ಚಹಾ ಮಾರುವವನ ಬದುಕನ್ನೇ ಬದಲಿಸಿದ ಸೋಷಿಯಲ್ ಮೀಡಿಯಾ!
ನೀವು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರೆ 'ಡಾಲಿ ಚಾಯ್ ವಾಲಾ' ಎಂಬಾತನ ಬಗ್ಗೆ ಗೊತ್ತಿರುತ್ತದೆ. ಈತನ ವಿಶಿಷ್ಟವಾದ ಡ್ರೆಸ್ಸಿಂಗ್ ಮತ್ತು ಟೀ ಮಾಡುವ ಸ್ಟೈಲ್‌ಗೆ ಫ್ಯಾನ್ಸ್ ಇದ್ದಾರೆ. ವಿಶ್ವದ ಅತ್ಯಂತ ಶ್ರಮಂತ ವ್ಯಕ್ತಿ ಬಿಲ್‌ಗೇಟ್ಸ್‌ಗೆ ಟೀ ಮಾಡಿಕೊಟ್ಟ ನಂತರ ಈತನ ರೇಂಜ್ ಬದಲಾಗಿಬಿಟ್ಟಿದೆ.
ಇದೀಗ ಹೊಸ ವಿಡಿಯೋ ಹರಿಬಿಟ್ಟು ಮತ್ತೊಮ್ಮೆ ವೈರಲ್ ಆಗಿದ್ದಾರೆ. ನಾಗ್ಪುರದ ಟೀ ಮಾರಾಟಗಾರನಾದ ಈತ ಇತ್ತೀಚೆಗೆ ಬಿಲ್ ಗೇಟ್ಸ್‌ಗಾಗಿ ಒಂದು ಕಪ್ ಚಹಾವನ್ನು ಮಾಡಿಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದ. ಈಗ ಈತನನ್ನು ಅಂಗಡಿ ಮತ್ತು ರೆಸ್ಟೋರೆಂಟ್ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿದೆ. ನಿತ್ಯ ಯಾವುದೋ ಒಂದು ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಕೊಳ್ಳುತ್ತಿದ್ದಾನೆ.

ಇದೀಗ ಡಾಲಿ ಚಾಯ್ ವಾಲಾ ಲ್ಯಾಂಬೋರ್ಘಿನಿ ಹ್ಯುರಾಕಾನ್ (Lamborghini Huracan) ಅನ್ನು ಪರಿಶೀಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಡಾಲಿ ಸ್ಟುಡಿಯೋ ಒಂದರಲ್ಲಿ ನಿಲ್ಲಿಸಿರುವ ಲ್ಯಾಂಬೋರ್ಘಿನಿ ಹ್ಯುರಾಕಾನ್ ಸೂಪರ್ ಕಾರಿನ ಪಕ್ಕದಲ್ಲಿ ನಡೆದಾಡುತ್ತಾ ಪರಿಶೀಲಿಸುವ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ತುಂಬಾ ಕಡಿಮೆ ಸಮಯದಲ್ಲೆ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಗಳಿಸಿದೆ.
ಸಬುನಿಶಾಂತ್ ಎಂಬಾತ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ' ಡಾಲಿ ಹೈದರಾಬಾದ್‌ನಲ್ಲಿ ಬಿಲ್‌ಗೇಟ್ಸ್ ಅವರಿಗೆ ಚಹಾ ಮಾಡಿಕೊಟ್ಟ ನಂತರ ಸೂಪರ್ ಕಾರುಗಳ ಮೇಲಿನ ಅವರ ಉತ್ಸಾಹವು ಅವರನ್ನು @sabooceramicproindia ಸೆರಾಮಿಕ್ ಪ್ರೊ - ಇಂಡಿಯಾ (ಕವಾಕಾ ಶೋರೂಂ)ಗೆ ಕರೆದೊಯ್ಯುದಿದೆ. ನಾವು ನಿಮಗೆ ಶುಭ ಹಾರೈಸುತ್ತೇವೆ @dolly_ki_tapri_nagpur ಬ್ರೋ ಶೀಘ್ರದಲ್ಲೇ ನೀವು ನಿಮ್ಮ ಸ್ವಂತ ಲ್ಯಾಂಬೊರ್ಘಿನಿಯನ್ನು ಖರೀದಿಸುತ್ತೀರಿ ಎಂದು ಬರೆಯಲಾಗಿದೆ.

ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸ್ಟೂಡಿಯೋ ಹೈದರಾಬಾದ್‌ನಲ್ಲಿದೆ. ಒಟ್ಟು ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದು, ಮೊದಲ ವಿಡಿಯೋದಲ್ಲಿ ಕಾರನ್ನು ಪರಿಶೀಲಿಸಿದರೆ ಎರಡನೇ ವಿಡಿಯೋದಲ್ಲಿ ಕಾರನ್ನು ಓಡಿಸುವುದನ್ನು ನೋಡಬಹುದು. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾರನ್ನು ಡಾಲಿ ಒಡಿಸಿಲ್ಲ. ಬದಲಿಗೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ. ಇಷ್ಟು ದುಬಾರಿ ಕಾರನ್ನು ಮೊದಲ ಬಾರಿ ಓಡಿಸಲು ಯಾರೇ ಹೆದರುವುದು ಸಾಮಾನ್ಯ.
ಲ್ಯಾಂಬೊರ್ಘಿನಿ ಹ್ಯುರಾಕನ್ ವಿಶೇಷತೆಗಳು: ಜನಪ್ರಿಯ ಲ್ಯಾಂಬೊರ್ಘಿನಿ ಗಲ್ಲಾರ್ಡೊಗೆ ಬದಲಿಯಾಗಿ ಹುರಾಕನ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಲ್ಯಾಂಬೊರ್ಘಿನಿ ಹ್ಯುರಾಕನ್ ಹಳೆಯ ಮಾದರಿಯಂತೆ ಕಾಣುತ್ತಿದೆ. ಈ ಸೂಪರ್ ಕಾರ್ 5.2 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 638 ಬಿಹೆಚ್‌ಪಿ ಪವರ್ ಹಾಗೂ 600 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಅನೇಕ ಭಾರತೀಯ ಸೆಲೆಬ್ರಿಟಿಗಳು ಈ ಸೂಪರ್ ಕಾರ್ ಅನ್ನು ಖರೀದಿಸಿದ್ದಾರೆ. ಹೊಸ ಲ್ಯಾಂಬೊರ್ಘಿನಿ ಹ್ಯುರಾಕನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 4 ಕೋಟಿಯಿಂದ ಪ್ರಾರಂಭವಾಗಿ ರೂ. 4.99 ಕೋಟಿಗಳಿದೆ. ಈ ಕಾರನ್ನು ಶೀಘ್ರದಲ್ಲೆ ಚಾಯ್ ವಾಲಾ ಡಾಲಿ ಖರೀದಿಸಲಿ ಎಂದು ನೆಟ್ಟಿಗರು ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ. ಈತನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications