ಕ್ರಿಕೆಟಿಗ ದಿನೇಶ್ ಕಾರ್ತಿಕ್‌ಗೆ ಪ್ರಖ್ಯಾತ ಕಾರು ಸಂಸ್ಥೆಯಿಂದ ಮೋಸ!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈಗಷ್ಟೇ ವಿವಾಹ ಜೀವನಕ್ಕೆ ಕಾಲಿರಿಸಿರುವ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರಿಗೆ ದೇಶದ ಪ್ರಖ್ಯಾತ ಕಾರು ಸಂಸ್ಥೆಯೊಂದು ಮೋಸ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಚೆನ್ನೈ ಮೂಲದ ಕ್ರಿಕೆಟಿಗ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
Also Read : ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿ ಬಂದ ಮಾರುತಿ ಸ್ವಿಫ್ಟ್
ಏನಿದು ಘಟನೆ? ಕಾರ್ತಿಕ್ ಗೆ ಮೋಸ ಮಾಡಿದ ಕಾರು ಸಂಸ್ಥೆ ಯಾವುದು ? ಇವೆಲ್ಲದರ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ನಿಮೆಲ್ಲರಿಗೂ ತಿಳಿದಿರುವಂತೆಯೇ ದಿಲೀಪ್ ಛಾಬ್ರಿಯಾ ನೇತೃತ್ವದ ಡಿಸಿ ಡಿಸೈನ್ ಸಂಸ್ಥೆಯು ದೇಶದ ಚೊಚ್ಚಲ ಕ್ರೀಡಾ ಕಾರು ನಿರ್ಮಾಣದಲ್ಲಿ ತೊಡಗಿದೆ.

ಇದರಂತೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು 2013 ಮೇ ತಿಂಗಳಲ್ಲಿ ಐದು ಲಕ್ಷ ರು.ಗಳನ್ನು ಮುಂಗಡವಾಗಿ ಪಾವತಿಸಿ ಚೆನ್ನೈ ಡೀಲರ್ ಶಿಪ್ ನಲ್ಲಿ ಮುಂಗಡ ಬುಕ್ಕಿಂಗ್ ಗಿಟ್ಟಿಸಿಕೊಂಡಿದ್ದರು. ಅಲ್ಲದೆ ಬುಕ್ಕಿಂಗ್ ವೇಳೆಯಲ್ಲಿ 2014 ಜನವರಿಯಲ್ಲಿ ಟೆಸ್ಟ್ ಡ್ರೈವಿಂಗ್ ಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿತ್ತು.

ಒಪ್ಪಂದದ ಪ್ರಕಾರ ಟೆಸ್ಟ್ ಡ್ರೈವಿಂಗ್‌ನಲ್ಲಿ ಕಾರು ಇಷ್ಟವಾಗದಿದ್ದಲ್ಲಿ ಬುಕ್ಕಿಂಗ್ ರದ್ದುಗೊಳಿಸಿ ಸಂಪೂರ್ಣ ಮೊತ್ತವನ್ನು ಹಿಂತಿರುಗಿಸುವುದಾಗಿ ಡೀಲರ್ ಭರವಸೆಯನ್ನು ನೀಡಿತ್ತು. ಆದರೆ ನಿಗದಿತ ಅವಧಿಯಲ್ಲಿ ಕಾರನ್ನು ತಲುಪಿಸುವಲ್ಲಿ ಡೀಲರುಗಳು ವಿಫಲವಾಗಿದ್ದಾರೆ.

2015 ಎಪ್ರಿಲ್ ತಿಂಗಳಾಗುವಷ್ಟರಲ್ಲಿ ಕಾರ್ತಿಕ್ ಮೇಲ್‌ಗೆ ಉತ್ತರ ಕೊಟ್ಟಿರುವ ಡಿಸಿ ಸಂಸ್ಥೆಯು ಪುಣೆಯಲ್ಲಿ ಮಾತ್ರ ಟೆಸ್ಟ್ ಡ್ರೈವ್ ಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿತ್ತು. ಅಂತೂ ಕೊನೆಗೂ 2015 ಮೇ 18ರಂದು ಟೆಸ್ಟ್ ಡ್ರೈವ್ ನಡೆಸಿರುವ ಕಾರ್ತಿಕ್ ಡಿಸಿ ಕಾರು ಬಗ್ಗೆ ಅಸಂತೃಪ್ತಿಯನ್ನು ವ್ಯಕ್ತಪಡಿಸಿದ್ದರು.

ಬಳಿಕ ಬುಕ್ಕಿಂಗ್ ರದ್ದುಗೊಳಿಸಿ ಹಣವನ್ನು ವಾಪಾಸ್ ನೀಡುವಲ್ಲಿ ಡೀಲರ್ ಗಳ ಬಳಿ ವಿನಂತಿಸಿದರೂ ಇದಕ್ಕೆ ವಿಸಮ್ಮತಿ ಸೂಚಿಸಿದ್ದರು. ಇದರಿಂದ ಬೆಸೆತ್ತ ಕಾರ್ತಿಕ್ ಈಗ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಕಾರ್ತಿಕ್, "ಇದು ಹಣದ ವಿಚಾರವಲ್ಲ. ಬದಲಾಗಿ ವ್ಯವಹಾರ ನ್ಯಾಯೋಚಿತವಾಗಿಲ್ಲ" ಎಂದು ಆಪಾದಿಸಿದ್ದಾರೆ. ಒಟ್ಟಿನಲ್ಲಿ ಕಾರ್ತಿಕ್ ಗೆ ನ್ಯಾಯ ಸಿಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ದೇಶದ ಚೊಚ್ಚಲ ಕ್ರೀಡಾ ಕಾರಿನ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು


Click it and Unblock the Notifications








