ನಿತ್ಯ ಪ್ರಯಾಣಿಕನಿಗೆ ರೈಲಿನಲ್ಲಿ ಸ್ಪೆಷಲ್ ಜಾಗ... ಸಂಜೆ ಮತ್ತೊಂದು ರೈಲಿನಲ್ಲಿ ಗೂಡಿಗೆ ವಾಪಸ್

ಲೋಕಲ್ ರೈಲುಗಳು ಮುಂಬೈ ಮಹಾನಗರದಲ್ಲಿ ಭಾರೀ ಫೆಮಸ್, ಇಲ್ಲಿನ ಸಾರಿಗೆ ವ್ಯವಸ್ಥೆಯ ಜೀವನಾಡಿ ಅಂಥಲೇ ಹೇಳಲಾಗುತ್ತದೆ. ನಿತ್ಯ ಸಾವಿರಾರು ಜನರು ಪ್ರಸಿದ್ಧ ಮುಂಬೈ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಆದ್ರೆ ನಾಯಿ ಕೂಡ ನಿತ್ಯ ಪ್ರಯಾಣಿಕರಂತೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದನ್ನು ಎಂದಾದರೂ ಕಂಡೀದ್ದೀರಾ?

ನಾಯಿ ತನ್ನ ಪ್ರಯಾಣಕ್ಕಾಗಿ ನಿತ್ಯ ರೈಲುಗಳನ್ನು ಬಳಸುವುದನ್ನು ನೋಡಿ ನಿಮಗೂ ಆಶ್ಚರ್ಯವಾಗಬಹುದು. ನಾಯಿಯೊಂದು ಪ್ರತಿದಿನ ಸ್ಥಳೀಯ ರೈಲನ್ನು ಬಳಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂಡಿಯಾ ಕಲ್ಚರಲ್ ಹಬ್ ಎಂಬ ಪೇಜ್ ಈ ವಿಡಿಯೋವನ್ನು ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಲೈಕ್‌, ಕಮೆಂಟ್, ವೀಕ್ಷಣೆಗಳನ್ನು ಪಡೆದುಕೊಂಡಿದೆ.

dog traveling by train

ಈ ವೈರಲ್ ವೀಡಿಯೊದಲ್ಲಿ, ರೈಲಿನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಬೀದಿ ನಾಯಿ ರೈಲನ್ನು ಹತ್ತುವುದನ್ನು ಕಾಣಬಹುದು. ನಂತರ ಬೊರಿವಲಿಯಿಂದ ಅಂಧೇರಿ ನಿಲ್ದಾಣಕ್ಕೆ ಅದರ ಪ್ರಯಾಣವನ್ನು ಸಾಗಿಸುತ್ತದೆ. ಪ್ರಯಾಣದ ವೇಳೆ ಯಾರಿಗೂ ಯಾವುದೇ ತೊಂದರೆ ಕೊಡದೆ ತನ್ನ ಪಾಡಿಗೆ ಬಾಗಿಲಿನ ಬಳಿ ಮಲಗಿ ನಿಲ್ದಾಣ ಬಂದ ಬಳಿಕ ಪ್ರಯಾಣಿಕರಂತೆಯೇ ಇಳಿದು ಹೋಗುತ್ತದೆ.

ಶ್ವಾನ ರೈಲಿನ ಒಳಗಿರುವುದನ್ನು ಕಂಡು ರೈಲನ್ನು ಹತ್ತುವ ಜನರು ಸಹ ಆಶ್ಚರ್ಯಕ್ಕೊಳಗಾಗುತ್ತಾರೆ. ಬಾಗಿಲಿನ ಬಳಿ ತನ್ನ ಪ್ರಯಾಣವನ್ನು ಆನಂದಿಸುತ್ತಾ ಮಲಗುವ ಈ ಶ್ವಾನವನ್ನು ಕಂಡು ಇತರ ಪರಯಾಣಿಕರು ಮುಗುಳುನಗುತ್ತಾರೆ. "#Mumbai ಸ್ಥಳೀಯ ರೈಲಿನ ಸಾಮಾನ್ಯ ಪ್ರಯಾಣಿಕನನ್ನು ಭೇಟಿ ಮಾಡಿ, ನಿಮ್ಮ ವಾರಾಂತ್ಯವನ್ನು ಹಗುರಗೊಳಿಸಲು ಇದು ಒಂದು ವಿಷಯ!" ಎಂದು ಇನ್‌ಸ್ಟಾ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.


ಮಾಹಿತಿಯ ಪ್ರಕಾರ ಪ್ರತಿದಿನ ಒಂದು ನಿರ್ದಿಷ್ಟ ರೈಲ್ವೆ ನಿಲ್ದಾಣದಿಂದ ರೈಲು ಹತ್ತುವ ನಾಯಿ, ಸಂಜೆ ಮತ್ತೊಂದು ರೈಲಿನ ಮೂಲಕ ಅದೇ ನಿಲ್ದಾಣಕ್ಕೆ ಮರಳುತ್ತದೆ. ಮುಂಬೈನ ಬೊರಿವಾಲಿ ನಿಲ್ದಾಣದಲ್ಲಿ ಹತ್ತಿ ರೈಲಿನಲ್ಲಿ ಯಾರಿಗೂ ತೊಂದರೆ ನೀಡದೆ ಅಂಧೇರಿ ರೈಲ್ವೆ ನಿಲ್ದಾಣದಲ್ಲಿ ಇಳಿಯಲಿದೆ. ನಂತರ ಅದು ಸಂಜೆ ಅಲ್ಲಿಂದ ಹೊರಟು ಮತ್ತೆ ಬೊರಿವಾಲಿಯನ್ನು ತಲುಪುತ್ತದೆ.

ಈ ಶ್ವಾನ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದ್ರೆ ಅದು ನಿಲ್ದಾಣದಲ್ಲಿ ಇಳಿದು ಮತ್ತೆ ಎಲ್ಲಿಗೆ ಹೋಗುತ್ತದೆ, ಹೋಗಿ ಏನು ಮಾಡುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಾಯಿ ಪ್ರೇಮಿಗಳಂತೂ ಈ ವಿಡಿಯೋವನ್ನು ಇನ್‌ ಸ್ಟಾದಲ್ಲಿ ಸಿಕ್ಕಾಪಟ್ಟೆ ಶೇರ್ ಮಾಡಿ ವೈರಲ್ ಮಾಡಿದ್ದಾರೆ.

ಸದ್ಯ ವೈರಲ್ ವಿಡಿಯೋ ಇನ್‌ಸ್ಟಾದಲ್ಲಿ 8.3 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಅಲ್ಲದೆ, ವೀಡಿಯೊವನ್ನು ವೀಕ್ಷಿಸಿದ ವ್ಯಕ್ತಿಯೊಬ್ಬರು, "ಈ ಜಗತ್ತು ಎಲ್ಲರಿಗಾಗಿಯೂ ಇದೆ. ಶ್ವಾನ ಮುಕ್ತವಾಗಿ ತಿರುಗಾಡುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ." ಎಂದು ತಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿದ್ದಾರೆ. ಹೀಗೆ ಸಾವಿರಾರು ಕಮೆಂಟ್‌ಗಳು ಶ್ವಾನ ಪರವಾಗಿ ಬಂದಿರುವುದು ವಿಶೇಷ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Tuesday, May 23, 2023, 16:23 [IST]
English summary
Dog daily traveling train viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+