ಫ್ರೀ ಬಸ್‌ನಲ್ಲಿ ಹೋದ ಹೆಂಡತಿ ಇನ್ನೂ ಬಂದಿಲ್ಲ, ನನ್ನ ಮೇಲೆ ಬಸ್ ಹತ್ತಿಸಿ: ಬಸ್ ಕೆಳಗೆ ಆತ್ಮಹತ್ಯೆಗೆ ಯತ್ನಿಸಿದ ಕುಡುಕ
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಇದೇ ಸಿಕ್ಕಿದ ಚಾನ್ಸ್ ಎಂದು ಮಹಿಳೆಯರು ಮನೆ ಬಿಟ್ಟು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಾರಗಟ್ಟಲೇ ಧರ್ಮಸ್ಥಳ, ಸುಬ್ರಹ್ಮಣ್ಯ ಎಂದು ತಿರುಗಾಡುತ್ತಿದ್ದು ಇದರಿಂದ ರೋಸಿ ಹೋಗಿರುವುದು ಮಾತ್ರ ಆಯಾ ಮನೆಯ ಗಂಡಸರು.
ತನ್ನ ಹೆಂಡತಿ ಫ್ರೀ ಬಸ್‌ನಲ್ಲಿ (Shakti Scheme) ಮನೆಯಿಂದ ಹೋಗಿದ್ದು ಇನ್ನೂ ಸಹ ಮರಳಿ ಬಂದಿಲ್ಲ ಎಂದು ಕುಡುಕನೊಬ್ಬ ಕೆಸ್‌ಆರ್‌ಟಿಸಿ ಬಸ್‌ನ ಕೆಳಗೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆಯೊಂದು ನಡೆದಿದೆ. ಬೆಂಗಳೂರಿನ ಹೊಸಕೋಟೆ ಬಸ್‌ಸ್ಟ್ಯಾಂಡ್‌ನಲ್ಲಿ ಘಟನೆ ನಡೆದಿದ್ದು, ಬಸ್ ಕೆಳಗೆ ಮಲಗಿ ಸಿದ್ದರಾಮಯ್ಯ ಸರ್ಕಾರ ಈ ಶಕ್ತಿಯೋಜನೆಯನ್ನು ಹಿಂಪಡೆಯುವಂತೆ ಡಿಮ್ಯಾಂಡ್ ಮಾಡಿದ್ದಾನೆ.

ಇನ್ನು ಈ ಕುಡುಕ ಸುಮಾರು 30 ನಿಮಿನಷಗಳ ಕಾಲ ಆ ಬಸ್ ಕೆಳಗೆ ಮಲಗಿ ಆ ಏರಿಯಾದಲ್ಲಿ ಟ್ರಾಫಿಕ್ ಜಾಮ್ ಆಗಲು ಕಾರಣಕರ್ತನಾಗಿದ್ದಾನೆ. ನಂತರ ಅಲ್ಲಿದ್ದ ಜನರೆಲ್ಲಾ ಸೇರಿ ಬಲವಂತವಾಗಿ ಆತನನ್ನು ಬಸ್ ಕೆಳಗಿಂದ ಎಬ್ಬಿಸಿ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯನ್ನು ಅಲ್ಲೇ ಇದ್ದ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಇನ್ನು ಬಸ್ ಕೆಳಗೆ ಮಲಗಿದ ಆತ, ಸಿದ್ದರಾಮಯ್ಯ ಸರ್ಕಾರ ಬರೀ ಮಹಿಳೆಯರಿಗೆ ಮಾತ್ರ ಎಲ್ಲಾ ಸೌಲಭ್ಯವನ್ನು ಕೊಡುತ್ತಿದೆ. ಪುರುಷರು ಏನು ತಪ್ಪು ಮಾಡಿದ್ದಾರೆ? ಶಕ್ತಿ ಯೋಜನೆಯಲ್ಲಿ ಗಂಡಸರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ಮಾಡಿದ್ದಾನೆ.

ನನ್ನ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಹೆಂಡಮತಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಫ್ರೀ ಬಸ್‌ನಲ್ಲಿ ಟೂರ್ ಹೋಗಿದ್ದಾಳೆ. ಹೀಗಾದಾ ಗ ಅವರನ್ನು ನೋಡಿಕೊಳ್ಳುವುದು ಯಾರು ಎಂದು ಇದೇ ಸಂಧರ್ಭದಲ್ಲಿ ತಾನು ಅನುಭವಿಸುತ್ತಿರುವ ಕಷ್ಟವನ್ನು ಅಲ್ಲಿದ್ದ ಜನರ ಬಳಿ ಪ್ರತಿಭಟನೆಯ ವೇಳೆ ತೋಡಿಕೊಂಡಿದ್ದಾನೆ.
ಇನ್ನು ವಿಡಿಯೋದಲ್ಲಿ ಕಾಣುವಂತೆ ಅಲ್ಲಿ ಬಸ್ ಕೆಳಗೆ ಮಲಗಿದ್ದ ಕುಡುಕನನ್ನು ಹೊರ ತೆಗೆಯಲು ಅಲ್ಲಿದ್ದ ಜನ ಹರ ಸಾಹಸ ಪಡುತ್ತಿದ್ದಾರೆ. ಅಲ್ಲಿ ನೆರೆದಿರುವವರು ಆತನ ಬಳಿ ಹೊರ ಬರುವಂತೆ ಕೇಳಿಕೊಳ್ಳುತ್ತಿದ್ದು, ಆತ ಹೊರ ಬರಲು ನಿರಾಕರಿಸುತ್ತಿದ್ದಾನೆ. ನೀವು ನನ್ನ ಮೇಲೆ ಬಸ್ ಹತ್ತಿಸಿ, ನಾನು ಹೊರಗೆ ಬರುವುದಿಲ್ಲ ಎಂದು ಹಠ ಹಿಡಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಕಾಂಗ್ರೇಸ್ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಜನರಿಗೆ ಚುನಾವಣೆಯಲ್ಲಿ ತಾವು ನೀಡಿದ್ದ ಭರವಸೆಗಳಲ್ಲಿ ಹೊಂದಾದ ಈ ಮಹಿಳೆಯರ ಫ್ರೀ ಬಸ್ ಯೋಜನೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಜಾರಿಗೆ ತಂದಿದ್ದರು. ಈ ಮೂಲಕ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications