ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

ಖ್ಯಾತ ಹಾಸ್ಯನಟ ಹಾಗೂ ಟಿವಿ ಶೋ ನಿರೂಪಕ ಕಪಿಲ್ ಶರ್ಮಾ ಅವರಿಗೆ ವಂಚಿಸಿದ ಆರೋಪದಡಿಯಲ್ಲಿ ಕಾರ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರನ್ನು ಮುಂಬೈ ಅಪರಾಧ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

2017ರಲ್ಲಿ ವ್ಯಾನಿಟಿ ವ್ಯಾನ್ ವಿನ್ಯಾಸಗೊಳಿಸಲು ಕಪಿಲ್ ಶರ್ಮಾ ದಿಲೀಪ್ ಛಾಬ್ರಿಯಾಗೆ ರೂ.5.70 ಕೋಟಿ ನೀಡಿದ್ದರು. ಆದರೆ ಇದುವರೆಗೂ ಈ ವ್ಯಾನ್ ಅನ್ನು ಕಪಿಲ್ ಶರ್ಮಾಗೆ ವಿತರಿಸಿಲ್ಲವೆಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಕಪಿಲ್ ಶರ್ಮಾರವರು 2018ರಲ್ಲಿ ಪೂರ್ತಿ ಹಣವನ್ನು ನೀಡಿದ್ದರು.

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

ಇಷ್ಟಕ್ಕೆ ಸುಮ್ಮನಾಗದ ದಿಲೀಪ್ ಛಾಬ್ರಿಯಾ 2018ರ ಜುಲೈನಲ್ಲಿ ಜಿಎಸ್‌ಟಿ ಎಂದು ಕಪಿಲ್ ಶರ್ಮಾರವರಿಂದ ರೂ.40 ಲಕ್ಷ ಪೀಕಿದ್ದಾನೆ. ಆದರೂ ವ್ಯಾನ್ ಅನ್ನು ಕಪಿಲ್‌ ರವರಿಗೆ ತಲುಪಿಸಿಲ್ಲ. ಇದಾದ ನಂತರವೂ ಮತ್ತೆ ರೂ.60 ಲಕ್ಷ ನೀಡಬೇಕೆಂದು ಕೇಳಿದ್ದಾನೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

ಇದರಿಂದ ರೋಸಿ ಹೋದ ಕಪಿಲ್ ಶರ್ಮಾ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಪಿಲ್ ಶರ್ಮಾ, ದಿಲೀಪ್ ಛಾಬ್ರಿಯಾ ವಿರುದ್ಧ 2019ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ದೂರು ನೀಡಿದ್ದರು.

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

ದಿಲೀಪ್ ಛಾಬ್ರಿಯಾ ವಿರುದ್ಧ ಕ್ರಮ ಕೈಗೊಂಡ ನ್ಯಾಯಮಂಡಳಿಯು ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿತ್ತು. ಆದರೂ ದಿಲೀಪ್ ಛಾಬ್ರಿಯಾ ಸುಮ್ಮನಾಗಲಿಲ್ಲ. ಕೆಲ ತಿಂಗಳ ನಂತರ ವ್ಯಾನಿಟಿ ವ್ಯಾನ್‌ನ ಬಿಡಿಭಾಗ ಹಾಗೂ ಅದರ ಪಾರ್ಕಿಂಗ್ ಶುಲ್ಕವಾಗಿ ರೂ. 12 ಲಕ್ಷ ನೀಡಬೇಕೆಂದು ಕಪಿಲ್‌ ಶರ್ಮಾರವರಿಗೆ ಬೇಡಿಕೆ ಇಟ್ಟಿದ್ದಾನೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

ಇದಾದ ನಂತರ ಕಪಿಲ್ ಶರ್ಮಾ ಮುಂಬೈ ಆರ್ಥಿಕ ಅಪರಾಧ ವಿಭಾಗದ ಪೊಲೀಸರಿಗೆ ದಿಲೀಪ್ ಛಾಬ್ರಿಯಾ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಮುಂಬೈನ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ವಂಚಕ ಛಾಬ್ರಿಯಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

2018ರ ಮಾರ್ಚ್ ತಿಂಗಳಿನಲ್ಲಿ ಕಪಿಲ್ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಡಿಸಿ ವಿನ್ಯಾಸಗೊಳಿಸಿದ ವ್ಯಾನಿಟಿ ವ್ಯಾನ್‌ನ ಚಿತ್ರಗಳನ್ನು ಶೇರ್ ಮಾಡಿದ್ದರು. ಇದಕ್ಕಾಗಿ ದಿಲೀಪ್ ಛಾಬ್ರಿಯಾಗೆ ಧನ್ಯವಾದವನ್ನೂ ಸಲ್ಲಿಸಿದ್ದರು. ಕಪಿಲ್ ಶರ್ಮಾ ವ್ಯಾನಿಟಿ ವ್ಯಾನ್'ಗಾಗಿ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿರುವುದು ಈಗ ಬೆಳಕಿಗೆ ಬಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ದಿಲೀಪ್ ಛಾಬ್ರಿಯಾನನ್ನು 2020ರ ಡಿಸೆಂಬರ್ 28ರಂದು ಬಂಧಿಸಲಾಗಿದೆ. ಡಿಸಿ ಅವಂತಿ ಸ್ಪೋರ್ಟ್ಸ್ ಕಾರಿನ ನಕಲಿ ನೋಂದಣಿ ಸಂಖ್ಯೆಯನ್ನು ಬಳಸಿಕೊಂದಿರುವ ಈತ ಎನ್‌ಬಿಎಫ್‌ಸಿ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳುವ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ.

ಖ್ಯಾತ ಟಿವಿ ಶೋ ನಿರೂಪಕನಿಗೂ ಟೋಪಿ ಹಾಕಿದ ದಿಲೀಪ್ ಛಾಬ್ರಿಯಾ

ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 120 ಡಿಸಿ ಅವಂತಿ ಕಾರುಗಳು ಮಾರಾಟವಾಗಿವೆ. ಅವುಗಳಲ್ಲಿ ಒಂದೇ ಎಂಜಿನ್ ಹಾಗೂ ಚಾಸಿಸ್ ನಂಬರ್ ಹೊಂದಿರುವ ಸುಮಾರು 90 ಕಾರುಗಳನ್ನು ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಸಾಲಕ್ಕಾಗಿ ನೋಂದಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕಾರುಗಳ ಮೇಲೆ ತೆಗೆದುಕೊಂಡ ಸಾಲವನ್ನು ನಂತರ ಬ್ಯಾಂಕುಗಳು ಎನ್‌ಪಿಎ ಎಂದು ಘೋಷಿಸಿದ್ದವು. ಛಾಬ್ರಿಯಾ ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿದ್ದಾನೆ.

Most Read Articles

Kannada
English summary
Dilip Chhabria cheated Rs 5 crore to comedian Kapil Sharma. Read in Kannada.
Story first published: Wednesday, January 13, 2021, 20:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X