ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಯಾವೆಲ್ಲ ಕಾರುಗಳನ್ನು ಬಳಸುತ್ತಾರೆ ಗೊತ್ತಾ?

ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಸಕ್ರಿಯ ಉದ್ಯಮಿಗಳಲ್ಲಿ ಒಬ್ಬರು. ಅವರು, ಆಗಾಗ್ಗೆ ಟ್ವಿಟರ್‌ನಲ್ಲಿ ಮಹೀಂದ್ರಾ ಕಂಪನಿಯ ವಾಹನಗಳ ಬಗ್ಗೆ ಪೋಸ್ಟ್ ಮಾಡುವುದನ್ನು ನಾವು ನೋಡಬಹುದು. ಜೊತೆಗೆ ಕೆಲವರಿಗೆ ತಮ್ಮ ಬ್ರಾಂಡ್‌ನ ವಾಹನಗಳನ್ನು ಸಹ ಗಿಫ್ಟ್ ನೀಡುವ ಮೂಲಕವು ಸುದ್ದಿಯಾಗುತ್ತಿರುತ್ತಾರೆ.

ತಮ್ಮ ಬ್ರಾಂಡ್‌ನ ಮೇಲಿನ ಪ್ರೀತಿಯನ್ನು ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತೋರಿಸುವುದಿಲ್ಲ. ಬೇರೆ ಕಂಪನಿಯ ಎಷ್ಟೇ ಐಷರಾಮಿ ಕಾರುಗಳಲ್ಲಿದ್ದರೂ ಅವುಗಳನ್ನು ಅವರು ಖರೀದಿಯನ್ನೇ ಮಾಡಿಲ್ಲ. ನಿಜ ಜೀವನದಲ್ಲಿಯೂ ಅವರು, ತಮ್ಮ ಮಹೀಂದ್ರಾ ಕಂಪನಿ ಎಸ್‌ಯುವಿಗಳನ್ನು ತಮ್ಮ ಓಡಾಟಕ್ಕೆ ಬಳಸುತ್ತಿದ್ದಾರೆ. ಅವರ ಗ್ಯಾರೇಜ್‌ನಲ್ಲಿ, ಬೊಲೆರೊ ಇನ್ವೇಡರ್, TUV300, TUV300 ಪ್ಲಸ್, ಸ್ಕಾರ್ಪಿಯೋ, ಅಲ್ಟುರಾಸ್ ಜಿ4, ಸ್ಕಾರ್ಪಿಯೋ ಎನ್ ಎಸ್‌ಯುವಿಗಳಿದ್ದು, ಅದರ ಬಗ್ಗೆ ಇಲ್ಲಿ ತಿಳಿಯೋಣ.

ಮಹೀಂದ್ರಾ ಬೊಲೆರೊ ಇನ್‌ವೇಡರ್
ಆನಂದ್ ಮಹೀಂದ್ರಾ ಹೊಂದಿದ್ದ ಮೊದಲ ಕಾರುಗಳಲ್ಲಿ ಇದು ಒಂದು. ಇನ್ನೂ ಮಾರಾಟದಲ್ಲಿರುವ ಬೊಲೆರೊದ ವಿಭಿನ್ನ ಆವೃತ್ತಿಯಾಗಿದೆ. ಇನ್‌ವೇಡರ್ ಕಡಿಮೆ ವೀಲ್‌ಬೇಸ್ ಅನ್ನು ಹೊಂದಿದ್ದು, ಕೇವಲ ಮೂರು ಬಾಗಿಲುಗಳೊಂದಿಗೆ ಖರೀದಿಗೆ ಲಭ್ಯವಿತ್ತು. ತನ್ನದೇ ಆದ ಗ್ರಾಹಕರನ್ನು ಹೊಂದಿದ್ದ ಈ ಎಸ್‌ಯುವಿ, ಸಾಮಾನ್ಯ ಬೊಲೆರೊಗಿಂತ ಸ್ಪೋರ್ಟಿಯಾಗಿ ಕಾಣುತ್ತದೆ. ಇದು ಹಿಂಭಾಗದ ಪ್ರಯಾಣಿಕರಿಗೆ ಭಾಗಶಃ ಮೃದುವಾದ ಟಾಪ್ ಮತ್ತು ಸೈಡ್ ಫೇಸಿಂಗ್ ಸೀಟ್‌ಗಳೊಂದಿಗೆ ಮಾರಾಟವಾಗುತ್ತಿತ್ತು.

ಮಹೀಂದ್ರಾ TUV300
ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗ ಆನಂದ್ ಮಹೀಂದ್ರಾ ಅವರು, ಕಸ್ಟಮೈಸ್ ಮಾಡಿದ TUV300 ಎಸ್‌ಯುವಿಯನ್ನು ಖರೀದಿಸಿದ್ದರು. ಅವರು TUV300ನಲ್ಲಿ ಮಹೀಂದ್ರಾದ ಆರ್ಮರ್ ಕಿಟ್ ಅನ್ನು ಇನ್ಸ್ಟಾಲ್ ಮಾಡಲಾಗಿತ್ತು. TUV300 ಬ್ಯಾಟಲ್ ಗ್ರೀನ್ ಶೇಡ್ ಜೊತೆಗೆ ರಗಡ್ ಲುಕ್ ಅನ್ನು ಹೊಂದಿತ್ತು. ಮಹೀಂದ್ರಾ TUV300 ಅನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಸ್ಥಗಿತ ಮಾಡಲಾಗಿದೆ. ಕೆಲವೊಂದು ಸಣ್ಣ ಬದಲಾವಣೆಗಳೊಂದಿಗೆ, ಅದನ್ನು ಈಗ 'Bolero Neo' ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಹೀಂದ್ರಾ TUV300 ಪ್ಲಸ್
ಆನಂದ್ ಮಹೀಂದ್ರಾ ಅವರ ಬಳಿ ಇರುವ ಎಸ್‌ಯುವಿ TUV300 ಪ್ಲಸ್ ಸಹ ಒಂದಾಗಿದೆ. ಇದನ್ನು 'ಗ್ರೇ ಘೋಸ್ಟ್' ಎಂದು ಕರೆಯಲಾಗುತ್ತದೆ. ಈ ಎಸ್‌ಯುವಿ ವಿಶೇಷವಾಗಿ ಸ್ಟೀಲ್ ಗ್ರೇ ಬಣ್ಣದ ಕೆಲಸವನ್ನು ಪಡೆದುಕೊಂಡಿರುವುದರಿಂದ ಈ ಹೆಸರು ಬಂದಿದೆ ಎಂದು ಹೇಳಬಹುದು. TUV300 ಪ್ಲಸ್ ಅನ್ನು ಏಪ್ರಿಲ್ 2020ರಲ್ಲಿ BS6 ಮಾನದಂಡಗಳ ಜಾರಿ ಬಳಿಕ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಯಿತು. ನಂತರ, ಆ ಜಾಗಕ್ಕೆ ಬೊಲೆರೊ ನಿಯೋ ಬಂದಿತು.

ಮಹೀಂದ್ರಾ ಸ್ಕಾರ್ಪಿಯೋ
ಆನಂದ್ ಮಹೀಂದ್ರಾ ಅವರು ಫಸ್ಟ್ ಜನರೇಷನ್ ಸ್ಕಾರ್ಪಿಯೊವನ್ನು ಹೊಂದಿದ್ದಾರೆ. ಇದು ಅವರ ಬಳಿ ಇರುವ 4×4 ಆವೃತ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಎಸ್‌ಯುವಿ ರಸ್ತೆಯಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಸ್ಕಾರ್ಪಿಯೋ ಅಪಾರ ಆಟೋಮೊಬೈಲ್ ಪ್ರಿಯರನ್ನು ಸೆಳೆದಿದ್ದು, ಇಂದಿಗೂ ಸಹ, ಮೊದಲ ತಲೆಮಾರಿನ ಸ್ಕಾರ್ಪಿಯೊವನ್ನು ಹೊಂದಿರುವ ಅನೇಕ ಗ್ರಾಹಕರು ಇದ್ದಾರೆ. ಮಹೀಂದ್ರಾ ಈಗ ಮೂಲ ಸ್ಕಾರ್ಪಿಯೋವನ್ನು ಸ್ಕಾರ್ಪಿಯೋ ಕ್ಲಾಸಿಕ್ ಎಂದು ಮರುನಾಮಕರಣ ಮಾಡಿದ್ದು, ಹೊಸ ಆವೃತ್ತಿಯನ್ನು ಸ್ಕಾರ್ಪಿಯೋ ಎನ್ ಎಂದು ಕರೆಯಲಾಗುತ್ತದೆ.

ಮಹೀಂದ್ರಾ ಅಲ್ಟುರಾಸ್ ಜಿ4
ಅಲ್ಟುರಾಸ್ ಜಿ4 ವಾಸ್ತವವಾಗಿ ಸ್ಯಾಂಗ್‌ಯಾಂಗ್ ರೆಕ್ಸ್‌ಟನ್‌ನ ರೀಬ್ಯಾಡ್ಜ್ ಮಾಡಿದ ಆವೃತ್ತಿಯಾಗಿದ್ದು, ಇದನ್ನು ಒಮ್ಮೆ ಭಾರತದಲ್ಲಿ ಮಾರಾಟ ಮಾಡಲಾಗಿತ್ತು. ಆನಂದ್ ಮಹೀಂದ್ರಾ ಅವರು ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗ ಈ ಎಸ್‌ಯುವಿಯನ್ನು ಖರೀದಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಎಸ್‌ಯುವಿಗೆ ಅಡ್ಡಹೆಸರು ಸೂಚಿಸುವಂತೆ ತನ್ನ ಅನುಯಾಯಿಗಳಿಗೆ ಕೇಳಿದ್ದರು. ನೆಟ್ಟಿಗರೊಬ್ಬರ ಸಲಹೆಯಂತೆ ಅಲ್ಟುರಾಸ್ G4ಗೆ 'ಬಾಜ್' ಎಂಬ ಹೆಸರನ್ನು ಅಂತಿಮಗೊಳಿಸಿದ್ದರು. ಜೊತೆಗೆ ಆನಂದ್ ಮಹೀಂದ್ರಾ ಅವರು ಹೆಸರನ್ನು ಸೂಚಿಸಿದ ವ್ಯಕ್ತಿಗೆ 'ಡೈಕಾಸ್ಟ್ ಮಾಡೆಲ್' ಅನ್ನು ಉಡುಗೊರೆಯಾಗಿ ನೀಡಿದ್ದರು.

ಸ್ಕಾರ್ಪಿಯೋ ಎನ್
ಮಹೀಂದ್ರಾ ಇತ್ತೀಚೆಗೆ ಎಲ್ಲಾ ಹೊಸ ಸ್ಕಾರ್ಪಿಯೊ ಎನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅದರ ವಿತರಣೆಯು ಸಹ ಆರಂಭವಾಗಿದೆ. ಆನಂದ್ ಮಹೀಂದ್ರಾ ಅವರು ರೆಡ್ ಶೆಡ್ ಹೊಂದಿರುವ ಸ್ಕಾರ್ಪಿಯೋ ಎನ್ ಅನ್ನು ಖರೀದಿಸಿದ್ದರು. ಅವರು ತಮ್ಮ ಸ್ನೇಹಿತರು ಹಾಗೂ ಸೋಷಿಯಲ್ ಮೀಡಿಯಾ ಅನುಯಾಯಿಗಳಿಗೆ ಈ ಎಸ್‌ಯುವಿಗೆ ಅಡ್ಡಹೆಸರನ್ನು ಕೇಳಿದ್ದರು. ಕಡೆಗೆ 'ಭೀಮ್' ಎಂದು ಹೆಸರಿಟ್ಟರು. ಮಹೀಂದ್ರಾ ಸ್ಕಾರ್ಪಿಯೊ ಎನ್ 4×4 ಸಿಸ್ಟಮ್ ಅನ್ನು ಒದಗಿಸುವ ವಿಭಾಗದಲ್ಲಿ ಏಕೈಕ ಎಸ್‌ಯುವಿಯಾಗಿದೆ ಎಂದು ಹೇಳಬಹುದು. ಇದು ಸ್ಪರ್ಧಾತ್ಮಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Do you know which cars use by the businessman anand mahindra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X