DRL: ಡೇಟೈಮ್ ರನ್ನಿಂಗ್ ಲೈಟ್‌ಗಳಿಂದ ಅಪಘಾತಗಳ ಅಪಾಯ ಕಡಿಮೆ: ಅಧ್ಯಯನ ವರದಿ
ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ (DRL) ಆಧುನಿಕ ಕಾರುಗಳಲ್ಲಿ ಜನಪ್ರಿಯ ಫೀಚರ್ ಆಗಿದೆ. ಹೆಚ್ಚಿನ ಆಧುನಿಕ ಕಾರುಗಳು ಈ ಫೀಚರ್ ಅನ್ನು ಹೊಂದಿದ್ದು. ಅದು ವಾಹನದ ಸ್ಟೈಲ್ ಮತ್ತು ದೃಷ್ಟಿಗೋಚರ ನೋಟವನ್ನು ಹೆಚ್ಚಿಸುವುದಲ್ಲದೆ, ಅಪಘಾತಗಳ ಅಪಾಯವನ್ನು ಶೇಕಡಾ 8.8 ರಷ್ಟು ಕಡಿಮೆ ಮಾಡುತ್ತದೆ ಎಂದು ಮೊನಾಶ್ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೇಳುತ್ತದೆ.
ಪ್ರಪಂಚಾದ್ಯಂತ ವಾಹನಗಳ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ ಭಾರತದಲ್ಲಿಯೂ ಕೂಡ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಡಿಆರ್ಎಲ್ (DRL) ವಾಹನಗಳು ಗೋಚರತೆ ಆಧಾರಿತ ಅಪಘಾತವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯ ವರದಿ ಕಂಡುಹಿಡಿದಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮೊನಾಶ್ ವಿಶ್ವವಿದ್ಯಾನಿಲಯದ ಅಪಘಾತ ಸಂಶೋಧನಾ ಕೇಂದ್ರವು ಜರ್ನಲ್ ಆಫ್ ಸೇಫ್ಟಿ ಅಧ್ಯಯನ ವರದಿ ಅನ್ನು ಪ್ರಕಟಿಸಿದೆ.

ಇದು ನ್ಯೂ ಸೌತ್ ವೇಲ್ಸ್, ವಿಕ್ಟೋರಿಯಾ, ಕ್ವೀನ್ಸ್‌ಲ್ಯಾಂಡ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾದ ಪೋಲೀಸ್ ಡೇಟಾವನ್ನು ಬಳಸಿಕೊಂಡು DRL ಗಳು ಅಲ್ಲದವರಲ್ಲಿ ತೊಡಗಿಸಿಕೊಳ್ಳುವ ಅಪಾಯವನ್ನು ಎಷ್ಟು ಕಡಿಮೆ ಮಾಡುತ್ತದೆ ಎಂದು ಅಂದಾಜು ಮಾಡಿದೆ. ವಾಹನಗಳು ಚಲಾಯಿಸುವಾಗ ಗೋಚರತೆಯು ಒಂದು ಪ್ರಮುಖ ಅಂಶವಾಗಿರುವುದರಿಂದ ಡೇಟೈಮ್ ರನ್ನಿಂಗ್ ಲೈಟ್‌ಗಳು ಅತ್ಯವಶ್ಯಕವಾಗಿದೆ.
ಡೇಟೈಮ್ ರನ್ನಿಂಗ್ ಲೈಟ್‌ಗಳಿಗೆ ಅಪಾಘತಗಳ ಅಪಾಯವನ್ನು ಗಮನಾರ್ಹವಾಗಿ ಶೇಕಡಾ 8.8 ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸುತ್ತದೆ. ಹೆಚ್ಚಿನ ವೇಗದಲ್ಲಿ ಮತ್ತು ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ, ಪ್ರಕಾಶಮಾನವಾದ ಹಗಲು ಬೆಳಕಿಗೆ ಹೋಲಿಸಿದರೆ, ಗೋಚರತೆ ಉತ್ತಮವಾಗಿದ್ದಾಗ ಅಪಾಘತಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 2010 ಮತ್ತು 2017 ರ ನಡುವೆ ಸಂಭವಿಸಿದ ಘಟನೆಗಳಿಗೆ ಪೋಲಿಸ್ ವರದಿ ಮಾಡಿದ ಅಪಘಾತದ ದತ್ತಾಂಶವನ್ನು ಒಳಗೊಂಡಿರುವ ಡೇಟಾವನ್ನು ಅಧ್ಯಯನವು ವಿಶ್ಲೇಷಿಸಿದೆ.

ಯಾವ ಕಾರುಗಳು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳನ್ನು ಹೊಂದಿದ್ದವು ಮತ್ತು ಇಲ್ಲದಿರುವ ಕಾರುಗಳನ್ನು ಅಧ್ಯಯನವು ಪರಿಶೀಲಿಸಿದೆ. ಎಲ್ಲಾ ಹೊಸ ವಾಹನಗಳು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂಬುದಕ್ಕೆ ಈ ವರದಿಯು ಸ್ಪಷ್ಟ ಪುರಾವೆಗಳನ್ನು ಒದಗಿಸುತ್ತದೆ ಎಂದು ಅಧ್ಯಯನವು ತೀರ್ಮಾನಿಸಿದೆ. ಅಪಘಾತ ಅಪಾಯಗಳನ್ನು ಕಡಿಮೆ ಪ್ರಮಾಣವು ಲಭ್ಯವಿರುವ ಕೆಲವು ಆಧುನಿಕ ಪ್ರಾಥಮಿಕ ವಾಹನ ಸುರಕ್ಷತಾ ತಂತ್ರಜ್ಞಾನಗಳ ಪರಿಣಾಮಕ್ಕಿಂತ ಕಡಿಮೆಯಾಗಿದೆ ಎಂದು ಅಧ್ಯಯನವು ಗಮನಿಸಿದೆ.
ಆದರೆ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ, ಅಪಘಾತದ ಅಪಾಯವು ಹೆಚ್ಚು. ಹೊಸ ವಾಹನಗಳ ಮೇಲೆ DRL ಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂಬುದಕ್ಕೆ ಫಲಿತಾಂಶವು ಸ್ಪಷ್ಟ ಪುರಾವೆಗಳನ್ನು ಒದಗಿಸುತ್ತದೆ ಎಂದು ಅಧ್ಯಯನವು ತಿಳಿಸುತ್ತದೆ. ಅಪಘಾತಗಳ ಅಪಾಯ ಕಡಿಮೆ ಮಾಡಲು ಕೆಲವು ಸ್ಟ್ಯಾಂಡರ್ಡ್ ಸುರಕ್ಷತಾ ಫಿಚರ್ಸ್ ಗಳನ್ನು ಹೊಂದಿರುವ ಕಾರುಗಳನ್ನು ಪರಿಗಣಿಸುವುದು ಉತ್ತಮ.
ಭಾರತದಲ್ಲಿ ವಾಹನಗಳ ಸಂಖ್ಯೆಗಳು ಕೂಡ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅಪಘಾತಗಳ ಸಂಖ್ಖೆಯು ಏರಿಕೆಯಾಗುತ್ತಿದೆ. ಇದರಿಂದ ನೀವು ಕಾರು ಖರೀದಿಸುವಾಗ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿರುವ ಕಾರು ಆಯ್ಕೆ ಮಾಡಿಕೊಳ್ಳವುದು ಉತ್ತಮ. ಇದರಿಂದ ಅಪಘಾತಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಭಾರತದಲ್ಲಿ ನೀವು ಕ್ರ್ಯಾಶ್ ಟೆಸ್ಟ್ ರೇಟ್ ನೋಡಿ ಕೂಡ ಸುರಕ್ಷತಾ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಸೋಷಿಯಲ್ ಮೀಡಿಯಾಗಳಲ್ಲಿ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications