ಭವಿಷ್ಯದ ದಿಟ್ಟ ನೋಟ ಹಾಯಿಸಿದ ವಿಶ್ವ ಸೌರಶಕ್ತಿ ಚಾಲೆಂಜ್
ಆಸ್ಟ್ರೇಲಿಯಾದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜನೆಯಾಗುತ್ತಿರುವ ಪ್ರತಿಷ್ಠಿತ ವಿಶ್ವ ಸೌರಶಕ್ತಿ ಸವಾಲನ್ನು ಗೆಲ್ಲುವಲ್ಲಿ ಹಾಲೆಂಡ್‌ನ ಡೆಲ್ಫ್ಟ್ ವಿಶ್ವವಿದ್ಯಾಲಯದ (Delft University) ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
Also Read: ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ ಭಾರತಕ್ಕೆ
3,000 ಕೀ.ಮೀ. ದೂರದ ಈ ಸೋಲರ್ ಸವಾಲನ್ನು ನಾಲ್ಕು ದಿನಗಳಲ್ಲಿ ತಲುಪಿರುವ ಡೆಲ್ಫ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನವಾಗಿದ್ದಾರೆ.

ವಿಶ್ವದ್ಯಾಂತ 50ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕೊನೆಯ ಬಾರಿ 2013ರಲ್ಲಿ ಸೌರಶಕ್ತಿ ಸ್ಪರ್ಧೆಯು 2013ರಲ್ಲಿ ಆಯೋಜನೆಯಾಗಿತ್ತು.

ಹಾಲೆಂಡ್‌ನ ಯುನಿವರ್ಸಿಟಿ ಆಫ್ ಟ್ವೆಂಟೆ ಹಾಗೂ ಜಪಾನ್‌ನ ಟೊಕಾಯ್ ಯುನಿವರ್ಸಿಟಿಗಳು ಪ್ರಶಸ್ತಿಗೆ ಭಾಜನವಾಗಿದ್ದವು.

ಸೌರಶಕ್ತಿ ನಿಯಂತ್ರಿತ ಕಾರುಗಳ ಅಭಿವೃದ್ಧಿ ಹಾಗೂ ಅಧ್ಯಯನಕ್ಕೆ ಉತ್ತೇಜನ ನೀಡುವ ಮೂಲಕ ಪರಿಸರ ಸ್ನೇಹಿ ಭವಿಷ್ಯದ ವಾಹನಗಳ ವಿನ್ಯಾಸ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವುದು ಸ್ಪರ್ಧೆಯ ಹಿಂದಿರುವ ಪ್ರಮುಖ ಗುರಿಯಾಗಿದೆ.

ಇಲ್ಲಿ ಮೂರು ವಿಭಾಗಗಳಲ್ಲಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅವುಗಳೆಂದರೆ, ಚಾಲೆಂಜರ್ ಕ್ಲಾಸ್, ಕ್ರೂಸರ್ ಕ್ಲಾಸ್ ಮತ್ತು ಅಡ್ವೆಂಚರ್ ಕ್ಲಾಸ್. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಆಸ್ಟ್ರೇಲಿಯಾದ ಡಾರ್ವಿನ್‌ನಿಂದ ಆಡಿಲೇಡ್ ವರೆಗೆ ಸಂಚರಿಸಬೇಕಾಗುತ್ತದೆ.

ಚಾಲೆಂಜರ್ ವಿಭಾಗದ ಸೌರಶಕ್ತಿ ವಾಹನಗಳು ಬಹಳ ಚಿಕ್ಕದಾಗಿದ್ದು, ಚಾಲಕ ಮಾತ್ರ ಇದರಲ್ಲಿರುತ್ತಾರೆ. ಇಲ್ಲಿ ಸೌರಶಕ್ತಿ ವಾಹನವು ಒಂದೇ ಬ್ಯಾಟರಿ ಚಾರ್ಜಿಂಗ್ ನಲ್ಲಿ ಸ್ಪರ್ಧಿಸಬೇಕಾಗುತ್ತದೆ.

ವಿಶ್ವ ಸೋಲರ್ ಚಾಲೆಂಜ್ ನಲ್ಲಿ ಭಾಗವಹಿಸುವ ಭಾರತದ ಮೊದಲ ಸೌರಶಕ್ತಿ ಕಾರಿನ ಅವಕಾಶವನ್ನು ನಮ್ಮ ಬೆಂಗಳೂರಿನ ಆರ್.ವಿ. ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿದ್ದರು. ಇದಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳು ಸೋಲ್ ಬ್ಲೇಜ್ (Soleblaze) ಎಂಬ ಸೌರಶಕ್ತಿ ಕಾರನ್ನು ತಯಾರಿಸಿದ್ದರು.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ


Click it and Unblock the Notifications








