Doctor car: ಮಾರುತಿ ಸುಜುಕಿ ಆಲ್ಟೊ ಕಾರಿಗೆ ಹಸುವಿನ ಸಗಣಿ ಹಚ್ಚಿದ ಡಾಕ್ಟರ್.. ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!
ಬೇಸಿಗೆ ಬಿಸಿಲಿನ ಝಳಕ್ಕೆ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ತಮಗೆ ತೋಚಿದ ಉಪಾಯವನ್ನು ಹುಡುಕುತ್ತಾರೆ. ಸಾಮಾನ್ಯವಾಗಿ ಹಳ್ಳಿಗಾಡಿನ ಜನ ಮನೆ ಸುತ್ತಲು ಮರಗಳು ಹಾಕಿರುತ್ತಾರೆ. ಒಂದು ವೇಳೆ ಸೀಟ್ ಅಥವಾ ಹೆಂಚಿನ ಮನೆಯಾದ್ರೆ ತಂಪಾಗಿರಲು ಅದರ ಮೇಲೆ ತೆಂಗಿನ ಗರಿಗಳನ್ನು ಹೊದಿಸುತ್ತಾರೆ. ನಗರ ಪ್ರದೇಶದಲ್ಲಿ ಫ್ಯಾನ್, ಎಸಿ ಬಳಕೆ ಮಾಡುತ್ತಾರೆ.
ವಾಹನ ಚಾಲಕರ ವಿಚಾರಕ್ಕೆ ಬಂದರೆ, ಅವರು ಕೂಡ ಬಿಸಿಲಿನಿಂದ ರಕ್ಷಣೆ ಪಡೆಯಲು ಹಲವು ಐಡಿಯಾಗಳನ್ನು ಮಾಡುತ್ತಾರೆ. ಅದರಲ್ಲೂ ಇಲ್ಲೊಬ್ಬ ವೈದ್ಯ ಬೊಂಬಾಟ್ ಉಪಾಯ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಹಲವಾರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತಷ್ಟು ಮಂದಿ ಹೀಗೋ ಮಾಡುವ ಮೂಲಕ ಬಿಸಿಲಿನಿಂದ ರಕ್ಷಣೆ ಪಡೆಯಬಹುದೇ ಎಂದು ಬೆರಗುಗಣ್ಣಿನಿಂದ ನೋಡಾಡುತ್ತಿದ್ದಾರೆ. ಅಷ್ಟಕ್ಕೂ ಆ ಡಾಕ್ಟರ್ ಮಾಡಿದ್ದೇನು ಅಂದುಕೊಂಡಿದ್ದೀರಾ ಇಲ್ಲಿದೆ ವಿವರ.

ಮೂಲತಃ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ತಿಲಕಗಂಜ್ ವಾರ್ಡ್‌ನ ನಿವಾಸಿ ಹೋಮಿಯೋಪತಿ ವೈದ್ಯ ಸುಶೀಲ್ ಸಾಗರ್, ತಮ್ಮ ಮಾರುತಿ ಸುಜುಕಿ ಆಲ್ಟೊ ಕಾರಿಗೆ ಹಸುವಿನ ಸಗಣಿಯನ್ನು ಲೇಪಿಸಿದ್ದಾರೆ. ಹೀಗೆ ಮಾಡುವುದರಿಂದ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಬಹುದು. ಜೊತೆಗೆ ಕಾರು ತಪ್ಪಾಗಿರುತ್ತದೆ ಎಂಬುದು ಅವರ ನಂಬಿಕೆಯಾಗಿದೆ. ಹೇಳಿ-ಕೇಳಿ ಮಧ್ಯಪ್ರದೇಶದ ಕೆಲವೊಂದು ಕಡೆ ಬೇಸಿಗೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿರುತ್ತದೆ.
ಪ್ರಸ್ತುತ ದಿನಮಾನಗಳಲ್ಲಿ ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಕಾರಿನಲ್ಲಿ ಎಸಿ ಬಳಕೆ ಮಾಡುವುದು ವಾಡಿಕೆಯಾಗಿದೆ. ಆದರೆ, ವೈದ್ಯ ಸುಶೀಲ್ ಮಾತ್ರ ಸಗಣಿ ಲೇಪಿಸುವ ಮೂಲಕ ವಿಶಿಷ್ಟ ಪ್ರಯೋಗ ಮಾಡಿದ್ದಾರೆ. ಈ ರೀತಿ ಮಾಡುವುದರಿಂದ ಕಾರಿನೊಳಗೆ ಸಾಮಾನ್ಯ ತಾಪಮಾನ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳುತ್ತಾರೆ. ಹಸುವಿನ ಸಗಣಿ ಶಾಖ ನಿರೋಧಕವಾಗಿದ್ದು, ಇದು ಕಾರನ್ನು ಒಳಗಿನಿಂದ ತಂಪಾಗಿರುತ್ತದೆಯಂತೆ.

ಕಾರಿಗೆ ಸಗಣಿ ಲೇಪನ ಮಾಡುವುದರಿಂದ ಮತ್ತೊಂದು ಪ್ರಯೋಜನವು ಇದೆ ಎಂದು ವೈದ್ಯ ಸುಶೀಲ್ ಹೇಳುತ್ತಾರೆ. ಅದೆಂದರೆ, ಬೇಸಿಗೆಯಲ್ಲಿ ಎಸಿ ಆನ್ ಮಾಡಿದ ತಕ್ಷಣ ಕಾರು ತಣ್ಣಗಾಗಲು ಕೆಲವು ನಿಮಿಷಗಳು ಬೇಕು. ಆದರೆ, ಸಗಣಿ ಹಚ್ಚುವುದರಿಂದ ಕಾರು, ಮೊದಲಿನಿಂದಲೇ ತಂಪಾಗಿರುತ್ತದೆ. ಜೊತೆಗೆ ಎಸಿಗೆ ಅಲರ್ಜಿ ಇರುವವರೂ ಅದನ್ನು ಆನ್ ಮಾಡದೆಯೇ ಕಾರಿನಲ್ಲಿ ತಮ್ಮ ಪ್ರಯಾಣವನ್ನು ಬೆಳೆಸಬಹುದು.
'ಹಸುವಿನ ಸಗಣಿ ಬಿಟ್ಟು ಕಾರಿನ ಮೇಲೆ ಬೇರೆ ಏನನ್ನು ಹಚ್ಚಿಲ್ಲ. ನಮ್ಮ ಹಳ್ಳಿಗಾಡಿನಲ್ಲಿ ನೆಲಕ್ಕೆ ಹೇಗೆ ಸಗಣಿ ನೀರನ್ನು ಹಾಕುವರೂ ಅದೇ ವಿಧಾನವನ್ನು ಇಲ್ಲಿಯೂ ಅನುಸರಿಸಲಾಗಿದೆ. ಕಾರಿನ ಮೇಲೆ ಸಗಣಿ ಲೇಪಿಸಿ, ಅದರ ಮೇಲೆ ನೀರು ಬೀಳದಂತೆ ನೋಡಿಕೊಂಡರೆ, ಕನಿಷ್ಠವೆಂದರೂ ಎರಡು ತಿಂಗಳವರೆಗೆ ಇರುತ್ತದೆ ಎಂದು ವೈದ್ಯ ಸುಶೀಲ್ ಹೇಳುತ್ತಾರೆ.
ಈ ವೈದ್ಯ ಮಾಡಿದ ರೀತಿಯಲ್ಲದೇ ನಾವು ನೀಡುವ ಕೆಲವೊಂದು ಸಿಂಪಲ್ ಸಲಹೆಗಳಿಂದಲೂ ನೀವು ಬಿಸಿಲಿನ ಝಳದಿಂದ ರಕ್ಷಣೆ ಪಡೆಯಬಹುದು. ಪ್ರಯಾಣ ಆರಂಭಿಸುವುದಕ್ಕಿಂತ ಮೊದಲು ಎಸಿ ಆನ್ ಮಾಡಿರಿ. ಸನ್‌ಬ್ಲೈಂಡ್ ಮತ್ತು ವಿಂಡ್‌ಶೀಲ್ಡ್‌ಗಳನ್ನು ಬಳಕೆ ಮಾಡಿರಿ. ಕಾರುಗಳನ್ನು ಸ್ವಲ್ಪ ನೆರಳಿನ ಸ್ಥಳದಲ್ಲಿ ಪಾರ್ಕ್ ಮಾಡಿ, ಇದರಿಂದ ಬಿಸಿಲಿನ ತಾಪದಿಂದ ಕ್ಯಾಬಿನ್ ಬಿಸಿಯಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ


Click it and Unblock the Notifications