ವಿಶ್ವದ ಅತ್ಯಂತ ಸುರಕ್ಷಿತ ಕಾರು: ಅಮೆರಿಕ ಅಧ್ಯಕ್ಷರ 'ದಿ ಬೀಸ್ಟ್‌' ಕಾರಿನ ಬಗ್ಗೆ ಯಾರಿಗೂ ತಿಳಿಯದ ರಹಸ್ಯ!

ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election) ಫಲಿತಾಂಶ ಇದೀಗ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಗೆದ್ದು ಅಮೆರಿಕದ 47 ನೇ ಅಧ್ಯಕ್ಷರಾಗಿದ್ದಾರೆ. ಎದುರಾಳಿ ಭಾರತ ಮೂಲದ ಕಮಲಾ ಹ್ಯಾರಿಸ್ (Kamala Harris) ಹಿನ್ನಡೆಯಾಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರು ಯಾರಾಗುತ್ತಾರೆ ಎಂಬುದರ ಬಗ್ಗೆ ಕಳೆದ ಕೆಲ ತಿಂಗಳುಗಳಿಂದ ಇಡೀ ಜಗತ್ತು ಗಮನಿಸುತ್ತಿತ್ತು. ಇದೀಗ ಭರ್ಜರಿ ಗೆಲವು ಗಳಿಸಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಯಾರೇ ಅಧಿಕಾರ ವಹಿಸಿಕೊಂಡರೂ ಅವರು 'ದಿ ಬೀಸ್ಟ್' (The Beast) ಎಂದು ಕರೆಯುವ ಕಾರಿನಲ್ಲಿಯೇ ಪ್ರಯಾಣಿಸುತ್ತಾರೆ. ಹೀಗಾಗಿ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಈಗ 'ದಿ ಬೀಸ್ಟ್' ಕಾರಿನಲ್ಲಿ ಪ್ರಯಾಣಿಸಲಿದ್ದಾರೆ. ಹಲವಾರು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ 'ದಿ ಬೀಸ್ಟ್' ಕಾರಿನ ವಿಶೇಷತೆಗಳ ಮಾಹಿತಿ ಇಲ್ಲಿದೆ.

The Beast

'ದಿ ಬೀಸ್ಟ್' ಕಾರು ಎಂಬುವುದು ಅಮೆರಿಕದ ಪ್ರಧಾನ ಕಛೇರಿಯ ಕ್ಯಾಡಿಲಾಕ್ ಕಂಪನಿಯ ಉತ್ಪನ್ನವಾಗಿದೆ. ಇನ್ನು ಕ್ಯಾಡಿಲಾಕ್ ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಶ್ವಪ್ರಸಿದ್ಧ ಜನರಲ್ ಮೋಟಾರ್ಸ್ ಕಂಪನಿಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಗಮನಾರ್ಹವಾದ ಅಂಶವಾಗಿದೆ. ಈ ಜನರಲ್ ಮೋಟಾರ್ಸ್ ಕ್ಯಾಡಿಲಾಕ್‌ನ ಮೂಲ ಕಂಪನಿಯಾಗಿದೆ.

ಭಯೋತ್ಪಾದಕರ ದಾಳಿಗೂ ಬಗ್ಗದ ಈ ಕಾರು ಅದ್ಭುತ ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಕ್ಯಾಡಿಲಾಕ್ ಕಂಪನಿಯು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಿಗಾಗಿ 'ದಿ ಬೀಸ್ಟ್' ಕಾರನ್ನು ತಯಾರಿಸಿದೆ.ರ 'ದಿ ಬೀಸ್ಟ್' ಕಾರಿನಲ್ಲಿ 7 ಮಂದಿ ಆರಾಮವಾಗಿ ಪ್ರಯಾಣಿಸಬಹುದು. ಈ ಕಾರಿನ ಉದ್ದ 18 ಅಡಿಯಾಗಿದೆ. ದಿ ಬೀಸ್ಟ್ ಕಾರಿನ ತೂಕ ಬರೊಬ್ಬರಿ 6,800-9,100 ಕೆ.ಜಿಯಾಗಿದೆ.

The Beast

'ದಿ ಬೀಸ್ಟ್' ಕಾರನ್ನು ಅಲ್ಯೂಮಿನಿಯಂ, ಸ್ಟೀಲ್ ಮತ್ತು ಸೆರಾಮಿಕ್ ಸಂಯೋಜನೆಯಿಂದ ತಯಾರಿಸಲಾಗಿದೆ. ಭಯೋತ್ಪಾದಕರು ರಾಸಾಯನಿಕ ದಾಳಿ ನಡೆಸಿದರೂ 'ದಿ ಬೀಸ್ಟ್'ನ ನಿವಾಸಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. 'ದಿ ಬೀಸ್ಟ್' ರಾತ್ರಿಯಲ್ಲೂ ಸ್ಪಷ್ಟವಾಗಿ ನೋಡಲು ಸಹಾಯ ಮಾಡುವ ಸಾಧನಗಳನ್ನು ಹೊಂದಿದೆ.

ಈ ದಿ ಬೀಸ್ಟ್ ಕಾರನ್ನು ಅಲ್ಯೂಮಿನಿಯಂ, ಸ್ಟೀಲ್ ಮತ್ತು ಸೆರಾಮಿಕ್ ಸಂಯೋಜನೆಯಿಂದ ತಯಾರಿಸಲಾಗಿದೆ. ಭಯೋತ್ಪಾದಕರು ರಾಸಾಯನಿಕ ದಾಳಿ ನಡೆಸಿದರೂ ದಿ ಬೀಸ್ಟ್ ಕಾರಿನ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ದಿ ಬೀಸ್ಟ್ ಕಾರು ರಾತ್ರಿಯಲ್ಲೂ ಸ್ಪಷ್ಟವಾಗಿ ನೋಡಲು ಸಹಾಯ ಮಾಡುವ ಸಾಧನಗಳನ್ನು ಹೊಂದಿದೆ.

The Beast

ಇನ್ನು ಭಯೋತ್ಪಾದಕರ ವಾಹನಗಳು ಹಿಂಬಾಲಿಸಿದರೆ ಮುಂದೆ ಮುಂದೆ ಸಾಗಲು ಸಾಧ್ಯವಾಗದಂತೆ ರಸ್ತೆಗೆ ಎಣ್ಣೆ ಸಿಂಪಡಿಸುವ ಸೌಲಭ್ಯ 'ದಿ ಬೀಸ್ಟ್' ಕಾರಿನಲ್ಲಿದೆ. ಅಲ್ಲದೇ ಸ್ಮೋಕ್ ಝೋನ್ ಸೃಷ್ಟಿಸಿ ಉಗ್ರರ ಕಣ್ಣಿಗೆ ಮಣ್ಣು ಎರಚಿ ತಪ್ಪಿಸಿಕೊಳ್ಳುವ ಸೌಲಭ್ಯ ಕೂಡ ಇದೆ. ಇಂತಹ ಸೌಲಭ್ಯಗಳ ಕಾರನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ಈ ಕಾರಿನ ಪ್ರತಿಯೊಂದು ಡೋರ್ ಬೋಯಿಂಗ್ 757 ನಲ್ಲಿನ ಡೋರಿನ ತೂಕದಂತೆಯೇ ಇರುತ್ತದೆ.

ಹಾಗಾಗಿ ಇದನ್ನು ಸಾಮಾನ್ಯ ಕಾರು ಎಂದು ಪರಿಗಣಿಸಲಾಗುವುದಿಲ್ಲ. ಈ ಕಾರಿನ ವಿಂಡೋಗಳು ಬಹು ಪದರಗಳಿಂದ ಮಾಡಲ್ಪಟ್ಟಿದೆ. ಅವುಗಳ ದಪ್ಪವು 5 ಇಂಚುಗಳಾಗಿವೆ. ಬಾಂಬ್ ದಾಳಿಯನ್ನು ತಡೆದುಕೊಳ್ಳುವ ಶಕ್ತಿ ಈ ಕಾರಿಗೆ ಇದೆ. ಅನಿರೀಕ್ಷಿತ ಟೈರ್ ಪಂಕ್ಚರ್ ಆಗಿದ್ದರೂ ಸಹ ಈ ಕಾರು ಚಲಿಸುತ್ತದೆ. ಈ ಕಾರಿನಲ್ಲಿ ಬಂದೂಕು, ಅಶ್ರುವಾಯು, ಗ್ರೆನೇಡ್ ಸೇರಿದಂತೆ ಸೇನೆಯಲ್ಲಿ ಬಳಸುವ ವಿವಿಧ ಆಯುಧಗಳನ್ನು ಒಳಗೊಂಡಿರುತ್ತದೆ.

ಈ ದಿ ಬೀಸ್ಟ್ ಕಾರಿನಲ್ಲಿ ಸ್ಯಾಟಲೈಟ್ ಫೋನ್ ಕೂಡ ಲಭ್ಯವಿದೆ. ಉಪಗ್ರಹ ಫೋನ್ ಪೆಂಟಗನ್, ಯುಎಸ್ ಮಿಲಿಟರಿ ಪ್ರಧಾನ ಕಚೇರಿ ಮತ್ತು ಯುಎಸ್ ಉಪಾಧ್ಯಕ್ಷರಿಗೆ ಸಂಪರ್ಕಗೊಳ್ಳುತ್ತದೆ. ಇನ್ನು ಅಧ್ಯಕ್ಷರಿಗೆ ಸೂಕ್ತವಾದ ರಕ್ತ ಮತ್ತು ಆಮ್ಲಜನಕವನ್ನು ಮುನ್ನೆಚ್ಚರಿಕೆಯಾಗಿ ಇರಿಸಲಾಗುತ್ತದೆ. ಈ ಕಾರಿನೊಳಗೆ, ಯಾವುದೇ ಬಾಹ್ಯ ಶಬ್ದ ಪ್ರವೇಶಿಸುವುದಿಲ್ಲ. ಈ ಕಾರನ್ನು ಅನುಸರಿಸುವ ಇತರ ಕಾರುಗಳು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರ ಮಿಲಿಟರಿ ವೈದ್ಯರನ್ನು ಒಳಗೊಂಡಂತೆ ಯಾವಾಗಲೂ ಸಿದ್ಧವಾಗಿರುತ್ತವೆ.

Article Published On: Wednesday, November 6, 2024, 19:09 [IST]
English summary
Donald trump us president the beast car details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+