ಪೊಲೀಸರಿಗೆ ಗಸ್ತು ತಿರುಗಲು 501 km ರೇಂಜಿನ ಐಷಾರಾಮಿ Audi ಎಲೆಕ್ಟ್ರಿಕ್ ಕಾರು: ಪರಿಸರವು ಮುಖ್ಯವಂತೆ!

ದುಬೈ ಅಂದ್ರೆ ಎಲ್ಲರಿಗೂ ತಕ್ಷಣ ನೆನಪಾಗುವುದು ಅಲ್ಲಿನ ಐಷಾರಾಮಿ ಜೀವನ ಶೈಲಿ. ಅದಕ್ಕೆ ಹೊಂದಿಕೆಯಾಗುವ ಮನೆಗಳು, ದುಬಾರಿ ಬೆಲೆಯ ಕಾರುಗಳು. ಸದ್ಯ, ಅಲ್ಲಿನ ಸರ್ಕಾರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಪೊಲೀಸರಿಗೆ ಗಸ್ತು ತಿರುಗಲು ಭಾರೀ ಬೆಲೆಯ ಆಡಿ ಎಲೆಕ್ಟ್ರಿಕ್ ಕಾರನ್ನು ನೀಡಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಸೂಪರ್‌ ಕಾರ್‌ ಹಾಗೂ ಎಸ್‌ಯುವಿ ಸಂಗ್ರಹಕ್ಕೆ ದುಬೈ ಪೋಲಿಸ್ ಇಲಾಖೆ ವಿಶ್ವಾದ್ಯಂತ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಇದೀಗ, ಗಸ್ತು ವಾಹನವಾಗಿ 'ಆಡಿ RS e-tron GT' ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಸೇರ್ಪಡೆಯಾಗಿದೆ. ಇತ್ತೀಚೆಗೆ ದುಬೈನಲ್ಲಿ ಆಯೋಜಿಸಿದ್ದ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ ಕಾನ್ಫರೆನ್ಸ್‌ನಲ್ಲಿ ವೈಟ್ ಹಾಗೂ ಗ್ರೀನ್ ಕಲರ್ ಸಮಿಶ್ರಣದ ಈ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶನ ಮಾಡಲಾಯಿತು. ಇದನ್ನು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಗಸ್ತು ತಿರುಗಲು ಬಳಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಪೊಲೀಸರಿಗೆ ಗಸ್ತು ತಿರುಗಲು 501 km ರೇಂಜಿನ ಐಷಾರಾಮಿ Audi ಎಲೆಕ್ಟ್ರಿಕ್ ಕಾರು: ಪರಿಸರವು ಮುಖ್ಯವಂತೆ!

ಆಡಿ RS e-tron GT ದುಬೈ ಪೊಲೀಸರು ಗಸ್ತು ತಿರುಗಲು ಉಪಯೋಗ ಮಾಡುತ್ತಿರುವ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಾಗಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ 2023 ಯುಎನ್ ಕ್ಲೇಮೇಟ್ ಚೇಂಜ್ ಕಾನ್ಫರೆನ್ಸ್‌ನ್ನು ಪ್ರತಿನಿಧಿಸುವ '28' (COP 28) ನಂಬರ್ ಪ್ಲೇಟ್‌ನ್ನು ಈ ಕಾರು ಹೊಂದಿದೆ. ಈ ಮೂಲಕ ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಶೂನ್ಯ ಹೊರಸೂಸುವಿಕೆಯ ವಾಹನಗಳತ್ತ ತಾನು ಕೂಡ ಮುಖ ಮಾಡಿರುವುದಾಗಿ ಹೇಳಲು ಅಲ್ಲಿನ ಪೊಲೀಸ್ ಇಲಾಖೆ ಮುಂದಾಗಿದೆ.

ಸದ್ಯ, ದುಬೈ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿರುವ ಆಡಿ RS e-tron GT ಕಾರಿನ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಇದು 84 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರಲ್ಲಿ ಅಳವಡಿಕೆ ಮಾಡಿರುವ ಮೋಟಾರ್, 637 bhp ಗರಿಷ್ಠ ಪವರ್ ಹಾಗೂ 830 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.

ಇದು ಸ್ಪೋರ್ಟ್ ಕಾರ್ ಆಗಿರುವುದರಿಂದ ಸಂಪೂರ್ಣ ಚಾರ್ಜಿನಲ್ಲಿ 501 km ರೇಂಜ್ ನೀಡುವ ಸಾಮರ್ಥ್ಯವಿದ್ದು, ಗರಿಷ್ಠ 250 kmph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 3.3 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯಲಿದೆ. ಈ ಕಾರಿನ ಬೆಲೆ ಎಷ್ಟಿರಬಹುದು ಬಹುತೇಕರಿಗೆ ಗೊಂದಲವಿರಬಹುದು. ಅದನ್ನು ತಿಳಿಸಿಕೊಡುತ್ತೇವೆ. ಇದು ಸುಮಾರು ರೂ.1.94 ಕೋಟಿ ಬೆಲೆಯನ್ನು ಹೊಂದಿದೆ.

ಆಡಿ RS e-tron GT, ದುಬೈ ಪೊಲೀಸರು ಗಸ್ತು ತಿರುಗಲು ಬಳಕೆ ಮಾಡಿಟ್ಟಿರುವ ಮೊದಲ ಎಲೆಕ್ಟ್ರಿಕ್ ಕಾರೇನು ಅಲ್ಲ. ಇದಕ್ಕೂ ಮೊದಲು ಅಂದ್ರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚೀನಾ ಕಂಪನಿ ಒಡೆತನದ Hongqi E-HS9 ಎಲೆಕ್ಟ್ರಿಕ್ ಎಸ್‌ಯುವಿಯನ್ನು ತನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿಕೊಂಡಿತ್ತು. ಇದು ಸುಮಾರು ರೂ.85 ಲಕ್ಷ ಬೆಲೆಯನ್ನು ಹೊಂದಿದ್ದು, 90.0 kWh ಸಾಮರ್ಥ್ಯದ ಬ್ಯಾಟರಿ ಉಪಯೋಗಿಸಲಾಗಿದ್ದು, 355 km ರೇಂಜ್ ನೀಡಲಿದೆ.

ಇನ್ನುಳಿದಂತೆ ದುಬೈ ಪೊಲೀಸರು ಯಾವೆಲ್ಲ ಕಾರುಗಳನ್ನು ಹೊಂದಿದ್ದರೆ ಎಂದು ನೋಡುವುದಾದರೆ, ದುಬಾರಿ, ಐಷಾರಾಮಿ ಆಡಿ R8, ಲಂಬೋರ್ಘಿನಿ ಉರುಸ್, ಆಸ್ಟನ್ ಮಾರ್ಟಿನ್ ವಾಂಟೇಜ್, ಬುಗಾಟಿ ವೆಯ್ರಾನ್, ಮರ್ಸಿಡಿಸ್-ಬೆನ್ಜ್ SLS AMG, ಬಿಎಂಡಬ್ಲ್ಯೂ i8, ಫೆರಾರಿ FF, McLaren MP4-12C, ಲೆಕ್ಸಸ್ RC F,ನಿಸ್ಸಾನ್ GT-R , ಮರ್ಸಿಡಿಸ್-AMG G63 ಕಾರುಗಳಿವೆ. 2030ರ ವೇಳೆಗೆ 25% ಹೈಬ್ರಿಡ್ ಅಥವಾ ಎಲೆಕ್ಟ್ರಿಕ್‌ ಕಾರುಗಳನ್ನು ಹೊಂದುವ ಗುರಿಯನ್ನು ಅಲ್ಲಿನ ಪೊಲೀಸ್ ಇಲಾಖೆ ಹಾಕಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, May 3, 2023, 13:09 [IST]
English summary
Dubai police adds audi rs e tron gt electric sports car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+