ಇದೇ ಅಲ್ವಾ ದೋಸ್ತಿ ಅಂದ್ರೆ.. ನಟ ಧ್ರುವ ಸರ್ಜಾರಿಂದ ಪ್ರಾಣ ಸ್ನೇಹಿತನಿಗೆ ಭಾರೀ ಬೆಲೆಯ Toyota ಕಾರು ಗಿಫ್ಟ್

ನಟ ಧ್ರುವ ಸರ್ಜಾ 'ಆಕ್ಷನ್ ಪ್ರಿನ್ಸ್' ಅಂತಲೇ ಖ್ಯಾತಿಗಳಿಸಿದ್ದು, ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. 'ಅದ್ದೂರಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಧ್ರುವ, ಸ್ಯಾಂಡಲ್ ವುಡ್ ಫೇಮಸ್ ಖಳನಟ ಶಕ್ತಿಪ್ರಸಾದ್ ಮೊಮ್ಮಗ, ನಟ ಅರ್ಜುನ್ ಸರ್ಜಾ ಅಳಿಯ. ಸದ್ಯ, ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ, ತನ್ನ ಪ್ರಾಣ ಸ್ನೇಹಿತ ಅಶ್ವಿನ್ ಅವರಿಗೆ ಧ್ರುವ ಸರ್ಜಾ, ಬರೋಬ್ಬರಿ ರೂ.52 ಲಕ್ಷ ಬೆಲೆಯ ಟೊಯೊಟಾ ಫಾರ್ಚುನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಆತನ ಹುಟ್ಟುಹಬ್ಬಕ್ಕೆ ಸಡನ್ ಸರ್ಪ್ರೈಸ್‌ ಕೊಟ್ಟಿದ್ದಾರೆ. ಈ ಅಪರೂಪದ ಕ್ಷಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ. ಅಶ್ವಿನ್, ಧ್ರುವ ಸರ್ಜಾ ಅವರ ಸಿನಿಮಾಗಳಿಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ಇದೇ ಅಲ್ವಾ ದೋಸ್ತಿ ಅಂದ್ರೆ.. ನಟ ಧ್ರುವ ಸರ್ಜಾರಿಂದ ಪ್ರಾಣ ಸ್ನೇಹಿತನಿಗೆ ಭಾರೀ ಬೆಲೆಯ Toyota ಕಾರು ಗಿಫ್ಟ್

ಅಶ್ವಿನ್ ಹುಟ್ಟುಹಬ್ಬದ ದಿನ ಧ್ರುವ ಸರ್ಜಾ ದುಬಾರಿ ಬೆಲೆಯ ಕಾರನ್ನು ನೀಡಿ, ಸುಮ್ಮನಾಗಿಲ್ಲ. ಬಾಲ್ಯದಲ್ಲಿಯೇ ಮೃತಪಟ್ಟಿರುವ ಅಶ್ವಿನ್ ಅವರ ತಂದೆ, ತಾಯಿ ಫೋಟೊನ್ನು ಸ್ವತಃ ತಾವೇ ಹುಡುಕಿ, ಕಾರಿನಲ್ಲಿಟ್ಟು ಉಡುಗೊರೆಯಾಗಿ ನೀಡಿದ್ದಾರೆ. ಸಂಕಷ್ಟದಲ್ಲಿದ್ದ ಅಶ್ವಿನ್ ಅವರನ್ನು ಕರೆತಂದು ತನ್ನ ಜೊತೆ ಇಟ್ಟುಕೊಂಡಿರುವ ಧ್ರುವ ಸರ್ಜಾ, ಅವರ ಜೀವನಕ್ಕೂ ದಾರಿ ಮಾಡಿಕೊಟ್ಟಿದ್ದಾರೆ.

ಧ್ರುವ ಸರ್ಜಾ ಅವರೇ, ಅಶ್ವಿನ್ ಜೊತೆ ಟೊಯೊಟಾ ಶೋರೂಂಗೆ ತೆರಳಿ, ಕಾರನ್ನು ಸರ್ಪ್ರೈಸ್‌ ಗಿಫ್ಟ್ ನೀಡಿದರು. ಈ ವೇಳೆ, ಅಲ್ಲಿಯೇ ಕೇಕ್ ಕಟ್ ಮಾಡಿ, ಸಂಭ್ರಮಿಸಲಾಯಿತು. ಸಂತೋಷಕ್ಕೆ ಅಶ್ವಿನ್ ಕಣ್ಣೀರು ಹಾಕಿದ್ದರಂತೆ. ಈ ಬಗ್ಗೆ ಅಶ್ವಿನ್ ಅವರೇ ಪ್ರತಿಕ್ರಿಯಿಸಿದ್ದು, ಧ್ರುವ ಸರ್ಜಾ ಅವರು, ಕಷ್ಟವೆಂದೂ ಬರುವ ಪ್ರತಿಯೊಬ್ಬಗೂ ಸಹಾಯ ಮಾಡುತ್ತಾರೆ. ಆದರೆ, ಎಲ್ಲಿಯೂ ಕಾಣಿಸಿಕೊಳ್ಳದೇ ತೆರೆಮರೆಯಲ್ಲಿ ಇದ್ದು ಬಿಡುತ್ತಾರೆ' ಎಂದು ಹೇಳಿದ್ದಾರೆ.

ನಟ ಧ್ರುವ ಸರ್ಜಾ, ಎರಡು ವಿಭಿನ್ನ ಕಥಾಹಂದರದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಎ.ಪಿ.ಅರ್ಜುನ್ ಆಕ್ಷನ್ ಕಟ್ ಹೇಳುತ್ತಿರುವ 'ಮಾರ್ಟಿನ್' ಶೀಘ್ರದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು, ಆ ಬಳಿಕ 'ಅಬ್ಬರ' ಚಿತ್ರ ಧೂಳೆಬ್ಬಿಸಲು ರೆಡಿಯಾಗಿದೆ. ಈ ಹಿಂದೆ, ದುಬಾರಿ ಬೆಲೆಯ ಪೋರ್ಷೆ ಕಾರಿಗೆ ಕನ್ನಡದಲ್ಲಿಯೇ ನಂಬರ್ ಪ್ಲೇಟ್ ಹಾಕಿಸುವ ಮೂಲಕ ಧ್ರುವ ಸರ್ಜಾ ಸಖತ್ ಸುದ್ದಿ ಮಾಡಿದ್ದರು.

ಇನ್ನು, ಟೊಯೊಟಾ ಫಾರ್ಚುನರ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಈ ಫುಲ್ ಸೈಜ್ ಎಸ್‌ಯುವಿ ಭಾರತದ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮತ್ತು ಲೆಜೆಂಡರ್ ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. ವೇರಿಯೆಂಟ್ ಗೆ ಅನುಗುಣವಾಗಿ ರೂ.32.59 - 50.34 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಆನ್-ರೋಡ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬೇರೆ ಇರುತ್ತದೆ.

ಟೊಯೊಟಾ ಫಾರ್ಚುನರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 10.0 kmpl ಮೈಲೇಜ್ ನೀಡುತ್ತದೆ. ಇದು 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್ ಬಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Friday, June 16, 2023, 10:28 [IST]
English summary
Dhruva sarja toyota fortuner car gift his friend birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+