ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಡಿಕೆ ಶಿವಕುಮಾರ್ ಚಲಾಯಿಸಿದ ದುಬಾರಿ ಕಾರು ಯಾವುದು? ವಿಶೇಷತೆಗಳೇನು?
ದಕ್ಷಿಣ ಭಾರತದ ಪ್ರಥಮ ಮೆಟ್ರೋ ಕಂ ಎಲಿವೆಟೆಡ್ ರಸ್ತೆಯಾದ ರಾಗಿಗುಡ್ಡ ಮೆಟ್ರೋ ನಿಲ್ದಾಣ - ಸೆಂಟ್ರಲ್ ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಮೇಲ್ಸೇತುವೆ (Double-Deck Flyover) ಲೋಕಾರ್ಪಣೆಗೊಂಡಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಈ ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ತಮ್ಮ ಸ್ವತಃ ಕಾರು ಚಲಾಯಿಸಿ ರಸ್ತೆಯನ್ನು ಟೆಸ್ಟ್ ಮಾಡಿದರು. 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 3.36 ಕಿಮೀ ಉದ್ದದ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಅನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆಗೊಳಿಸಿದರು.
ಆರ್.ವಿ.ರಸ್ತೆ- ಬೊಮ್ಮಸಂದ್ರದ 19.15ಕಿಮೀ ಕಿಮೀ ರಸ್ತೆಯಲ್ಲಿ 3.36ಕಿಮೀ ಎಲಿವೆಟೆಡ್ ಮೆಟ್ರೋ ರಸ್ತೆ ರೂಪಿಸಲಾಗಿದೆ. ಇನ್ನು ಫ್ಲೈಓವರ್ ಜೊತೆಗೆ ಹಾದುಹೋಗುವ ಹಳದಿ ಲೈನ್ ಮೆಟ್ರೋ ಇನ್ನೂ ಕಾರ್ಯಾರಂಭ ಮಾಡಿಲ್ಲ. ಆದರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕಾರ, ಇದು ಈ ವರ್ಷದ ಡಿಸೆಂಬರ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಈ ಫ್ಲೈಓವರ್ ರಾಂಪ್ ಎ ರಾಗಿಗುಡ್ಡ ಮೆಟ್ರೋ ನಿಲ್ದಾಣವನ್ನು ಹೊಸೂರು ರಸ್ತೆ ಸಂಪರ್ಕಿಸುತ್ತದೆ. ಇನ್ನು ಈ ಫ್ಲೈಓವರ್ ಎಚ್‌ಎಸ್‌ಆರ್ ಲೇಔಟ್ಗೂ ಸಂಪರ್ಕಿಸುತ್ತದೆ ಈ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಈಗ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಿಲ್ಲದೇ ಹೋಗಬಹುದು. ಇದರಿಂದ ಸಿಲ್ಕ್ ಬೋರ್ಡ್ ಟ್ರಾಫಿಕ್ ಕಡಿಮೆ ಮಾಡುವ ನಿರೀಕ್ಷೆಯಿದೆ. ಬೆಂಗಳೂರಿಗರ ಬಹುದಿನಗಳ ಕನಸು ಈಗ ನನಸಾಗಿದೆ.
ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೋ ಲೇನ್ ಹಾದು ಹೋಗಿದೆ. ಈ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಕಾರು ಓಡಿಸುವ ವಿಡಿಯೋವನ್ನು ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ. ಡಿಕೆ ಶಿವಕುಮಾರ್ ಆವರು ಓಡಿಸಿದ ಕಾರು ಟೊಯೊಟಾ ಇನೋವಾ ಹೈಕ್ರಾಸ್ (Toyota Innova Hycross) ಆಗಿದೆ.

ಈ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ಬಗ್ಗೆ ಹೇಳುವುದಾದರೆ, ಇದು ಅವಂತ್ ಗಾರ್ಡೆ ಕಂಚಿನ ಮೆಟಾಲಿಕ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್, ಬ್ಲ್ಯಾಕ್ಲಿಶ್ ಅಗೆಹಾ ಗ್ಲಾಸ್ ಫ್ಲೇಕ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಸ ಎಂಪಿವಿಯು 7 ಮತ್ತು 8 ಸೀಟುಗಳ ಎರಡೂ ಆವೃತ್ತಿಗಳು ಆಟೋಮ್ಯಾಟಿಕ್ ಕಂಟ್ರೋಲ್ ಗಳೊಂದಿಗೆ ಬರುತ್ತವೆ.
ಈ ಟೊಯೊಟಾ ಇನ್ನೋವಾ ಹೈಕ್ರಾಸ್ GX (O) ಮಾದರಿಯಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 172 bhp ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಪಿವಿಯ ಹೈಬ್ರಿಡ್ ಅಲ್ಲದ ಆವೃತ್ತಿಯು 16.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಹೆಚ್ಚುವರಿಯಾಗಿ, ಇನ್ನೋವಾ ಹೈಕ್ರಾಸ್ 2.0 ಲೀಟರ್ 4-ಸಿಲಿಂಡರ್ ಅಟ್ಕಿನ್ಸನ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಈ ಎಂಜಿನ್ 172 ಬಿಹೆಚ್‍ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸ್ಟ್ರಾಂಗ್ ಹೈಬ್ರಿಡ್ ಟಾಪ್ VX, ZX ಮತ್ತು ZX (O) ಟ್ರಿಮ್‌ಗಳೊಂದಿಗೆ ಮಾತ್ರ ಲಭ್ಯವಿದೆ. ಈ ಎಂಪಿವಿಯು ಮಾಡೆಲ್ ಲೈನ್ ಫ್ರಂಟ್-ವೀಲ್-ಡ್ರೈವ್ ಸೆಟಪ್‌ನೊಂದಿಗೆ ಬರುತ್ತದೆ.
ಈ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಪಡೆದಿದೆ.


Click it and Unblock the Notifications








