ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಭಾರತದಲ್ಲಿ ಕರೋನಾ ವೈರಸ್‌ನ ಎರಡನೇ ಅಲೆಯ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ 85%ನಷ್ಟು ಸೋಂಕಿತರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಇನ್ನುಳಿದ 15%ನಷ್ಟು ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗಳಿಗೆ ತೆರಳಲು 108 ನಂಬರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಸೇವೆಯನ್ನು ಪಡೆಯಬಹುದು. ಅಥವಾ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಿ ಆಂಬ್ಯುಲೆನ್ಸ್ ಸೇವೆಯನ್ನು ಪಡೆಯಬಹುದು. ಸಾಮಾನ್ಯ ಆಂಬ್ಯುಲೆನ್ಸ್'ಗಳಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿ ಇರುತ್ತಾರೆ. ಜೊತೆಗೆ ಆಕ್ಸಿಜನ್ ಸೌಲಭ್ಯವೂ ಇರುತ್ತದೆ.

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಕೋವಿಡ್ 19 ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವೆಂಟಿಲೇಟರ್ ಸೌಲಭ್ಯಗಳನ್ನು ಹೊಂದಿರುವ ಆಂಬುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅನೇಕಖಾಸಗಿ ಕಂಪನಿಗಳು ಈ ಸೇವೆಯನ್ನು ನೀಡುತ್ತವೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಇನ್ನೂ ಕೆಲವು ಆಂಬ್ಯುಲೆನ್ಸ್‌ಗಳು ಪೂರ್ಣ ಐಸಿಯು ಸೌಲಭ್ಯವನ್ನು ಹೊಂದಿರುತ್ತವೆ. ಈ ಆಂಬ್ಯುಲೆನ್ಸ್‌ಗಳಲ್ಲಿ ರೋಗಿಯ ಜೀವ ಉಳಿಸಲು ಬೇಕಾದ ವಿವಿಧ ಸೌಲಭ್ಯಗಳನ್ನು ಅಳವಡಿಸಲಾಗಿರುತ್ತದೆ. ಈ ಆಂಬ್ಯುಲೆನ್ಸ್‌ಗಳ ಬಾಡಿಗೆ ತುರ್ತು ಆಂಬ್ಯುಲೆನ್ಸ್‌ಗಳಿಗಿಂತ ಹೆಚ್ಚು.

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಕರೋನಾ ಸೋಂಕಿತರಿಗೆ ತುರ್ತು ಆಂಬ್ಯುಲೆನ್ಸ್ ಸೂಕ್ತವೆಂದು ವೈದ್ಯರು ಹೇಳುತ್ತಾರೆ. ಖಾಸಗಿ ಕಂಪನಿಯಿಂದ ತುರ್ತು ಆಂಬ್ಯುಲೆನ್ಸ್ ಪಡೆಯುತ್ತಿದ್ದರೆ, ಆ ಆಂಬ್ಯುಲೆನ್ಸ್ ಆಕ್ಸಿಜನ್ ಸೌಲಭ್ಯವನ್ನು ಹೊಂದಿದೆಯೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ರೋಗಿಗಳಿಗೆ ಮನೆಯಲ್ಲಿ ಆಕ್ಸಿಜನ್ ಸೇವೆಯನ್ನು ಒದಗಿಸುವ ಆಂಬ್ಯುಲೆನ್ಸ್'ಗಳಿಗೆ ವ್ಯಾನ್ ಆಂಬ್ಯುಲೆನ್ಸ್ ಅಥವಾ ಕಾರ್ ಆಂಬ್ಯುಲೆನ್ಸ್ ಎಂದು ಕರೆಯಲಾಗುತ್ತದೆ.ಭಾರತದಲ್ಲಿ 6 ವಿಧದ ರೀತಿಯ ಆಂಬ್ಯುಲೆನ್ಸ್ ಸೇವೆಗಳಿವೆ.

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಇವುಗಳಲ್ಲಿ ಮೊದಲ ವಿಧದ ಆಂಬ್ಯುಲೆನ್ಸ್ ಮೂಲ ಆಂಬ್ಯುಲೆನ್ಸ್. ಕೆಲವು ದಿನಗಳವರೆಗೆ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಇದ್ದರೆ ಈ ಆಂಬ್ಯುಲೆನ್ಸ್ ಬಳಸಲಾಗುತ್ತದೆ. ಎರಡನೇ ವಿಧದ ಆಂಬ್ಯುಲೆನ್ಸ್ ಸುಧಾರಿತ ಆಂಬ್ಯುಲೆನ್ಸ್.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಇದನ್ನು ಎಮರ್ಜೆನ್ಸಿ ಆಂಬ್ಯುಲೆನ್ಸ್ ಎಂದೂ ಕರೆಯುತ್ತಾರೆ. ಈ ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳಿರುತ್ತವೆ. ಮೂರನೆಯ ವಿಧದ ಆಂಬ್ಯುಲೆನ್ಸ್ ಎಂದರೆ ಮಾರ್ಚುಯರಿ ಆಂಬುಲೆನ್ಸ್.

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಈ ಆಂಬ್ಯುಲೆನ್ಸ್‌ಗಳನ್ನು ಸತ್ತವರ ದೇಹಗಳನ್ನು ಸಾಗಿಸಲು ಬಳಸಲಾಗುತ್ತದೆ. ನಾಲ್ಕನೇ ವಿಧದ ಆಂಬ್ಯುಲೆನ್ಸ್ ಅನ್ನು ನವಜಾತ ಶಿಶುಗಳಿಗಾಗಿ ಬಳಸಲಾಗುತ್ತದೆ.ಈ ಆಂಬ್ಯುಲೆನ್ಸ್'ನಲ್ಲಿ ಮಕ್ಕಳಿಗೆ ಅಗತ್ಯವಾದ ವಿವಿಧ ಸೌಲಭ್ಯಗಳಿರುತ್ತವೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಐದನೇ ವಿಧದ ಆಂಬ್ಯುಲೆನ್ಸ್ ಅನ್ನು ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಬಳಸಲಾಗುತ್ತದೆ. ಈ ಆಂಬ್ಯುಲೆನ್ಸ್ ಅನ್ನು ರೋಗಿಗಳ ಪಾಲಿನ ಸಾರಿಗೆ ವಾಹನವೆಂದು ಕರೆಯಲಾಗುತ್ತದೆ.

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಆರನೇ ವಿಧದ ಆಂಬುಲೆನ್ಸ್‌ಗಳು ಏರ್ ಆಂಬುಲೆನ್ಸ್‌ಗಳಾಗಿವೆ. ಈ ಆಂಬ್ಯುಲೆನ್ಸ್'ನಲ್ಲಿ ರೋಗಿಗಳನ್ನು ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಾಗಿಸಲಾಗುತ್ತದೆ. ಈ ಆಂಬ್ಯುಲೆನ್ಸ್ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಲು ಸೂಕ್ತವಾಗಿದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಈ ಆಂಬ್ಯುಲೆನ್ಸ್ ರೋಗಿಗಳನ್ನು ವೇಗವಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಲು ಅನುವು ಮಾಡಿಕೊಡುತ್ತದೆ. ರೋಗಿಗಳನ್ನು ವೇಗವಾಗಿ ಆಸ್ಪತ್ರೆಗೆ ಸೇರಿಸಲು ಏರ್ ಆಂಬ್ಯುಲೆನ್ಸ್ ಸೂಕ್ತವಾದ ಮಾರ್ಗವಾಗಿದೆ.

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಭಾರತದಲ್ಲಿ ಈಗ ಆಂಬ್ಯುಲೆನ್ಸ್‌ಗಳ ಕೊರತೆ ಎದುರಾಗಿರುವುದರಿಂದ ರೋಗಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಅಥವಾ ಬೇರೆ ರೀತಿಯಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಹಲವರು ಭಾವಿಸುತ್ತಾರೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಭಾರತದಲ್ಲಿ ಬಳಕೆಯಲ್ಲಿರುವ ವಿವಿಧ ಬಗೆಯ ಆಂಬ್ಯುಲೆನ್ಸ್'ಗಳಿವು

ಆದರೆ ಇದು ನಿಜಕ್ಕೂ ಅಪಾಯಕಾರಿ ಸಂಗತಿ. ಇದರಿಂದ ಕಾರಿನಲ್ಲಿರುವವರಿಗೂ ಕರೋನಾ ಸೋಂಕು ತಗುಲಬಹುದು. ಆದ್ದರಿಂದ ಕರೋನಾ ಸೋಂಕಿತರನ್ನುಆಂಬ್ಯುಲೆನ್ಸ್‌ಗಳಲ್ಲಿಯೇ ಆಸ್ಪತ್ರೆಗೆ ಸಾಗಿಸುವುದು ಉತ್ತಮ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Different kinds of ambulances available in India. Read in Kannada.
Story first published: Thursday, May 27, 2021, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X