ವಿಹಾರ ನೌಕೆಗಳ ಬೆಚ್ಚಿ ಬೀಳಿಸುವ ಕೊಳಕು ಸತ್ಯಗಳು
ಐಷಾರಾಮಿ ವಿಹಾರ ಹಡಗುಗಳನ್ನು ಟಿ.ವಿ ಅಥವಾ ಹಾಲಿವುಡ್ ಚಲನಚಿತ್ರಗಳಲ್ಲಿ ನೋಡಿದ ನೆನಪು ಮಾತ್ರವಿರುತ್ತದೆ. ಎಲ್ಲ ತರಹದ ಆಡಂಬರದ ಸೌಲಭ್ಯಗಳಿಂದ ಕೂಡಿದ 'ತೇಲುವ ಐಷಾರಾಮಿ ಹೋಟೆಲ್' ಎಂದೇ ಇದನ್ನು ವಿಶ್ಲೇಷಿಸಲಾಗುತ್ತದೆ. ಸಿನೆಮಾ ಮಂದಿರ, ಈಜುಕೊಳ, ಖಾಸಗಿ ಕೋಣೆ, ಲಿವಿಂಗ್ ಪ್ರದೇಶ, ಮನೋರಂಜನೆ, ಆಟೋಟ, ಕ್ಯಾಸಿನೋ, ರೆಸ್ಟೋರೆಂಟ್ ಹೀಗೆ ಎಲ್ಲ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಇದರಲ್ಲಿ ಒದಗಿಸಲಾಗುತ್ತದೆ. ಆಡಂಬರ ನೌಕೆಗಳಲ್ಲಿ ಉಲ್ಲಾಸಕ್ಕೆ ಮಾತ್ರ ಸೀಮಿತ ಎಂದು ಅಂದುಕೊಂಡ್ಡಲ್ಲಿ ತಪ್ಪಾದಿತು. ಹೀಗೆ ಪ್ರತಿಯೊಬ್ಬ ವ್ಯಕ್ತಿಯು ಅರಿತುಕೊಳ್ಳಬೇಕಾದ ಬೆಚ್ಚಿಬೀಳಿಸುವ ಕೊಳಕು ಸತ್ಯಗಳ ಬಗ್ಗೆ ಇಲ್ಲಿ ಮೆಲುಕು ಹಾಕಲಿದ್ದೇವೆ.

01. ಹಡಗಿನಲ್ಲೂ ಶವಾಗಾರ
ಹಡಗಿನಲ್ಲಿ ಶವಾಗಾರ ಇರುವ ವಿಚಾರ ನಿಮಗೆ ಗೊತ್ತೇ? ಹಡಗಿನಲ್ಲಿ ಯಾರೇ ಮೃತಪಟ್ಟರೂ ನೀರಿಗೆ ಎಸೆಯಲಾಗುವುದಿಲ್ಲ. ಬದಲಾಗಿ ಶವಾಗಾರದಲ್ಲಿರಿಸಲಾಗುತ್ತದೆ. ಹಡಗು ಯಾತ್ರೆ ತಿಂಗಳುಗಟ್ಟಲೆ ಪರ್ಯಂತ ಇರುವುದರಿಂದ ಮೃತದೇಹಗಳನ್ನು ಬಂದರು ತಲುಪುವ ವರೆಗೂ ವಿಶೇಷ ಶೈತ್ಯೀಕರಣ ಸಂಗ್ರಹ ಜಾಗದಲ್ಲಿಡಲಾಗುತ್ತದೆ.

02. ಹಡಗಿನಲ್ಲಿ ಜೈಲು ಕೂಡಾ ಇದೆ
ಸ್ವಾರ್ಥಿ ಮನುಷ್ಯ ವಾಸಿಸುವ ವಿಶ್ವದ ಯಾವುದೇ ಮೂಲೆಯಲ್ಲಾದರೂ ಸೆರೆಮನೆಯ ಅಗತ್ಯ ಇದ್ದೇ ಇರುತ್ತದೆ. ಹಾಗೆಯೇ ಅಪರಾಧಿ ಅಥವಾ ಶಂಕಿತ ಅಪರಾಧಿಗಳನ್ನು ಬಂಧಿಯಾಗಿಡಲು ವಿಶೇಷ ಬಂಧಿ ಕೋಣೆಗಳಿರುತ್ತದೆ. ಅಂಥವರನ್ನು ತೀರ ಪ್ರದೇಶ ತಲುಪಿದ ಬಳಿಕ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ.

03. ಕೊಳಕು ಇಂಧನ
ಹಡಗುಗಳಲ್ಲಿ ಆಧುನಿಕ, ಸಮರ್ಥ ಇಂಧನ ಬಳಕೆ ಮಾಡಲಾಗುತ್ತದೆ ಎಂದು ಅಂದುಕೊಂಡಿದ್ದಲ್ಲಿ ತಪ್ಪಾದಿತು. ಯಾಕೆಂದರೆ ಏಕಕಾಲಕ್ಕೆ ಸಾವಿರಾರು ಯಾತ್ರಿಕರನ್ನು ಮುಂದಕ್ಕೆ ತಳ್ಳಲು ಭಾರಿ ಅಶ್ವಶಕ್ತಿಯ ಅಗತ್ಯವಿರುತ್ತದೆ. ಇಂದಿಗೂ ಬಹುತೇಕ ಹಡಗುಗಳು ಬಂಕರ್ ಇಂಧನವನ್ನು ಬಳಕೆ ಮಾಡುತ್ತದೆ. ಇದು ಕಡು ಕಪ್ಪು ವರ್ಣದಿಂದ ಕೂಡಿದ ಹೆಚ್ಚು ದಪ್ಪವಾದ ಪೆಟ್ರೋಲಿಯಂ ಉತ್ಪನ್ನವಾಗಿದ್ದು, ಅತಿ ಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತದೆ.

04. ಮೂರನೇ ಜಗತ್ತಿನ ಕಾರ್ಮಿಕರು
ಶೇಕಡಾ 25ರಷ್ಟು ಅಮೆರಿಕನ್ನರು ಹಡಗಿನಲ್ಲಿ ಮನರಂಜನೆ ಅಥವಾ ಯಾತ್ರಿಕರೊಂದಿಗೆ ಬೆರತುಕೊಂಡು ವಹಿಸುವ ಕೆಲಸವನ್ನು ನಿರ್ವಹಿಸುತ್ತಾರೆ. ಬಾಕಿ ಉಳಿದ ಎಲ್ಲ ಕೆಲಸವನ್ನು ಮೂರನೇ ಜಗತ್ತಿನ ಅಂದರೆ ಅಭಿವೃದ್ಧಿ ಹೊಂದುತ್ತಿರುವ ದೇಶದ ಕಾರ್ಮಿಕರು ಕಡಿಮೆ ಸಂಬಳದಲ್ಲಿ ದುಡಿಯುತ್ತಾರೆ.

05. ರೋಗ ಹರಡುವುದು
ಭೋಜನ ಸಂಬಂಧಿ ಖಾಯಿಲೆಗಳು ಯಾತ್ರಿಕರಿಗೆ ಹಡಗಿನಲ್ಲಿ ಅತಿ ಹೆಚ್ಚು ತೊಂದರೆಯನ್ನು ಕೊಡುತ್ತದೆ. ಹೊಟ್ಟೆಗೆ ಆಹಾರ ಒಗ್ಗದಿರುವುದರಿಂದ ವಿಷಭಾದೆಯಾಗುತ್ತದೆ. ಹಾಗಾಗಿ ಯಾವತ್ತಾದರೂ ಹಡಗಿನಲ್ಲಿ ಸಂಚರಿಸುವಾಗ ಆಹಾರ ಕ್ರಮದ ಬಗ್ಗೆ ಅತಿ ಹೆಚ್ಚು ಗಮನವಹಿಸತಕ್ಕದ್ದು.

06. ಅನಿರೀಕ್ಷಿತ ತೆರಿಗೆ
ಹತ್ತು ಹಲವಾರು ಆಫರ್ ಗಳ ಭರವಸೆಯೊಂದಿಗೆ ಯಾತ್ರಿಕರನ್ನು ವಿಹಾರ ನೌಕೆಗಳು ಮನಸೆಳೆಯುತ್ತದೆ. ಆದರೆ ಒಮ್ಮೆ ಹಡಗು ಏರಿದ ಬಳಿಕ ವಿವಿಧ ಸರ್ವಿಸ್ ತೆರಿಗಳಲ್ಲಾಗಿ ಹೆಚ್ಚು ದುಡ್ಡನ್ನು ಈಡು ಮಾಡಲಾಗುತ್ತದೆ.

07. ನಾಪತ್ತೆ
ಎಷ್ಟೇ ಭದ್ರತೆಯನ್ನು ಕೈಗೊಂಡರೂ ಹಡಗುಗಳಲ್ಲಿ ನಾಪತ್ತೆ ಪ್ರಕರಣ ಪದೇ ಪದೇ ದಾಖಲಾಗುತ್ತಲೇ ಇದೆ. 2000ನೇ ಇಸವಿಯ ಬಳಿಕ 2000ದಷ್ಟು ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಹಡಗು ಗಮ್ಯಸ್ಥಾನ ತಲುಪಿದ ಬಳಿಕ ಲಗ್ಗೇಜ್ ವಾರಸುದಾರರಿಲ್ಲದೆ ಹಿಂತಿರಿಗಿದಾಗ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬರುತ್ತದೆ.

08. ವೈದ್ಯಕೀಯ ಸೇವೆ
ಯಾತ್ರೆ ಮಧ್ಯೆ ಯಾವುದೇ ರೀತಿಯ ಆರೋಗ್ಯ ತೊಂದರೆ ಎದುರಾದ್ದಲ್ಲಿ ಅದನ್ನು ನಿಭಾಯಿಸಲು ತುರ್ತು ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿರುತ್ತದೆ. ಇವರು ಹಡಗಿನ ಜೊತೆ ಸ್ವತಂತ್ರರಾಗಿ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ಹಾಗಾಗಿ ವೈದ್ಯಕೀಯದಲ್ಲಿ ಹೆಚ್ಚು ಅನುಭವ ಸಂಪತ್ತವನ್ನು ಹೊಂದಿರುವುದಿಲ್ಲ. ಇನ್ನು ಹೆಚ್ಚು ಕಡಿಮೆಯಾದ್ದಲ್ಲಿ ಜವಾಬ್ದಾರಿವನ್ನು ಹೊರುವುದಿಲ್ಲ.

09. ಯಾತ್ರೆ ರದ್ದತಿ ನಿಯಮಗಳು
ಹಾಗೊಂದು ವೇಳೆ ಯಾತ್ರೆಯನ್ನು ರದ್ದು ಮಾಡುವುದಾದ್ದಲ್ಲಿ ನಯಾ ಪೈಸೆ ನಿಮ್ಮ ಜೇಬಿಗೆ ಬಂದು ಸೇರುವುದಿಲ್ಲ. ಬಹುತೇಕ ಹಡಗುಗಗಳು ಹಣ ಹಿಂತಿರುಗಿಸುವ ನಿಯಮವನ್ನೇ ಹೊಂದಿಲ್ಲ. ಅಂದರೆ 120ಕ್ಕೂ ದಿವಸಗಳಿಗೂ ಮುಂಚಿತವಾಗಿ ಅಥವಾ ನಾಲ್ಕು ತಿಂಗಳುಗಳ ಹಿಂದೆಯೇ ರದ್ದು ಮಾಡಿದ್ದಲ್ಲಿ ಹಣ ವಾಪಾಸ್ ಆಗಲಿದೆ.

10. ಮಾಲಿನ್ಯ ವಿಸರ್ಜನೆ
ತಿಂಗಳು ಗಟ್ಟಲೆ ನೀರಲ್ಲೇ ಸಂಚರಿಸುವ ಹಡಗಿನ ಮಲ ವಿಸರ್ಜನೆ ಎಲ್ಲಿ ಹೋಗಿ ಸೇರುತ್ತದೆ ಎಂಬುದರ ಬಗ್ಗೆ ಪರಿಜ್ಞಾನವಿದೆಯೇ ? ವರದಿಯೊಂದರ ಪ್ರಕಾರ ಹಡಗಿನಲ್ಲಿ ವಾರವೊಂದರಲ್ಲಿ 210000 ಗ್ಯಾಲನ್ ಗಳಷ್ಟು ಮಾನವ ಮಲ ವಿಸರ್ಜನೆಯಾಗುತ್ತೆದೆ. ಇವೆಲ್ಲವನ್ನೂ ಸಮುದ್ರಕ್ಕೆ ಹರಿಯ ಬಿಡಲಾಗುತ್ತದೆ.

11. ಕಾನೂನು ಕಟ್ಟುನಿಟ್ಟಾಗಿಲ್ಲ
ಹಡಗಿನಲ್ಲಿ ಕಾನೂನು ಕಟ್ಟುನಿಟ್ಟಾಗಿಲ್ಲ ಅಥವಾ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿಲ್ಲ. ಹಾಗಾಗಿ ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂಬ ಅಪವಾದವಿದೆ. ಸಂಯುಕ್ತ ತನಿಖಾ ದಳದ ವರದಿಯ ಪ್ರಕಾರ ನೆಲಗಿಂತಲೂ ಶೇಕಡಾ 50ರಷ್ಟು ಹೆಚ್ಚು ಲೈಂಗಿಕ ಹಲ್ಲೆ ಪ್ರಕರಣಗಳು ಹಡಗಿನಲ್ಲಿ ನಡೆಯುತ್ತದೆ. ಈ ಪೈಕಿ ಶೇಕಡಾ 7ರಷ್ಟು ಪ್ರಕರಣಗಳಲ್ಲಿ ಮಾತ್ರ ನ್ಯಾಯ ದೊರಕಿದೆ.

ಇವನ್ನೂ ಓದಿ
01. ಹಡಗುಗಳಿಗೆ ಸಂಬಂಧಪಟ್ಟ 25 ಆಶ್ಚರ್ಯಕರ ಸತ್ಯಗಳು!
02. ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 10 ರೋಚಕ ಸತ್ಯಗಳು!
03. ವಿಹಾರ ನೌಕೆಗಳು ಮೋಜಿಗಷ್ಟೇ ಸೀಮಿತವೇ? ಬೆಚ್ಚಿ ಬೀಳಿಸುವ ಸತ್ಯಗಳು!


Click it and Unblock the Notifications








