ಜನಪ್ರಿಯ ಎಕ್ಸ್‌ಪ್ರೆಸ್‌ವೇನ ಒಂದೇ ಜಾಗದಲ್ಲಿ ಸಾಲಾಗಿ ಕೆಟ್ಟುನಿಂತ ಹತ್ತಾರು ಕಾರುಗಳು... ಕಾರಣವೇನು?
ಭಾರತದಲ್ಲಿ ಡಿಸೆಂಬರ್ ತಿಂಗಳು ಸಾಲು ರಜಾದಿನಗಳನ್ನು ನೀಡಿದ್ದು, ದೇಶಾದ್ಯಂತ ಜನಪ್ರಿಯ ಸ್ಥಳಗಳಿಗೆ ದಾರಿ ಮಾಡಿಕೊಡುವ ರಸ್ತೆಗಳು ಟ್ರಾಫಿಕ್‌ನಿಂದ ಉಸಿರುಗಟ್ಟಿಸಿವೆ. ಯಾವ ಮಟ್ಟಿಗೆ ಅಂದ್ರೆ ಕಿ.ಮೀಗಟ್ಟಲೆ ವಾಹನಗಳು ಸಾಲಾಗಿ ನಿಂತು ಕೆಟ್ಟುನಿಲ್ಲುವ ಸ್ಥಿತಿಗೆ ತಲುಪಿದ ಘಟನೆ ನಡೆದಿದೆ. ಇದಕ್ಕೆ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ಸಾಕ್ಷಿಯಾಗಿರುವ ವಿಡಿಯೋ ಈಗ ವೈರಲ್ ಆಗಿದೆ.
ದೇಶದೆಲ್ಲೆಡೆ ಸಾಲು ರಜೆಗಳಿಂದ ಜನ ಟ್ರಾಫಿಕ್ ಜಾಮ್‌ನಲ್ಲಿ ಕೆಲ ಗಂಟೆಗಳ ಕಾಲ ಕಳೆದಿದ್ದಾರೆ. ಭಾನುವಾರವೂ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಟ್ರಾಫಿಕ್ ದಟ್ಟಣೆ ಉಂಟಾಗಿತ್ತು. ಈ ವೇಳೆ ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಬಾನೆಟ್ ತೆರೆದು ನಿಲ್ಲಿಸಿದ ವೀಡಿಯೊ ಸಖತ್ ವೈರಲ್ ಆಗಿದೆ. ಬಹುತೇಕ ಕಾರುಗಳ ಎಂಜಿನ್‌ಗಳಿಂದ ಹೊಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಗೊತ್ತಿಲ್ಲದ ಜನರಿಗೆ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಭಾರತದ ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ರಸ್ತೆಯಾಗಿದೆ. ಇದೇ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆಯಲ್ಲಿ ಪ್ರಯಾಣಿಕರು ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ, ಕ್ಲಚ್‌ನ ನಿರಂತರ ಕಾರ್ಯಾಚರಣೆಯಿಂದ ವಾಹನವು ಹೆಚ್ಚು ಬಿಸಿಯಾಗುತ್ತದೆ, ಜೊತೆಗೆ ವಾಹನ ದಟ್ಟಣೆಯಲ್ಲಿ ಹೋಗಿತ್ತಿರುವ ಕಾರಣ ಮುಕ್ತ ಗಾಳಿಯಲ್ಲಿ ಚಲಿಸುವುದಿಲ್ಲ.
ಎಂಜಿನ್‌ನಿಂದ ಹೊಗೆ ಬರಲು ಇನ್ನೂ ಹಲವಾರು ಕಾರಣಗಳಿದ್ದರೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವಾಹನವು ಈ ರೀತಿ ಬಿಸಿಯಾಗಲು ಕೆಲವು ಸಂಭವನೀಯ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅವರ ಪ್ರಕಾರ ವಾಹನದಲ್ಲಿ ಮೂಲಭೂತ ತಪಾಸಣೆಗಳನ್ನು ಮಾಡದಿರುವುದು ಮತ್ತು ವಾಹನವನ್ನು ಸರಿಯಾಗಿ ನಿರ್ವಹಿಸದಿರುವುದು ಅಧಿಕ ಬಿಸಿಯಾಗಲು ಕಾರಣವಾಗಿರಬಹುದು. ಹೀಗಿದ್ದಾಗ ಕ್ಲಚ್‌ನ ನಿರಂತರ ಕಾರ್ಯಾಚರಣೆ ಇಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಪ್ರಯಾಣದ ಮೊದಲು ಇವುಗಳನ್ನು ಅನುಸರಿಸಿ:
ಬ್ಯಾಟರಿಗಳನ್ನು ಪರಿಶೀಲಿಸಿ: ಪ್ರವಾಸಕ್ಕೆ ಹೋಗುವ ಮೊದಲು, ನಿಮ್ಮ ಕಾರ್ ಬ್ಯಾಟರಿಗಳ ದಿನಾಂಕ ಮತ್ತು ಚಾರ್ಜಿಂಗ್ ಸಾಮರ್ಥ್ಯವನ್ನು ಪರಿಶೀಲಿಸುವುದು ಮುಖ್ಯ. ರಸ್ತೆಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಅಗತ್ಯವಿದ್ದರೆ ಅವುಗಳನ್ನು ಬದಲಾಯಿಸಿ. ಏಕೆಂದರೆ ಬ್ಯಾಟರಿ ಕೈಕೊಟ್ಟರೆ ಟ್ರಾಫಿಕ್ ದಟ್ಟಣೆಯಲ್ಲಿ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ.
ಕಾರ್ ಬ್ರೇಕ್‌ಗಳನ್ನು ಪರಿಶೀಲಿಸಿ: ಅಗತ್ಯವಿದ್ದರೆ ನಿಮ್ಮ ಕಾರಿನ ಬ್ರೇಕ್ ಆಯಿಲ್ ಮತ್ತು ಬ್ರೇಕ್ ಪ್ಯಾಡ್‌ಗಳನ್ನು ಪರಿಶೀಲಿಸುವ ಮತ್ತು ಬದಲಾಯಿಸುವ ಮೂಲಕ ನಿಮ್ಮ ಕಾರಿನ ಬ್ರೇಕ್‌ಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಉತ್ತಮವಾಗಿ ಕಾರ್ಯನಿರ್ವಹಿಸುವ ಬ್ರೇಕ್‌ಗಳು ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುತ್ತವೆ ಎಂಬುದನ್ನು ಮರೆಯದಿರಿ.

ಏರ್ ಫಿಲ್ಟರ್ & ಆಯಿಲ್ ಪರಿಶೀಲಿಸಿ: ನಿಮ್ಮ ಕಾರು ಮತ್ತು ಎಂಜಿನ್‌ಗೆ ಹೊಸ ಗಾಳಿ ಬರುವುದನ್ನು ಖಚಿತಪಡಿಸಿಕೊಳ್ಳಲು ಕೊಳಕು ಏರ್ ಫಿಲ್ಟರ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಇದು ಇಂಧನ ದಕ್ಷತೆ ಮತ್ತು ನಿಮ್ಮ ಹವಾನಿಯಂತ್ರಣ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಹಾಗೆಯೇ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಪ್ರಯಾಣದ ಮೊದಲು ಎಂಜಿನ್ ಕೂಲಂಟ್ ಮತ್ತು ಬ್ರೇಕ್ ಆಯಿಲ್‌ಗಳನ್ನು ಪರೀಕ್ಷಿಸಿ ಹೊಸ ಆಯಿಲ್‌ಗಳನ್ನು ತುಂಬಿ.
ಎಂಜಿನ್ ಆಯಿಲ್ & ಟೈರ್ ಒತ್ತಡ: ದೀರ್ಘ ಪ್ರಯಾಣದ ಮೊದಲು ನಿಮ್ಮ ಕಾರಿನ ಎಂಜಿನ್ ಆಯಿಲ್ ಮಟ್ಟ ಮತ್ತು ಶುಚಿತ್ವವನ್ನು ಪರಿಶೀಲಿಸಿ. ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಗಾಗಿ ಆಯಿಲ್ ಮತ್ತು ಆಯಿಲ್ ಫಿಲ್ಟರ್ ಅನ್ನು ಬದಲಾಯಿಸುವುದನ್ನು ಪರಿಗಣಿಸಿ. ಜೊತೆಗೆ ಸುಗಮ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಟೈರ್ ಒತ್ತಡವಿರಬೇಕು. ಟೈರ್ ತ್ರೆಡ್‌ಗಳನ್ನು ಪರೀಕ್ಷಿಸಿ ಮತ್ತು ಅಗತ್ಯವಿದ್ದರೆ ಟೈರ್‌ಗಳನ್ನು ಬದಲಾಯಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications