Helmet Head up Display: ವಾಹನ ಸವಾರರೇ ಈಗಿನ ತಂತ್ರಜ್ಞಾನ ಇದರ ಮುಂದೆ ಡಮ್ಮಿಯಾಗಲಿದೆ!

ದ್ವಿಚಕ್ರ ವಾಹನ ಸವಾರರು ತಮ್ಮ ಹೆಲ್ಮೆಟ್‌ನಲ್ಲಿ ಬಳಸಲು Helmet Head up Display ಅನ್ನು ಅಭಿವೃದ್ಧಿಪಡಿಸಲಾಗಿದೆ. ದ್ವಿಚಕ್ರ ವಾಹನ ಕಾರ್ಯಾಚರಣೆಯನ್ನು ಸುಲಭಗೊಳಿಸಲು ಈ ಹೈಟೆಕ್ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ಈ ಸಾಧನವನ್ನು ಮಾರಾಟಕ್ಕೂ ಪರಿಚಯಿಸಲಾಗಿದೆ. ಈ ಅತ್ಯಾಧುನಿಕ ಹೆಲ್ಮೆಟ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಕೇವಲ ಕಾರುಗಳಲ್ಲಿ ಕಾಣುತ್ತಿದ್ದ ಹೆಡ್‌ಅಪ್ ಡಿಸ್ಪ್ಲೆಯನ್ನು ಈಗ ನಾವು ಮೋಟಾರ್‌ಸೈಕಲ್ ಓಡಿಸುವಾಗಲು ಬಳಸಬಹುದು. ಹೌದು ಹೆಲ್ಮೆಟ್ ಬಳಸುತ್ತಾ ನಾವು ಅದರೊಳಗೆ ಸಣ್ಣ ಸ್ಕ್ರೀನ್ ಮೂಲಕ ಗೇರ್ ಇಂಡಿಕೇಷನ್, rpm, ವೇಗ ಮಿತಿ, ಇಂಧನ ಮಟ್ಟ, ಸಮಯ ಮತ್ತು ಮಾರ್ಗದ ಬಗ್ಗೆ ಎಲ್ಲಾ ಪ್ರಮುಖ ಮಾಹಿತಿಯನ್ನು ಪಡೆಯಬಹುದು.

digades-sygic-launch-helmet-head-up-display

ಇಂತಹ ಒಂದು ಹೆಲ್ಮೆಟ್‌ಗಾಗಿ ಎರಡು ವಿಶ್ವಪ್ರಸಿದ್ಧ ಕಂಪನಿಗಳು ಒಗ್ಗೂಡಿ ಅತ್ಯಂತ ಚಿಕ್ಕದಾದ ಹೆಡ್‌ಅಪ್ ಡಿಸ್‌ಪ್ಲೇಯನ್ನು ರೂಪಿಸಿವೆ. Tilsberk ಜರ್ಮನಿಯ ಕಂಪನಿಯಾದ Digades ಒಡೆತನದಲ್ಲಿದೆ. ಈ ಕಂಪನಿಯು ದ್ವಿಚಕ್ರ ವಾಹನ ಸವಾರರಿಗಾಗಿ ಹೆಡ್‌ಅಪ್ ಡಿಸ್‌ಪ್ಲೇಯನ್ನು ಅಭಿವೃದ್ಧಿಪಡಿಸಿದೆ. ಡಿಲ್ಸ್‌ಬರ್ಗ್ ಕಂಪನಿಯು ಈ ಉಪಕರಣವನ್ನು ಮತ್ತೊಂದು ಕಂಪನಿಯ ಸಹಭಾಗಿತ್ವದಲ್ಲಿ ತಯಾರಿಸುತ್ತದೆ.

ನ್ಯಾವಿಗೇಷನ್ ತಂತ್ರಜ್ಞಾನ ಕಂಪನಿ ಸಿಜಿಕ್ ಸಹಯೋಗದಲ್ಲಿ ದ್ವಿಚಕ್ರ ವಾಹನಗಳಿಗೆ ಹೆಡ್‌ ಅಪ್ ಡಿಸ್‌ಪ್ಲೇಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ತಯರಿಸಿರುವ ಗೇರ್ ಅನ್ನು ದ್ವಿಚಕ್ರ ವಾಹನಕ್ಕೆ ಜೋಡಿಸಿದರೆ, ಮೋಟಾರ್ ಸೈಕಲ್ ಹಾಗೂ ರೈಡ್ ಕುರಿತ ವಿವಿಧ ಪ್ರಮುಖ ಮಾಹಿತಿಯನ್ನು ಈ ಸ್ಕ್ರೀನ್ ಮೂಲಕವೇ ತಿಳಿದುಕೊಳ್ಳಬಹುದು ಎಂಬುದು ಗಮನಿಸಬೇಕಾದ ಸಂಗತಿ.

digades-sygic-launch-helmet-head-up-display

ಮೊಬೈಲ್ ನೋಡುತ್ತಾ ಅಥವಾ ಬೈಕಿನ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ನೋಡುತ್ತಾ ಪ್ರಯಾಣ ಮಾಡುವುದನ್ನು ತಪ್ಪಿಸಲು ಈ ಹೆಲ್ಮೆಟ್ ತುಂಬಾ ಸಹಾಯಕವಾಗಲಿದೆ. ವಾಹನ ಚಲಾಯಿಸುವಾಗ ಮಾರ್ಗ ತಿಳಿಯಲು ಸೆಲ್ ಫೋನ್ ಪರದೆ ಅಥವಾ ದ್ವಿಚಕ್ರ ವಾಹನದ ಪರದೆ ನೋಡಬೇಕಾದ ಪರಿಸ್ಥಿತಿ ಇದೆ. ಹಾಗೆ ನೋಡಿದರೆ ತಬ್ಬಿಬ್ಬಾಗಿ ಅಪಘಾತವಾಗುವ ಸಂಭವಗಳು ಹೆಚ್ಚು.

ಈ ಸಾಧನವನ್ನು ಬ್ಲೂಟೂತ್ ಮೂಲಕ ಸೆಲ್ ಫೋನ್‌ನೊಂದಿಗೂ ಜೋಡಿಸಬಹುದು. ಅಲ್ಲದೆ, ಈ ಸಾಧನವನ್ನು ಒಂದು ಪೂರ್ಣ ಚಾರ್ಜ್‌ನಲ್ಲಿ 12 ಗಂಟೆಗಳವರೆಗೆ ಬಳಸಬಹುದು. ಇದಕ್ಕಾಗಿ ಬ್ಯಾಕ್-ಅಪ್ ಒದಗಿಸಲು ಬ್ಯಾಟರಿ ಪ್ಯಾಕ್ ಅನ್ನು ಒದಗಿಸಲಾಗಿದೆ. ಈ ಸಾಧನವನ್ನು ಯಾವುದೇ ಹೆಲ್ಮೆಟ್‌ನಿಂದ ಸುಲಭವಾಗಿ ಜೋಡಿಸಬಹುದು ಹಾಗೂ ತೆಗೆಯಬಹುದು ಎಂದು ತಯಾರಕರು ಹೇಳಿದ್ದಾರೆ.

digades-sygic-launch-helmet-head-up-display

ಈ ಸಾಧನನಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಕೂಡ ಒದಗಿಸಲಾಗಿದೆ. ಹೆಡ್ಸ್-ಅಪ್ ಸ್ಕ್ರೀನ್ ಅನ್ನು ನಿಯಂತ್ರಿಸಲು ಮತ್ತು ಕಸ್ಟಮೈಸ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಪ್ರಸ್ತುತ, ಈ ಸಾಧನವನ್ನು ಜರ್ಮನಿಯಲ್ಲಿ ಮಾತ್ರ ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಸಾಧನವು ಶೀಘ್ರದಲ್ಲೇ ಜಾಗತಿಕವಾಗಿ ಮಾರಾಟವಾಗಲಿದೆ ಎಂದು ಹೇಳಲಾಗುತ್ತದೆ.

ಮುಂದಿನ ದಿನಗಳಲ್ಲಿ ಭಾರತಕ್ಕೂ ಬರುವ ನಿರೀಕ್ಷೆಯಿದ್ದು, ಇದು ಮಾರಾಟಕ್ಕೆ ಲಭ್ಯವಾದರೆ ಅಪಘಾತಗಳಲ್ಲಿ ಭಾರಿ ಇಳಿಕೆ ಕಂಡುಬರುತ್ತದೆ. ಹೆಡ್‌-ಅಪ್ ಡಿಸ್ಪ್ಲೆ ಚಾಲಕರ ಗಮನ ಸೆಳೆಯದೆಯೇ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಮೊದಲೇ ಹೇಳಿದಂತೆ ಒಮ್ಮೆ ಮಾರಾಟಕ್ಕೆ ಲಭ್ಯವಾದರೆ ಅಪಘಾತಗಳ ಸಂಖ್ಯೆ ಕೂಡ ಇಳಿಕೆಯಾಗಲಿದೆ.

Article Published On: Sunday, July 16, 2023, 10:00 [IST]
English summary
Digades sygic launch helmet head up display
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+