ಅಟ್ಲಾಸ್ ಸೈಕಲ್‌ನಿಂದ ಆರಂಭಿಸಿ ದುಬಾರಿ ಕಾರುಗಳ ಒಡೆಯನಾದ: ಯಾರೀ ಫ್ಯಾಂಟಸಿ ಕ್ರಿಕೆಟ್ ಪರಿಣಿತ?
ಭಾರತದಲ್ಲಿ ಕ್ರಿಕೆಟ್‌ಗೆ ಇರುವ ಕ್ರೇಜ್ ಏನೆಂಬುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಸದ್ಯ ನಮ್ಮ ಭಾರತ ಕ್ರಿಕೆಟ್ ತಂಡದ ಪ್ರತಿ ಆಟಗಾರ ಕೂಡ ಕೋಟ್ಯಾಧಿಪತಿಯಾಗಿದ್ದಾರೆ. ಆದರೆ ಅದೆಷ್ಟೋ ಜನ ಭಾರತ ಪರವಾಗಿ ಅಂತರಾಷ್ಟ್ರಿಯ ಕ್ರಿಕೆಟ್ ಆಡುವ ಕನಸು ನನಸಾಗದೇ ಉಳಿದಿರುವ ಉದಾಹರಣೆಗಳು ಕೂಡ ಇವೆ.
ಚಿಂತೆ ಬೇಡ ಕ್ರಿಕೆಟ್ ಆಡದಿದ್ದರೂ ಈ ಆಟವನ್ನು ಬಳಸಿಕೊಂಡೆ 'ಅನುರಾಗ್ ದ್ವಿವೇದಿ' ಎಂಬ ಯುವಕ ಕೋಟ್ಯಾಧಿಪತಿಯಾಗಿದ್ದಾನೆ. ಈತ ದೈಹಿಕವಾಗಿ ಕ್ರಿಕೆಟ್ ಆಡುವುದಿಲ್ಲ, ಆದರೆ ವರ್ಚುವಲ್ ತಂಡವನ್ನು ರಚಿಸುವ ಮೂಲಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಂತ್ರಗಳನ್ನು ರೂಪಿಸಿ ಹಣ ಗಳಿಸುತಿದ್ದಾನೆ. ಈತ ಉತ್ತರ ಪ್ರದೇಶದ 21 ವರ್ಷದ ಫ್ಯಾಂಟಸಿ ಕ್ರಿಕೆಟ್ (ಡ್ರೀಮ್11) ಪರಿಣತನಾಗಿದ್ದಾನೆ.

ಅನುರಾಗ್‌ನ Instagram ಪ್ರೊಫೈಲ್ ಅನ್ನು ಪರಿಶೀಲಿಸಿದರೆ, ಸೈಕಲ್ ಹೊಂದಿರುವ ಹಳೆಯ ಚಿತ್ರವನ್ನು ನೋಡಬಹುದು. ಜೀವನ ಎಲ್ಲಿಂದ ಪ್ರಾರಂಭವಾಯಿತು ಎಂದು ಆತನೇ ಉಲ್ಲೇಖಿಸಿದ್ದಾನೆ. ಅನುರಾಗ್ ಶ್ರೀಮಂತ ಹಿನ್ನೆಲೆಯಿಂದ ಬಂದವನಲ್ಲ. ಸಾಮಾನ್ಯ ಮಧ್ಯಮ ವರ್ಗದವನಾಗಿದ್ದು, ಆರಂಭದಲ್ಲಿ ಕ್ರಿಕೆಟ್ ಆಟಗಾರನಾಗಲು ಬಯಸಿದ್ದನಂತೆ.
ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಕನಸು ನನಸಾಗಲಿಲ್ಲ. ತನ್ನ ಉತ್ಸಾಹವನ್ನು ವಿಭಿನ್ನ ರೀತಿಯಲ್ಲಿ ಅನುಸರಿಸಿ ಆನ್‌ಲೈನ್‌ನಲ್ಲಿ ಫ್ಯಾಂಟಸಿ ಕ್ರಿಕೆಟ್ (Dream11) ಪರಿಣತನಾಗಿದ್ದಾನೆ. ಆರಂಭಿಕ ದಿನಗಳಲ್ಲಿ ಅಟ್ಲಾಸ್ ಬೈಸಿಕಲ್ ಅನ್ನು ಹೊಂದಿದ್ದ ಈತ ಈಗ ಮಾರುತಿ ಡಿಜೈರ್‌ನಿಂದ ಹಿಡಿದು ಲ್ಯಾಂಡ್ ರೋವರ್ ಡಿಫೆಂಡರ್ ನಂತಹ ದುಬಾರಿ ಕಾರುಗಳ ಒಡೆಯನಾಗಿದ್ದಾನೆ.

ಮಾರುತಿ ಡಿಜೈರ್ (Maruti Dzire) ಬಹುಶಃ ಅನುರಾಗ್‌ನ ಮೊದಲ ಕಾರು. ತನ್ನ ಡಿಜೈರ್‌ನೊಂದಿಗೆ ಪೋಸ್ ನೀಡುತ್ತಿರುವ ಚಿತ್ರವನ್ನು ಇನ್‌ಸ್ಟಾದಲ್ಲಿ ನೋಡಬಹುದು. ಕೆಂಪು ಬಣ್ಣದ ಮಾರುತಿ ಡಿಜೈರ್ ಪ್ರಸ್ತುತ-ಪೀಳಿಗೆಯ ಪ್ರಿ-ಫೇಸ್‌ಲಿಫ್ಟ್ ಮಾದರಿಯಾಗಿದೆ. BMW 7-ಸಿರೀಸ್ ಅನುರಾಗ್‌ನ ಗ್ಯಾರೇಜ್‌ನಲ್ಲಿ ಎರಡನೇ ಕಾರು, ಇದು ಐದನೇ ತಲೆಮಾರಿನ ಐಷಾರಾಮಿ ಸೆಡಾನ್ ಆಗಿದೆ. ಇದನ್ನು ಸೆಕೆಂಡ್‌ಹ್ಯಾಂಡ್ ನಲ್ಲಿ ಖರೀದಿಸಿರುವುದಾಗಿ ತಿಳಿದುಬಂದಿದೆ.
ಫೋರ್ಡ್ ಎಂಡೀವರ್ (Ford Endeavour) ಅನ್ನು 2021 ರಲ್ಲಿ ಖರೀದಿಸಿದ್ದಾನೆ, ಇದು BS6 ಆವೃತ್ತಿಯ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಗಿದ್ದು 10-ಸ್ಪೀಡ್ ಆಟೋಮ್ಯಾಟಿಕ್ ಆಗಿದೆ. Mercedes-Benz E-class ಅನುರಾಗ್ ಹೊಂದಿರುವ ನಾಲ್ಕನೇ ಕಾರು. ಕಳೆದ ವರ್ಷ, ತಮ್ಮ ಕುಟುಂಬದೊಂದಿಗೆ ಈ ಐಷಾರಾಮಿ ಸೆಡಾನ್ ಅನ್ನು ಖರೀದಿಸಿದ್ದಾನೆ. ಈ ಐಷಾರಾಮಿ ಸೆಡಾನ್ ಬೆಲೆಯು ಸುಮಾರು 80 ಲಕ್ಷ ರೂ.

ಅನುರಾಗ್ ಬಳಿ ಮಹೀಂದ್ರಾ ಥಾರ್ (Mahindra thar) ಕೂಡ ಇದ್ದು, ಇದು ಆತನ ಅತ್ಯಂತ ನಿರೀಕ್ಷಿತ SUV. ಇದಾದ ಬಳಿಕ BMW Z4 ಕೂಡ ಅನುರಾಗ್ 2022 ರಲ್ಲಿ ಖರೀದಿಸಿದ್ದ ಹೊಚ್ಚ ಹೊಸ ಸ್ಪೋರ್ಟ್ಸ್ ಕಾರ್ ಆಗಿದೆ. ಈ ಪ್ರಸ್ತುತ-ಪೀಳಿಗೆಯ ಈ ಕಾರು 3.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, Z4 ನ M40i ರೂಪಾಂತರದ ಬೆಲೆ 89.30 ಲಕ್ಷ (ಎಕ್ಸ್ ಶೋ ರೂಂ.) ವಿದೆ.
ಲ್ಯಾಂಡ್ ರೋವರ್ ಡಿಫೆಂಡರ್ 130 ಅನುರಾಗ್ ಇತ್ತೀಚೆಗೆ ಖರೀದಿಸಿದ SUV ಆಗಿದೆ. ಈ ವರ್ಷದ ಜೂನ್‌ನಲ್ಲಿ ಈ ಬೃಹತ್ ಎಸ್‌ಯುವಿ ಖರೀದಿಸಲಾಗಿದೆ. ಇದು 5-ಡೋರ್ ಎಸ್‌ಯುವಿಯ 8-ಆಸನಗಳ ಆವೃತ್ತಿಯಾಗಿದ್ದು, ಉತ್ತರ ಪ್ರದೇಶದಲ್ಲಿ ವಿತರಿಸಲಾದ ಮೊದಲ ಮಾದರಿಯಾಗಿದೆ. ಸುಮಾರು 1.41 ಕೋಟಿ ರೂ. ಎಕ್ಸ್ ಶೋರೂಂ ಬೆಲೆಯಿದ್ದು, ಇದು ಬಹುಶಃ ಆತನ ಗ್ಯಾರೇಜ್‌ನಲ್ಲಿ ಅತ್ಯಂತ ದುಬಾರಿ ಕಾರಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications