು ಸಹ ಉತ್ತಮ ಮೊತ್ತಕ್ಕೆ ಹರಾಜು ಮಾಡಲಾಗಿದೆ.

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ಈ ಎರಡು ಸಂಖ್ಯೆಗಳನ್ನು ತಲಾ ರೂ.3.10 ಲಕ್ಷಗಳಿಗೆ ಮಾರಾಟ ಮಾಡಲಾಗಿದೆ. ಕರೋನಾ ವೈರಸ್ ಕಾರಣದಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ವಾಹನಗಳ ಮಾರಾಟವು ಕುಸಿದು ಆಟೋಮೊಬೈಲ್ ಉದ್ಯಮವು ಸಂಕಷ್ಟಕ್ಕೀಡಾಗಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ಲಾಕ್ ಡೌನ್ ಸಡಿಲಿಕೆ ನಂತರ ವಾಹನಗಳ ಮಾರಾಟವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ದೆಹಲಿಯ ಸಾರಿಗೆ ಇಲಾಖೆಯು ಫ್ಯಾನ್ಸಿ ನಂಬರ್ ಗಳ ಮಾರಾಟಕ್ಕಾಗಿ ನಡೆಸುತ್ತಿರುವ ಹರಾಜು ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯುತ್ತಿದೆ.

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ಈ ಹರಾಜು ಪ್ರಕ್ರಿಯೆಯನ್ನು ಮಾರ್ಚ್‌ ತಿಂಗಳಿನಲ್ಲಿ ಸ್ಥಗಿತಗೊಳಿಸಲಾಗಿತ್ತು. ಹರಾಜನ್ನು ಏಪ್ರಿಲ್‌ನಲ್ಲಿ ಪುನರಾರಂಭಿಸಲಾಯಿತು. ಅಂದಿನಿಂದ ಆದಾಯವು ಸ್ಥಿರವಾಗಿ ಏರಿಕೆಯಾಗುತ್ತಿದೆ. ಏಪ್ರಿಲ್ ನಲ್ಲಿ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ 9000 ಸಂಖ್ಯೆಯನ್ನು ರೂ.1.50 ಲಕ್ಷಗಳಿಗೆ ಮಾರಾಟ ಮಾಡಲಾಗಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

10 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಫ್ಯಾನ್ಸಿ ನಂಬರ್

ಮೇ ತಿಂಗಳಿನಲ್ಲಿ 5 ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ರೂ.9.30 ಲಕ್ಷ ಸಂಗ್ರಹಿಸಲಾಗಿತ್ತು. ಜೂನ್‌ ತಿಂಗಳಿನಲ್ಲಿ ಈ ಮೊತ್ತವು ರೂ.21.70 ಲಕ್ಷಗಳಿಗೆ ಹಾಗೂ ಜುಲೈನಲ್ಲಿ ರೂ.33.80 ಲಕ್ಷಗಳಿಗೆ ಏರಿಕೆಯಾಯಿತು. ಏಪ್ರಿಲ್ ನಿಂದ ಆಗಸ್ಟ್ ತಿಂಗಳವರೆಗೆ ದೆಹಲಿಯ ಸಾರಿಗೆ ಇಲಾಖೆಯು ಫ್ಯಾನ್ಸಿ ನಂಬರ್ ಹರಾಜಿನಿಂದ ರೂ.99 ಲಕ್ಷ ಆದಾಯ ಸಂಗ್ರಹಿಸಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi transport department sells 0009 number for Rs 10 Lakhs. Read in Kannada.
Story first published: Thursday, October 1, 2020, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X