Just In
Don't Miss!
- Sports
ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್
- News
ಯುಎಪಿಎ ಅಡಿ ಯಾವುದೇ ವಕ್ತಿಯನ್ನು ವಿಚಾರಣೆಗೊಳಪಡಿಸಬಹುದು-ಹೈಕೋರ್ಟ್ ಆದೇಶ
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ದುಬೈನಲ್ಲಿ ಆಂಬ್ಯುಲೆನ್ಸ್ ಸೇವೆಗೆ ರೂ.26 ಕೋಟಿ ಮೌಲ್ಯದ ಕಾರು: ವಿಶ್ವದ ಅತ್ಯಂತ ವೇಗದ ಆಂಬ್ಯುಲೆನ್ಸ್
ಭಾರತದ ರಸ್ತೆಗಳಲ್ಲಿ ಸೂಪರ್ ಕಾರುಗಳನ್ನು ಕಾಣುವುದು ಅಪರೂಪದ ದೃಶ್ಯವಾಗಿದೆ. ಆದರೆ ದುಬೈನಂತಹ ಶ್ರೀಮಂತ ರಾಷ್ಟ್ರದ ನಗರಗಳಲ್ಲಿ ಸೂಪರ್ ಕಾರುಗಳು ಸಾಮಾನ್ಯ ದೃಶ್ಯವಾಗಿದೆ. ಇಂತಹ ಶ್ರೀಮಂತ ರಾಷ್ಟ್ರದ ಪೊಲೀಸರ ಬಳಿ ವಿಶ್ವದಲ್ಲಿರುವ ಬಹುತೇಕ ಎಲ್ಲಾ ದುಬಾರಿ ಕಾರುಗಳಿವೆ.

ಜಗತ್ತಿನ ಬೇರೆಲ್ಲೂ ಸಿಗದ ದುಬಾರಿ ಕಾರುಗಳು ದುಬೈನಲ್ಲಿ ನಮಗೆ ಸುಲಭವಾಗಿ ಕಾಣಸಿಗುತ್ತದೆ. ಪೊಲೀಸ್ ಇಲಾಖೆ ಸೇರಿದಂತೆ ದುಬೈನ ಹಲವು ಪ್ರಮುಖ ಇಲಾಖೆಗಳು ಐಷಾರಾಮಿ ಸೂಪರ್ ಕಾರುಗಳನ್ನು ಬಳುಸುತ್ತದೆ. ಅಷ್ತೇ ಅಲ್ಲದೇ ಆಂಬ್ಯುಲೆನ್ಸ್ ತುರ್ತು ಸೇವೆಗೂ ಸೂಪರ್ ಕಾರುಗಳನ್ನು ಬಳುಸುತ್ತಿದೆ, ದುಬೈ ಕಾರ್ಪೊರೇಷನ್ ಆಫ್ ಆಂಬ್ಯುಲೆನ್ಸ್ ಸರ್ವಿಸಸ್ (DCAS) ಇತ್ತೀಚೆಗೆ ದುಬೈ ಎಕ್ಸ್‌ಪೋದಲ್ಲಿ ವಿಶ್ವದ ಅತ್ಯಂತ ವೇಗದ ಮತ್ತು ಅತ್ಯಂತ ದುಬಾರಿ ಆಂಬ್ಯುಲೆನ್ಸ್ ಅನ್ನು ಅನಾವರಣಗೊಳಿಸಿದೆ. "ಹೈಪರ್‌ಸ್ಪೋರ್ಟ್ ರೆಸ್ಪಾಂಡರ್" ಎಂಬ ಹೆಸರಿನ ಈ ಆಂಬ್ಯುಲೆನ್ಸ್ ವಾಸ್ತವವಾಗಿ ಲೈಕಾನ್ ಹೈಪರ್‌ಸ್ಪೋರ್ಟ್ ಆಗಿದೆ.

ದುಬೈನಲ್ಲಿ ಡಬ್ಲ್ಯೂ ಮೋಟಾರ್ಸ್ ಅಭಿವೃದ್ಧಿಪಡಿಸಿದ, ಲೈಕಾನ್ ಹೈಪರ್‌ಸ್ಪೋರ್ಟ್ ಅತಿ-ಅಪರೂಪದ ಹೈಪರ್ ಕಾರ್ ಆಗಿದ್ದು, ಇದು ಫಾಸ್ಟ್ ಮತ್ತು ಫ್ಯೂರಿಯಸ್ ಫ್ರ್ಯಾಂಚೈಸ್‌ನಿಂದ ಪ್ರಸಿದ್ಧವಾಗಿದೆ. ಪ್ರಪಂಚದಲ್ಲಿ ಒಟ್ಟು ಏಳು ಲೈಕಾನ್ ಹೈಪರ್‌ಸ್ಪೋರ್ಟ್ ಯುನಿಟ್ ಗಳಿವೆ.

ಒಂದಕ್ಕೆ ಸುಮಾರು ರೂ,26 ಕೋಟಿ ವೆಚ್ಚವಾಗುತ್ತದೆ. ಈ ಕಾರು ಕೇವಲ 2.8 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿಲೋಮೀಟರ್‌ಗಳ ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗಂಟೆಗೆ 400 ಕಿಲೋಮೀಟರ್‌ಗಳ ಟಾಪ್ ಸ್ಪೀಡ್ ಅನ್ನು ಹೊಂದಿದೆ

ಲೈಕಾನ್ ಹೈಪರ್‌ಸ್ಪೋರ್ಟ್ ಕಾರು ಮುಂಭಾಗದ ಎಲ್ಇಡಿ ಉದ್ದಕ್ಕೂ ಹೋಗುವ 440 ಡೈಮೆಂಡ್ ಸೆಟ್ನೊಂದಿಗೆ ಒಳಗೊಂಡಿರುವಂತೆ ತೋರುತ್ತದೆ ಮತ್ತು ಒಳಭಾಗದಲ್ಲಿ ಚಿನ್ನದ ಲೇಪಿತ ರೂಫ್ ನೊಂದಿಗೆ ಚಿನ್ನದ ಹೊಲಿದ ಲೆದರ್ ಅಂಶಗಳನ್ನು ಹೊಂದಿವೆ.

ಈ ಕಾರು ಪ್ರಪಂಚದ ಮೊದಲ 3D ಹೊಲೊಗ್ರಾಮ್ ಹೊಲೊಗ್ರಾಫಿಕ್ ಮಿಡ್-ಏರ್ ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದನ್ನು ಚಲನೆಯ ಸನ್ನೆಗಳನ್ನು ಬಳಸಿ ನಿಯಂತ್ರಿಸಲಾಗುತ್ತದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ ಕಾರನ್ನು ಅದರ ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ

ಈ ಲೈಕಾನ್ ಹೈಪರ್‌ಸ್ಪೋರ್ಟ್ ಕಾರಿನಲ್ಲಿ ಟ್ವಿನ್ ಟರ್ಬೋಚಾರ್ಜ್ಡ್ 3756 ಸಿಸಿ ಇನ್‌ಲೈನ್ ಸಿಕ್ಸ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 780 ಬಿಹೆಚ್‍ಪಿ ಪವರ್ ಮತ್ತು 960 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ನವೀನ ತಂತ್ರಜ್ಞಾನ ಮತ್ತು ವಿನ್ಯಾಸದ ವಿಷಯದಲ್ಲಿ ದುಬೈ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂದು ಮತ್ತೊಮ್ಮೆ ಇದನ್ನು ಸಾಬೀತು ಪಡಿಸಿದೆ. ಹೈಪರ್‌ಸ್ಪೋರ್ಟ್ ರೆಸ್ಪಾಂಡರ್‌ನ ಗುರಿಯು ತ್ವರಿತ ಗತಿಯ ಸೇವೆ ನೀಡುವ ಮೂಲಕ ತುರ್ತು ಸಮಯದಲ್ಲಿ ಸ್ಥಳಕ್ಕೆ ತಲುಪುವುದು.

ಜನಸಾಮಾನ್ಯರ ಜೀವ ರಕ್ಷಣೆಗಾಗಿ ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆಯು ಕೂಡ ಒಂದಾಗಿದೆ. ಆಧುನಿಕ ಕಾಲದ ಆರೋಗ್ಯ ಸೇವೆಯ ಬೇಡಿಕೆಗಳಿಗೆ ಅನುಗುಣವಾಗಿ ಆಂಬ್ಯುಲೆನ್ಸ್ ಸೇವೆಯನ್ನು ಉನ್ನತೀಕರಿಸುವ ಅಗತ್ಯತೆ ಕಂಡುಬಂದಿದೆ. ಹೀಗಾಗಿ, ಹೊಸ ಮಾದರಿಯ ಆಂಬ್ಯುಲೆನ್ಸ್ ಸೇವೆ ನೀಡಲು ದುಬೈ ದುಬೈ ಕಾರ್ಪೊರೇಷನ್ ನಿರ್ಧರಿಸಿದೆ. ರೋಗಿಯ ಜೀವ ಉಳಿಸಲು ಗೋಲ್ಡನ್ ಅವರ್ ತುಂಬಾ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡಿದರೆ ಆತನ/ಆಕೆಯ ಜೀವ ಉಳಿಯುತ್ತದೆ. ಇಂತಹ ಸೇವೆಯನ್ನು ಸಕಾಲಕ್ಕೆ ನೀಡಲು ದುಬೈ ಕಾರ್ಪೊರೇಷನ್ ಬದ್ಧವಾಗಿದ್ದು, ಅದಕ್ಕಾಗಿಯೇ ಅಂಬುಲೆನ್ಸ್ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಸರ್ಕಾರ ಮುನ್ನುಡಿ ಬರೆದಿದ್ದಾರೆ.

ಇನ್ನು ವಿಶ್ವದ ಇತರ ಯಾವುದೇ ಪೊಲೀಸರಿಗೆ ಹೊಲೀಸಿದರೆ ದುಬೈ ಪೊಲೀಸರು ಭಿನ್ನ. ಕಾರಣ ದುಬೈ ಪೊಲೀಸರು ಅತ್ಯುಂತ ದುಬಾರಿ ಕಾರುಗಳನ್ನೇ ಬಳಸುತ್ತಾರೆ. ದುಬೈ ಪೊಲೀಸರ ಬಳಿ ವಿಶ್ವದಲ್ಲಿರುವ ಬಹುತೇಕ ಎಲ್ಲಾ ದುಬಾರಿ ಕಾರುಗಳಿವೆ. ಹೀಗಾಗಿಯೇ ದುಬೈ ಪೊಲೀಸರು ಇತರ ಪೊಲೀಸರಿಗಿಂತ ಭಿನ್ನವಾಗಿದ್ದಾರೆ. ದುಬೈ ಪೊಲೀಸರ ಬಳಿ ರೂ.4 ಕೋಟಿ ಮೌಲ್ಯದ ಬೆಂಟ್ಲಿ ಬೆಂಟೆಯಾಗ ಕಾರಿನಿಂದ ಬಿಎಂಡಬ್ಲ್ಯು, ಮರ್ಸಡೀಸ್ ಬೆಂಝ್, ಆಡಿ, ಪೋರ್ಷೆ, ಮೆಕ್ಲೆರೆನ್ ಸೇರಿದಂತೆ ಎಲ್ಲಾ ದುಬಾರಿ ಕಾರುಗಳಿವೆ.

ಅತ್ಯಾಧುನಿಕ ತಂತ್ರಜ್ಞಾನ, ದುಬಾರಿ ಬೈಕ್, ಕಾರುಗಳನ್ನ ಬಳಸುವುದರಲ್ಲಿ ದುಬೈ ಪೊಲೀಸರು ಎತ್ತಿದ ಕೈ. ವಿಶ್ವದಲ್ಲೇ ಮೊದಲ ಬಾರಿಗೆ ಹೂವರ್ ಹಾರುವ ಬೈಕ್ ಬಳಸಿದ ಕೀರ್ತಿಗೆ ಇದೇ ದುಬೈ ಪೋಲೀಸರು ಪಾತ್ರರಾಗಿದ್ದಾರೆ. ವಿಶ್ವದಲ್ಲೇ ವೇಗದ ಕಾರನ್ನು ಹೊಂದುವ ಮೂಲಕ ದುಬೈ ಪೊಲೀಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಕೂಡ ಸೇರ್ಪಡೆಯಾಗಿದ್ದಾರೆ. ದುಬೈನಲ್ಲಿರುವ ಎಲ್ಲಾ ಪೊಲೀಸ್ ಸ್ಟೇಷನ್‌ಗಳಲ್ಲಿ ದುಬಾರಿ ಕಾರುಗಳಿವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಾರೆ. ಇದರ ಜೊತೆ ಹೂವರ್ ಬೈಕ್ ಅನ್ನು ಕೂಡ ದುಬೈ ಪೊಲೀಸರು ಬಳಸುತ್ತಿದ್ದಾರೆ.

ಇನ್ನು ಕಳೆದ ವರ್ಷ ಜೆನೆಸಿಸ್ ಜಿವಿ80 ಕಾರು ದುಬೈ ಪೊಲೀಸ್ ಪಡೆಗೆ ಸೇರ್ಪಡೆಗೊಂಡಿತ್ತು. ದುಬೈ ಪೊಲೀಸರ ಕಾರ್ಯಾಚರಣೆಯನ್ನು ಸುಲಭಗೊಳಿಸಲು ಮತ್ತು ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸಲು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡ ಹೈಟೆಕ್ ಜೆನೆಸಿಸ್ ಜಿವಿ80 ಕಾರು ಸೇರ್ಪಡೆಗೊಳಿಸಿದ್ದಾರೆ.