ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

Written By:

ವಿದ್ಯುತ್ ಕಾರು ತಯಾರಿಕೆಯಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿರುವ ಯುಎಸ್ ಮೂಲದ ಟೆಸ್ಲಾ ಕಂಪನಿ ತನ್ನ ಅತಿ ದೊಡ್ಡ ಸೌರ ಶಕ್ತಿ ಸಂಗ್ರಹ ಕೇಂದ್ರವನ್ನು ಪರಿಚಯಿಸಿದೆ.

ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

ವಿಶ್ವದ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ತಯಾರಿಸಿದ ಶ್ರೇಯಸ್ಸು ಹೊಂದಿರುವ ಟೆಸ್ಲಾ ವಿಶ್ವದ ದೊಡ್ಡ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪನೆ ಮಾಡಿದ್ದು, ಈ ಮೂಲಕ ಪ್ರಪಂಚದ ಪ್ರಪಂಚಕ್ಕೆ ಪರ್ಯಾಯ ಇಂಧನದ ಮಹತ್ವವನ್ನು ತಿಳಿಸಲಿದೆ.

ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

ಈ ಸ್ಥಾವರ ಹೆಚ್ಚು ಕಡಿಮೆ 13-ಮೆಗಾವ್ಯಾಟ್ ಉತ್ಪಾದಿಸುವಷ್ಟು ಶಕ್ತಿ ಹೊಂದಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

ಈ ಸೋಲಾರ್ ವಿದ್ಯುತ್ ಸ್ಥಾವರದಲ್ಲಿ ಸೂರ್ಯನಿಂದ ಬರುವ ಕಿರಣಗಳನ್ನು ಹೀರಿಕೊಳ್ಳಲು ದ್ವೀಪದಲ್ಲಿ 54,978 ಸೋಲಾರ್ ತಟ್ಟೆಗಳನ್ನು ಅಳವಡಿಸಲಾಗಿದೆ.

ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

ವಿದ್ಯುತ್ ಸಂಗ್ರಹಕ್ಕೆ 272 ಪವರ್ ಪ್ಯಾಕುಗಳನ್ನು ಇರಿಸಲಾಗಿದ್ದು, ಈ ಮೂಲಕ 52 ಮೆಗಾವ್ಯಾಟ್ ಗಂಟೆಗಳಷ್ಟು ವಿದ್ಯುತ್ ಸಂಗ್ರಹಿಸುಬಹುದಾಗಿದೆ ಎನ್ನಲಾಗಿದೆ.

ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

ಈ ಬೃಹತ್ ಸೌರ ವಿದ್ಯುತ್ ಸ್ಥಾವರ ಹವಾಯಿ ದ್ವೀಪದಲ್ಲಿ ಸ್ಥಾಪನೆ ಮಾಡಲಾಗಿದ್ದು, ಇಡೀ ದ್ವೀಪವೇ ಇನ್ನು ಮುಂದೆ ಬೆಳಕು ಕಾಣುವುದರಲ್ಲಿ ಅನುಮಾನವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

ಕೆಐಯುಸಿ ಅಧ್ಯಕ್ಷರಾದ ಡೇವಿಡ್ ಹೇಳುವಂತೆ " ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಸ್ಥಾವರ ಇದಾಗಿದ್ದು, ಈ ಸ್ಥಾವರದಿಂದಾಗಿ ಅನ್ಯ ಇಂಧನ ಉಪಯೋಗ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ" ಎಂದಿದ್ದಾರೆ.

ಈ ದ್ವೀಪದಲ್ಲಿ ಇನ್ಮೇಲೆ ಕರೆಂಟ್ ಹೋಗಲ್ವಂತೆ!!

ಕಾವಲಿ ಐಲ್ಯಾಂಡ್ ಯುಟಿಲಿಟಿ ಕೋಆಪರೇಟಿವ್ (ಕೆಐಯುಸಿ)ಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಟೆಸ್ಲಾ ಕಂಪನಿ, ಮುಂದಿನ 20 ವರ್ಷಗಳ ಕಾಲ ದ್ವೀಪಕ್ಕೆ ವಿದ್ಯುತ್ ಒದಗಿಸಲಿದೆ.ಕಳೆದ ಬಾರಿ ಟೆಸ್ಲಾ ಕಂಪನಿ ಅಮೆರಿಕಾದ ದ್ವೀಪದೊಂದಿಗೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿತ್ತು ಎಂಬುದನ್ನು ಮರೆಯುವಂತಿಲ್ಲ.

English summary
American energy storage company Tesla has unveiled its first big solar energy storage project. This project will power the island of Kauai in Hawaii.
Story first published: Saturday, March 11, 2017, 17:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark