ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಬಾಲಿವುಡ್‌ನ ಜನಪ್ರಿಯ ನಿರ್ಮಾಪಕ ಹಾಗೂ ನಿರ್ದೇಶಕರಾಗಿರುವ ಕರಣ್ ಜೋಹಾರ್ ಅವರದ್ದು ಭಿನ್ನ ವ್ಯಕ್ತಿತ್ವ, ಇವರು ಹಲವು ಬಾಲಿವುಡ್‌ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಜನಪ್ರಿಯ ನಿರ್ದೇಶಕ ಕೂಡ ಆಗಿದ್ದಾರೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಅಷ್ಟೇ ಅಲ್ಲದೇ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಅನೇಕ ಟಾಕ್​ಶೋ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿಯು ಕೂಡ ಮನೆಮಾತಾದರು. ಕಾಫಿ ವಿತ್​ ಕರಣ್​ ಶೋ ಮೂಲಕ ಅವರು ಹೆಚ್ಚು ಸುದ್ದಿಯಾಗಿದ್ದರು. ಈ ಪ್ರತಿಭಾವಂತ ಮತ್ತು ಜನಪ್ರಿಯ ನಿರ್ದೇಶಕ ಕರಣ್​ ಜೋಹರ್​ ಅನೇಕ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡ್ಡು ಸುದ್ದಿಯಾಗಿದ್ದರು. ಆದರೆ ಇದೀಗ ಕರಣ್​ ಜೋಹರ್​ ಐಷಾರಾಮಿ ಆಡಿ ಆಡಿ ಎ8 ಎಲ್ ಸಲೂನ್ ಕಾರನ್ನು ಖರೀದಿಸಿ ಸುದ್ದಿಯಾಗಿದ್ದಾರೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಎ8 ಎಲ್ ಆಡಿ ಕಂಪನಿಯ ಪ್ರಮುಖ ಐಷಾರಾಮಿ ಸಲೂನ್ ಆಗಿದೆ. ಇನ್ನು ಕರಣ್ ಜೋಹಾರ್ ಅವರ ಬಳಿ ಜಾಗ್ವಾರ್ ಎಕ್ಸ್‌ಜೆ ಎಲ್, ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್‌ ಮತ್ತು ಇತರ ಐಷಾರಾಮಿ ಕಾರುಗಳನ್ನು ಕೂಡ ಹೊಂದಿದ್ದಾರೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಇನ್ನು ಟೆಲಿವಿಷನ್‌ನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮೊದಲ ಬಾರಿಗೆ ಒಟಿಟಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಆದರೆ ಚಾನೆಲ್‌ನಲ್ಲಿ ಅಲ್ಲ. ಮೊದಲ ಆರು ವಾರಗಳವರೆಗೆ ಈ ಕಾರ್ಯಕ್ರಮವನ್ನು ನಿರ್ದೇಶಕ ಕರಣ್ ಜೋಹರ್ ನಡೆಸಿಕೊಲಿದ್ದಾರೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ನಿರ್ದೇಶಕ ಕರಣ್​ ಜೋಹರ್​ ಅವರು ಖರೀದಿಸಿದ ಆಡಿ ಆಡಿ ಎ8 ಎಲ್ ಕಾರಿನ ಬಗ್ಗೆ ಹೇಳುವುದಾದರೆ, ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಆಡಿ ಕಂಪನಿಯು ತನ್ನ ಎ8 ಎಲ್ ಕಾರನ್ನು ಭಾರತದಲ್ಲಿ ಕಳೆದ ವರ್ಷ ಪರಿಚಯಿಸಿದ್ದರು.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಈ ಆಡಿ ಎ8 ಎಲ್ ಕಾರು 37 ಎಂಎಂ ಉದ್ದ ಮತ್ತು 17 ಎಂಎಂ ಎತ್ತರವನ್ನು ಹೊಂದಿದೆ. ಈ ಐಷಾರಾಮಿ ಸಲೂನ್ ಮಾದರಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಕಾರಿನ ಮುಂಭಾಗ ಗ್ರಿಲ್ ಅನ್ನು ಹೊಂದಿದೆ, ಸ್ಲಿಕ್ ಹೆಚ್‍ಡಿ ಮ್ಯಾಟ್ರಿಕ್ಸ್ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದ್ದು, ಇದನ್ನು ಕ್ರೋಮ್‍‍ಗಳಿಂದ ಅಲಂಕರಿಸಲಾಗಿದೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಅಂದವಾಗಿ ವಿನ್ಯಾಸಗೊಳಿಸಲಾದ ಸ್ಲಿಮ್ ಎಲ್‍ಇಡಿ ಟೇಲ್ ಲ್ಯಾಂಪ್‍ಗಳನ್ನು ಹಿಂಭಾಗದಲ್ಲಿ ನೀಡಲಾಗಿದೆ. ಕಾರಿನ ಇಂಟಿರಿಯರ್‍‍ನಲ್ಲಿ ವರ್ಚುವಲ್ ಕಾಕ್‍‍ಪಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮಧ್ಯದ ಕನ್ಸೋಲ್‍ನಲ್ಲಿ 10.1 ಇಂಚಿನ ಇನ್ಫೋಟೇನ್‍‍ಮೆಂಟ್ ಟಚ್‍‍ಸ್ಕ್ರೀನ್ ಮತ್ತು ಕ್ಲೈಮೆಂಟ್ ಕಂಟ್ರೂಲ್ ಮತ್ತು ಮಲ್ಟಿಮೀಡಿಯಾ ಸ್ಕ್ರೀನ್ ಅನ್ನು ಕೂಡ ಹೊಂದಿದೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಈ ಆಡಿ ಎ8 ಎಲ್ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಬಿಡಿಯೊಂದಿಗೆ ಎಬಿಎಸ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‍‍ಗಳು ಮತ್ತು 360 ಡಿಗ್ರಿ ಕ್ಯಾಮೆರಾ ಜೊತೆಯಲ್ಲಿ 3ಡಿ ವ್ಯೂ ಅನ್ನು ಒಳಗೊಂಡಿದೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಈ ಐಷಾರಾಮಿ ಕಾರಿನ ರೇರ್ ಸೀಟಿನಲ್ಲಿ ಮನರಂಜನೆಗಾಗಿ ಡ್ಯುಯಲ್ ಟಚ್‍‍ಸ್ಕ್ರೀನ್ ಅನ್ನು ಅಳವಡಿಸಲಾಗಿದೆ. ಫ್ರಂಟ್ ಸೀಟಿನಲ್ಲಿ ಫುಟ್‍ ಮಸಾಜರ್‍‍ಗಳನ್ನು ಹೊಂದಿದೆ. ಆಡಿ ಎ8 ಎಲ್ ಕಾರು ಲಾಂಗ್ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಈ ಆಡಿ ಎ8 ಎಲ್ ಕಾರು 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 336 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‍‍ನೊಂದಿಗೆ 8 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಐಷಾರಾಮಿ ಆಡಿ ಎ8 ಎಲ್ ಕಾರು ಖರೀದಿಸಿದ ನಿರ್ದೇಶಕ ಕರಣ್ ಜೋಹರ್

ಈ ಐಷಾರಾಮಿ ಆಡಿ ಎ8 ಎಲ್ ಕಾರು ಕೇವಲ 5.7 ಸೆಕೆಂಡು‍‍ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಆಡಿ ಎಲ್8 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 7 ಸೀರೀಸ್ ಫೇಸ್‍‍ಲಿಫ್ಟ್, ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್, ಲೆಕ್ಸಕ್ಸ್ ಎಲ್‍ಎಸ್ 500ಹೆಚ್‍ ಮತ್ತು ಎಕ್ಸ್‌ಜೆ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Director Karan Johar Brings Home The Audi A8 L. Read In Kannada.
Story first published: Tuesday, August 3, 2021, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X