Delhi-Vadodara-Mumbai Expressway: 1,350 ಕಿಲೋಮೀಟರ್.. 12 ಗಂಟೆ ಪ್ರಯಾಣ, ವರ್ಷಾಂತ್ಯದೊಳಗೆ ಸಿದ್ದ!

ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ (Central Government) ಸಾಕಷ್ಟು ಶ್ರಮಪಡುತ್ತಿದೆ. ಅದರ ಭಾಗವಾಗಿ ಎಕ್ಸ್‌ಪ್ರೆಸ್‌ವೇ ಮತ್ತು ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತದ ಅತಿ ಉದ್ದದ ರಸ್ತೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ದೆಹಲಿ-ವಡೋದರಾ-ಮುಂಬೈ ಎಕ್ಸ್‌ಪ್ರೆಸ್‌ವೇ (Delhi-Vadodara-Mumbai Expressway) ಈ ವರ್ಷಾಂತ್ಯದೊಳಗೆ ಲೋಕಾರ್ಪಣೆಗೊಳ್ಳಬಹುದು.

ಕೇಂದ್ರ ಸರ್ಕಾರ ಮೈಗೋವ್ ಇಂಡಿಯಾ (MyGov India) ಯೂಟ್ಯೂಬ್ ವಾಹಿನಿಯಲ್ಲಿ ಬಹುತೇಕ ನಿರ್ಮಾಣಗೊಂಡಿರುವ ದೆಹಲಿ-ವಡೋದರಾ-ಮುಂಬೈ ಎಕ್ಸ್‌ಪ್ರೆಸ್‌ವೇಯ ವಿಡಿಯೋವನ್ನು ಹಂಚಿಕೊಂಡಿದೆ. ಈ ಹೆದ್ದಾರಿ ಕಾಮಗಾರಿಗೆ ಬರೋಬ್ಬರಿ ರೂ.1 ಲಕ್ಷ ಕೋಟಿ ಖರ್ಚಾಗಿದೆ ಎಂಬ ವಿವರಗಳು ಲಭ್ಯವಾಗಿದೆ. ಈಗಾಗಲೇ ಹರಿಯಾಣದ ಸೋಹ್ನಾದಿಂದ ರಾಜಸ್ಥಾನದ ದೌಸಾವರೆಗೆ (209 ಕಿಲೋಮೀಟರ್‌) ಎಕ್ಸ್‌ಪ್ರೆಸ್‌ವೇಯನ್ನು ತೆರೆಯಾಲಾಗಿದೆ.

Delhi-Vadodara-Mumbai Expressway Completion By 2024 End: 1350 Km, 12 Hours Journey

ದೆಹಲಿ-ವಡೋದರಾ-ಮುಂಬೈ ಹೆದ್ದಾರಿಯು ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. 1,350 ಕಿ.ಮೀ ಅಂತರವಿರುವ ಈ ರಸ್ತೆಯ ನಿರ್ಮಾಣ ಕೆಲಸಗಳು ಸಂಪೂರ್ಣವಾಗಿ ಮುಕ್ತಾಯಗೊಂಡ ಮೇಲೆ ದೆಹಲಿ-ಮುಂಬೈ ಮಧ್ಯೆ ಹೀಗಿರುವ ಪ್ರಯಾಣದ ಅವಧಿ 24 ಗಂಟೆಗಳಿಂದ 12 ಗಂಟೆಗಳಿಗೆ ಇಳಿಕೆಯಾಗುವ ಸಂಭವವಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ 30 ಟೋಲ್ ಪ್ಲಾಜಾಗಳು ಇರಲಿದ್ದು, ಪ್ರತಿಯೊಂದರಲ್ಲಿಯು 10 ಸೆಕೆಂಡುಗಳಿಗಿಂತ ಕಡಿಮೆ ಕಾಯುವಿಕೆ ಅವಧಿಯು ಇರಲಿದೆ ಎಂದು ವರದಿಯಾಗಿದೆ.

ಈ ದೆಹಲಿ-ವಡೋದರಾ-ಮುಂಬೈ ಎಕ್ಸ್‌ಪ್ರೆಸ್‌ವೇ (Delhi-Vadodara-Mumbai Expressway) ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಹಾದು ಹೋಗುತ್ತದೆ. ಇದು ದೆಹಲಿ, ಮುಂಬೈ ಕೋಟಾ, ಇಂದೋರ್, ಭೋಪಾಲ್, ಜೈಪುರ, ವಡೋದರಾ ಮತ್ತು ಸೂರತ್‌ನಂತಹ ದೊಡ್ಡ ನಗರಗಳಿಗೂ ಸಂಪರ್ಕವನ್ನು ಕಲ್ಪಿಸಲಿದ್ದು, ವ್ಯಾಪಾರ - ವಾಣಿಜ್ಯ ಚಟುವಟಿಕೆ ಹಾಗೂ ಪ್ರವಾಸೋದ್ಯಮ ವೃದ್ಧಿಸಲು ಸಹಾಯಕವಾಗಿದೆ.

Delhi-Vadodara-Mumbai Expressway Completion By 2024 End: 1350 Km, 12 Hours Journey

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮಾತ್ರವಲ್ಲದೆ, ದೇಶದಲ್ಲಿ ವಿವಿಧ ಹೆದ್ದಾರಿಗಳು ಸಹ ಅಭಿವೃದ್ಧಿ ಹಂತದಲ್ಲಿವೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway), ಕೂಡ ಈ ವರ್ಷ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. 262 ಕಿಮೀ ಉದ್ದದ ರಸ್ತೆ ಇದಾಗಿದ್ದು, ಈ ಹೆದ್ದಾರಿ ನಿರ್ಮಾಣಗೊಂಡ ಮೇಲೆ ಇವೆರೆಡು ನಗರಗಳ ಮಧ್ಯೆ ಈಗಿರುವ 5 ರಿಂದ 6 ಗಂಟೆ ಪ್ರಯಾಣದ ಅವಧಿಯು 3 ಗಂಟೆಗೆ ಕಡಿಮೆಯಾಗಲಿದೆ.

ದ್ವಾರಕಾ ಎಕ್ಸ್‌ಪ್ರೆಸ್‌ವೇ (Dwarka Expressway) ಸಹ ಕೆಲವೇ ತಿಂಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಬಹುದು. ಇದು 27.6 ಕಿ.ಮೀ ಉದ್ದದ ಹೆದ್ದಾರಿಯಾಗಿದ್ದು, ಲೋಕಾರ್ಪಣೆಗೊಂಡ ನಂತರ, ದೆಹಲಿ ಹಾಗೂ ಹರಿಯಾಣ ರಾಜ್ಯಗಳ ನಡುವೆ ಸಾರಿಗೆ ಸಂಪರ್ಕ ಸುಧಾರಿಸಲಿದೆ. ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ (Delhi-Amritsar-Katra Expressway) ಕಾಮಗಾರಿಯು ಭರದಿಂದ ನಡೆಯುತ್ತಿದೆ. ಈ ಹೆದ್ದಾರಿಯು 669 ಕಿಮೀ ಉದ್ದವಿದೆ. ಇಲ್ಲಿ ವಾಹನ ಸಂಚಾರ ಆರಂಭವದ ಮೇಲೆ ದೆಹಲಿಯಿಂದ ಕತ್ರಾಗೆ 6 ಗಂಟೆಗಳಲ್ಲಿ ತೆರಳಬಹುದು.

Delhi-Vadodara-Mumbai Expressway Completion By 2024 End: 1350 Km, 12 Hours Journey

ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ (Delhi-Dehradun Expressway) ಕೂಡ ನಿರ್ಮಾಣ ಹಂತದಲಿದೆ. ಈ ವರ್ಷವೇ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದ್ದು, ದೆಹಲಿ-ಡೆಹ್ರಾಡೂನ್ ಮಧ್ಯೆ ಈಗಿರುವ 5 ಗಂಟೆ 15 ನಿಮಿಷ ಪ್ರಯಾಣದ ಅವಧಿ 3 ಗಂಟೆಗೆ ಕಡಿಮೆಯಾಗಲಿದೆ. ಇನ್ನು, ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಕ್ಸ್‌ಪ್ರೆಸ್‌ವೇ ಮತ್ತು ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇವು ದೇಶದ ಪ್ರಗತಿಗೆ ಮಹತ್ವದ ಪಾತ್ರವನ್ನು ವಹಿಸಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 8, 2024, 12:33 [IST]
English summary
Delhi vadodara mumbai expressway completion by 2024 end 1350 km 12 hours journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+