ಫ್ರಾನ್ಸ್ ನಲ್ಲಿ ವಿಶ್ವದ ಚೊಚ್ಚಲ ಸೌರ ಫಲಕ ರಸ್ತೆ ಲೋಕಾರ್ಪಣೆ
ವಿಶ್ವದ ಮೊತ್ತ ಮೊದಲ ಸೌರ ಫಲಕ ರಸ್ತೆಯನ್ನು ಫ್ರಾನ್ಸ್ ನಲ್ಲಿ ಲೋಕಾರ್ಪಣೆ ಮಾಡಲಾಗಿದೆ.
ವಿಶ್ವದ ಮೊತ್ತ ಮೊದಲ ಸೌರ ಫಲಕ ರಸ್ತೆಯನ್ನು ಫ್ರಾನ್ಸ್ ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಇದು ವಿಶ್ವ ರಸ್ತೆ ತಂತ್ರಗಾರಿಕೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಾಗಿ ಗುರುತಿಸಲಾಗಿದೆ.

ಫ್ರಾನ್ಸ್‌ನ ನೋರ್ಮಂಡಿಯಲ್ಲಿ ಸ್ಥಿತಗೊಂಡಿರುವ ಒಂದು ಕೀ.ಮೀ. ಉದ್ದದ ರಸ್ತೆಯಲ್ಲಿ (Touruvre-au-Perche) ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳನ್ನು ಲಗತ್ತಿಸಲಾಗಿದೆ.

ಇಲ್ಲಿ ಉತ್ಪಾದನೆಯಾಗುವ ಸೌರ ಶಕ್ತಿಯನ್ನು ಇಲ್ಲಿ ಗ್ರಾಮೀಣ ಪ್ರದೇಶದ ರಸ್ತೆ ಬದಿಯಲ್ಲಿರುವ ಬೆಳಕನ್ನು ಉರಿಸಲು ಸಹಕಾರಿಯಾಗಲಿದೆ.

ಒಟ್ಟಾರೆ 2800 ಚದರ ಅಡಿ ಪ್ರದೇಶದಲ್ಲಿ ಸೋಲರ್ ಪ್ಯಾನೆಲ್ ಲಗತ್ತಿಲಾಗಿದೆ. ಇದರ ಒಟ್ಟು ಖರ್ಚು 4.2 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ಮುಂದಿನ ಎರಡು ವರ್ಷಗಳ ಕಾಲ ಈ ಬೀದಿ ಪ್ರದೇಶವನ್ನು ಪ್ರಯೋಗಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಯೋಜನೆ ಯಶ ಕಂಡಲ್ಲಿ ಇತರ ಪ್ರದೇಶಗಳಿಗೂ ವ್ಯಾಪಿಸಲಾಗುವುದು.

ಈ ಸಂಬಂಧ ಮಹತ್ತರ ಹೆಜ್ಜೆಯನ್ನಿಟ್ಟಿರುವ ಫ್ರಾನ್ಸ್ ಸರಕಾರವು ಮುಂದಿನ ಐದು ವರ್ಷಗಳಲ್ಲಾಗಿ 1000 ಕೀ.ಮೀ.ಗಳಷ್ಟ ಸೋಲರ್ ರಸ್ತೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಇತಿಹಾಸದತ್ತ ಕಣ್ಣಾಯಿಸಿದರೆ 2014ರಲ್ಲಿ ಸೌರ ಶಕ್ತಿ ನಿಯಂತ್ರಿತ ಮೊದಲ ಸೈಕಲ್ ಹಾದಿಯನ್ನು ತೆರೆಯಲಾಗಿತ್ತು.

ಆರಂಭದಲ್ಲಿ ಸಮಸ್ಯೆಗಳು ಎದುರಾದರೂ ಆರು ತಿಂಗಳುಗಳ ಬಳಿಕ 3000 ಕೆಡಬ್ಲ್ಯುಎಚ್ ವಿದ್ಯುತನ್ನು ಉತ್ಪಾದಿಸುವಲ್ಲಿ ಯಶ ಕಂಡಿತ್ತು. ಇದು ಒಂದು ಕುಟುಂಬದ ವಾರ್ಷಿಕ ವಿದ್ಯುತ್ ಬಳಕೆಗೆ ಸಮಾನವಾಗಿತ್ತು.

ಆದರೆ ಇಲ್ಲಿ ಎದುರಾಗಿರುವ ಪ್ರಮುಖ ಸಮಸ್ಯೆಯೆಂದರೆ ನೋರ್ಮಂಡಿಯಲ್ಲಿ ಸಾಮಾನ್ಯವಾಗಿ ಉತ್ತಮ ಬಿಸಿಲು ದೊರಕುವುದು. ವರ್ಷದಲ್ಲಿ 44 ದಿನಗಳಷ್ಟು ಮಾತ್ರ ಪ್ರಬಲ ಬಿಸಿಲು ಲಭ್ಯವಾಗುತ್ತದೆ. ಹಾಗಾಗಿ ಯೋಜನೆ ಎಷ್ಟರ ಮಟ್ಟದಲ್ಲಿ ಯಶ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications








