ವಾರಗಳ ಅಂತರದಲ್ಲಿ ಬಹುಕೋಟಿ ಬೆಲೆಯ ಸೂಪರ್ ಕಾರುಗಳ ಖರೀದಿ: ಯಾರೀತ?
ಭಾರತವು ಐಷಾರಾಮಿ ಕಾರುಗಳಿಗೆ ಹೆಚ್ಚು ಬೇಡಿಕೆಯಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಮರ್ಸಿಡಿಸ್ ಬೆಂಝ್ ಕಾರಿನಿಂದ ಹಿಡಿದು ಪ್ರಪಂಚದ ಇತರ ಪ್ರಸಿದ್ಧ ಐಷಾರಾಮಿ ಬ್ರಾಂಡ್‌ಗಳು ನಮ್ಮ ದೇಶದಲ್ಲಿ ಈಗಾಗಲೇ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದೆ. ನಮ್ಮಲ್ಲಿ ಹೆಚ್ಚಿನವರು ದುಬಾರಿ ಕಾರುಗಳ ಕನಸು ಕಾಣಲು ಕಾಣುತ್ತಿದ್ದರೆ, ಅನೇಕ ಶ್ರೀಮಂತರು ಪ್ರತಿ ದಿನ ಒಂದಕ್ಕಿಂತ ಹೆಚ್ಚು ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ. ಇಂತಹ ಸಂಗತಿಗಳು ಅಪರೂಪವಲ್ಲದಿದ್ದರೂ, ಕೆಲವೇ ದಿನಗಳಲ್ಲಿ ಎರಡು ಐಷಾರಾಮಿ ವಾಹನಗಳನ್ನು ಖರೀದಿಸಿದ ಯುವ ಉದ್ಯಮಿಯೊಬ್ಬರು ಈಗ ಇಂಟರ್ ನೆಟ್ ಲೋಕದ ಚರ್ಚೆಯಾಗಿದ್ದಾರೆ.
ಡಿಟೈಲಿಂಗ್ ಡೆವಿಲ್ ಎಂಬ ಕಾರ್ ಡಿಟೇಲಿಂಗ್ ಬ್ರ್ಯಾಂಡ್ ಮಾಲೀಕ ಸೌರಭ್ ಅಹುಜಾ ಎರಡು ದಿನಗಳ ಅಂತರದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಕಳೆದ ತಿಂಗಳು 6 ಕೋಟಿ ಮೌಲ್ಯದ ಮೆಕ್ಲಾರೆನ್ ಆರ್ಟುರಾ ಸೂಪರ್ ಕಾರನ್ನು ಖರೀದಿಸಿದ್ದ ಸೌರಭ್ ಇದೀಗ ಮರ್ಸಿಡಿಸ್ ಬೆಂಝ್ G63 ಎಎಂಜಿ (Mercedes-Benz G 63 AMG) ಎಸ್‍ಯುವಿಯನ್ನು ಖರೀದಿಸಿದ್ದಾರೆ. ಜಿ-ವ್ಯಾಗನ್ ಎಂದು ಕರೆಯಲ್ಪಡುವ ವಿಶ್ವವಿಖ್ಯಾತ ಸ್ಪೋರ್ಟ್ಸ್ ಯುಟಿಲಿಟಿ ವೈಕಲ್ ಉದ್ಯಮಿಯ ಮನೆಗೆ ಎತಲುಪಿದೆ.

ಡಿಟೈಲಿಂಗ್ ಡೆವಿಲ್ಸ್‌ನ ಸಂಸ್ಥಾಪಕ ಮತ್ತು ಮಾಲೀಕ ಸೌರಭ್ ಅಹುಜಾ ಅವರು ವಿಶ್ವಾದ್ಯಂತ 100ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದಾರೆ. ಈ ಹೊಸ ಐಷಾರಾಮಿ ಎಸ್‌ಯುವಿಯ ಮಾಲೀಕರ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ದಿ ರೆಗ್ಯುಲರ್ ಇಂಡಿಯನ್ ಗೈ ಬಿಡುಗಡೆ ಮಾಡಿದೆ. ಈ ವಾಹನವನ್ನು ಖರೀದಿಸುವ ಹಿಂದಿನ ಕಥೆಯನ್ನು ಅಹುಜಾ ವೀಡಿಯೊದಲ್ಲಿ ವಿವರಿಸಿದ್ದಾರೆ.
ಅವರು ಈಗಾಗಲೇ ಜಿ-ವ್ಯಾಗನ್‌ನ G350d ರೂಪಾಂತರವನ್ನು ಹೊಂದಿದ್ದರು ಆದರೆ ಹೆಚ್ಚು ಶಕ್ತಿಶಾಲಿ ಮತ್ತು ವಿಶೇಷವಾದ ಎಎಂಜಿ ಮಾದರಿಯನ್ನು ಖರೀದಿಸಲು ಬಹಳ ಸಮಯದಿಂದ ಕಾಯುತ್ತಿದ್ದರು. ಸೌರಭ್ ಅವರು ಹುಟ್ಟುಹಬ್ಬದಂದು ಈ ಹೊಸ ಮರ್ಸಿಡಿಸ್ ಬೆಂಝ್ G63 ಎಎಂಜಿ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.60 ಕೋಟಿಯಾಗಿದೆ.

ಮರ್ಸಿಡಿಸ್ G63 AMG ಕಾರಿನ ಬಗ್ಗೆ ಹೇಳುವುದಾದರೆ, ಇದು ಬೆಂಝ್ ಸರಣಿಯಲ್ಲಿನ ಅತ್ಯಂತ ಶಕ್ತಿಶಾಲಿ ಎಸ್‍ಯುವಿಯಾಗಿದೆ. ಈ ಮರ್ಸಿಡಿಸ್ G63 AMG ಎಸ್‍ಯುವಿಯಲ್ಲಿ 4.0 ಲೀಟರ್ V8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 585 bhp ಪವರ್ ಮತ್ತು 850 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ AMG ಸ್ಪೀಡ್‌ಶಿಫ್ಟ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಈ ಮರ್ಸಿಡಿಸ್ G63 AMG ಎಸ್‍ಯುವಿಯು 4.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮರ್ಸಿಡಿಸ್ G63 AMG ಎಸ್‍ಯುವಿಯಲ್ಲಿ 4MATIC ತಂತ್ರಜ್ಞಾನವು ಕಾರಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಮರ್ಸಿಡಿಸ್ G63 AMG ಕಾರಿನ ಫೀಚರ್ಸ್ ಬಗ್ಗೆ ಹೇಳುವುದಾದರೆ. ಈ ಎಸ್‍ಯುವಿಯಲ್ಲಿ ಆಂಬಿಯೆಂಟ್ ಲೈಟಿಂಗ್, MBUX NTG7 ಇನ್ಫೋಟೈನ್‌ಮೆಂಟ್ ಸಿಸ್ಟಮ್, Apple CarPlay ಮೂಲಕ ಸ್ಮಾರ್ಟ್‌ಫೋನ್ ಸಂಪರ್ಕ, Android Auto, ವರ್ಧಿತ ರಿಯಾಲಿಟಿ ನ್ಯಾವಿಗೇಶನ್, 12.3-ಇಂಚಿನ ಮಾಹಿತಿಯ ಡಿಸ್‌ಪ್ಲೇ, ಡ್ರೈವರ್ ಡಿಸ್‌ಪ್ಲೇ ಮತ್ತು ಕೀ ಲೆಸ್ ಎಂಟ್ರಿ ಮತ್ತು ಇತರ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








