YouTube

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಅಜ್ಞಾನ ಹಾಗೂ ಉಡಾಫೆ ಮನೋಭಾವಗಳು ಅಪಘಾತಕ್ಕೆ ಪ್ರಮುಖ ಕಾರಣಗಳಾಗಿವೆ. ಸ್ಪಷ್ಟವಾಗಿ ಹೇಳುವುದಾದರೆ ವಾಹನ ಚಾಲಕರ ಅಜಾಗರೂಕ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿದೆ.

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಇದುವರೆಗೂ ಸಂಭವಿಸಿರುವ ಅಪಘಾತಗಳನ್ನು ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಈಗ ಅಪರೂಪದ ಅಪಘಾತಕ್ಕೆ ಅಮೆರಿಕಾದ ನಗರವೊಂದು ಸಾಕ್ಷಿಯಾಗಿದೆ. ಈ ಲೇಖನದಲ್ಲಿ ಅಮೆರಿಕಾದಲ್ಲಿ ನಡೆದ ಅಪರೂಪದ ಅಪಘಾತದ ಬಗೆಗಿನ ವಿವರಗಳನ್ನು ನೋಡೋಣ.

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಈ ಅಪಘಾತದಲ್ಲಿ ಜೀಪ್ ಐಷಾರಾಮಿ ಕಾರು ಡಿಕ್ಕಿ ಹೊಡೆದ ಕಾರಣಕ್ಕೆ ವಿಭಿನ್ನ ಕಲಾಕೃತಿಗಳನ್ನು ಹೊಂದಿರುವ ವಸ್ತುಸಂಗ್ರಹಾಲಯದ ಗೋಡೆಗೆ ಹಾನಿಯಾಗಿದೆ. ಈ ಅಪಘಾತಕ್ಕೆ ನಾಯಿಯೊಂದು ಕಾರಣವೆಂದು ಎಂದು ಹೇಳಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಈ ವಿಲಕ್ಷಣ ಅಪಘಾತವು ಅಮೆರಿಕಾದ ವಿಸ್ಕಾನ್ಸಿನ್‌ನ ಮಿಚಿಗನ್ ಸರೋವರದ ಪಶ್ಚಿಮ ದಂಡೆಯಲ್ಲಿರುವ ಮಿಲ್ವಾಕೀ ಗ್ರಾಮದಲ್ಲಿ ಸಂಭವಿಸಿದೆ. ಈ ಘಟನೆಯು ಆ ಪ್ರದೇಶದಲ್ಲಿ ಆತಂಕವನ್ನುಂಟು ಮಾಡಿದೆ.

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಘಟನೆಗೆ ಕಾರಿನ ಮಾಲೀಕರ ನಾಯಿಯೇ ಕಾರಣವೆಂದು ತಿಳಿದು ಬಂದಿದೆ. ಸಾಮಾನ್ಯವಾಗಿ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ಕಾರಿನ ಹಿಂಬದಿಯ ಸೀಟಿನಲ್ಲಿ ಸಾಗಿಸುತ್ತಾರೆ. ಆದರೆ ಈ ಘಟನೆ ನಡೆದಾಗ ಕೆಲ್ಲಿ ಎಂಬ 5 ವರ್ಷದ ಸಾಕು ನಾಯಿ ಕಾರಿನ ಮುಂಭಾಗದಲ್ಲಿ ಕುಳಿತಿತ್ತು ಎಂದು ಹೇಳಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಕಾರನ್ನು ಪಾರ್ಕ್ ಮಾಡಿದ ನಂತರ ಕೆಲ್ಲಿ ಕಾರಿನ ಗೇರ್ ಬದಲಿಸಿದೆ. ಕಾರಿನ ಮಾಲೀಕರು ನೀಡಿದ ಮಾಹಿತಿಯ ಆಧಾರದ ಮೇಲೆ ಡಬ್ಲ್ಯುಬೇ ಸುದ್ದಿ ಸಂಸ್ಥೆ ಈ ಘಟನೆಯ ಬಗ್ಗೆ ವರದಿ ಪ್ರಕಟಿಸಿದೆ.

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ವಸ್ತುಸಂಗ್ರಹಾಲಯದಲ್ಲಿರುವ ಅಪರೂಪದ ಕಲಾಕೃತಿಗಳಿಗೆ ಯಾವುದೇ ತೊಂದರೆಯಾಗಿಲ್ಲವೆಂದು ವರದಿಗಳು ತಿಳಿಸಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಆದರೆ ವಸ್ತು ಸಂಗ್ರಹಾಲಯದ ಗೋಡೆಗೆ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ಇದೇ ವೇಳೆ ಜೀಪ್ ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ. ನಾಯಿಯ ಅಚಾತುರ್ಯದಿಂದ ಉಂಟಾದ ಈ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಾರಿನ ಗೇರ್ ಬದಲಿಸಿ ಅಪಘಾತಕ್ಕೆ ಕಾರಣವಾದ ಸಾಕು ನಾಯಿ

ಅಪಘಾತಕ್ಕೆ ಕಾರಣವಾದ ಕೆಲ್ಲಿಯ ಫೋಟೋವನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ನೋಡಲು ಮುದ್ದು ಮುದ್ದಾಗಿ ಕಾಣುವ ಈ ನಾಯಿಯಿಂದಾಗಿ ಅಪಘಾತವಾಗಿದೆ. ಪೊಲೀಸರು ಈ ಘಟನೆಯ ಸಂಬಂಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಚಿತ್ರಕೃಪೆ: ದಿ ಪರ್ಲ್ ಆಫ್ ಡೋರ್ ಕೌಂಟಿ

Most Read Articles

Kannada
English summary
Dog changes car gear and crashes into an art gallery. Read in Kannada.
Story first published: Friday, March 26, 2021, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X