ಆಗಲೇ ತುಮಕೂರಿನ ಬಳಿ ಕೆಟ್ಟು ನಿಂತ Vande Bharat ಎಕ್ಸ್‌ಪ್ರೆಸ್? ಸತ್ಯಾಂಶ ತಿಳಿಯದೆ ಫುಲ್ ಟ್ರೋಲ್!

ಮೊದಲ ಬಾರಿಗೆ 20661 SBC DWR ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಫಲವಾಗಿದೆ. 100 ಕಿ.ಮೀ ವೇಗದ ಫಿಟ್ WAG-7 ಸಾಮಾನ್ಯ ರೈಲು ಎಂಜಿನ್‌ನಿಂದ ವಂದೇ ಭಾರತ್‌ ರೈಲನ್ನು ರಕ್ಷಿಸಿ ತುಮಕೂರಿನ ಬಳಿ ಎಳೆದೊಯ್ಯಲಾಗಿದೆ ಎಂದು ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಆಗಲೇ ವಂದೇ ಭಾರತ್‌ ಬಗ್ಗೆ ಟ್ರೋಲ್‌ಗಳು ಶುರುವಾಗಿವೆ.

ಈ ಹಿಂದೆಯೂ ಇದೇ ರೀತಿ ವಂದೇ ಭಾರತ್‌ ರೈಲನ್ನು ಸಾಮಾನ್ಯ ರೈಲು ಎಂಜಿನ್ ಎಳೆದೊಯ್ದಾಗ ಭೀಕರವಾಗಿ ಟ್ರೋಲ್ ಮಾಡಲಾಗಿತ್ತು. ಆಗ ರೈಲ್ವೆ ಇದಕ್ಕೆ ಸರಿಯಾಗಿ ಉತ್ತರಿಸಿ ಸಮಾಧಾನ ನೀಡಿತ್ತು. ಈಗ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದ್ದು, ವಂದೇ ಭಾರತ್‌ಗೆ ಹೀಗಾಗಲು ಕಾರಣ ತಿಳಿದುಬಂದಿದೆ.

dwr-vande-bharat-express-fails-heres-real-reason

ವಂದೇ ಭಾರತ್‌ನ ಟ್ರಾಕ್ಷನ್ ಕಂಟ್ರೋಲ್ ನಿರ್ವಹಣಾ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ, ಮೂಲ ನಿಲ್ದಾಣದಿಂದ ಹೊರಡುವ ಮುನ್ನ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ತಪ್ಪಿಸಲು ಸಾಮಾನ್ಯ ರೈಲು ಎಂಜಿನ್ ಸಹಾಯವನ್ನು ಪಡೆಯಲಾಗಿದೆ. ಪ್ರಯಾಣಿಕರಿಗೆ ಕನಿಷ್ಠ ವಿಳಂಬವನ್ನು ತಪ್ಪಿಸಲು ಹತ್ತಿರದಲ್ಲಿದ್ದ ಲೊಕೊವನ್ನು ವ್ಯವಸ್ಥೆ ಮಾಡಿ ರೈಲನ್ನು ಗಮ್ಯ ಸ್ಥಳಕ್ಕೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ರೈಲ್ವೆ ಅಂದುಕೊಂಡಿದ್ದರೇ ದುರಸ್ತಿ ಕಾರ್ಯವನ್ನು ಮಾಡಬಹುದಿತ್ತು. ಆದರೆ ದುರಸ್ತಿಗೆ ಸಮಯ ಹಿಡಿಯುವುದರಿಂದ ಪ್ರಯಾಣಿಕರಿಗೆ ಅನಾನುಕೂಲ ತಪ್ಪಿಸಲು ಹೀಗೆ ಮಾಡಲಾಗಿದೆ. ಆದರೆ ಕೆಲವರು ಟ್ರೋಲ್ ಮಾಡುವಂತೆ ರೈಲು ಕೆಟ್ಟು ನಿಂತಿಲ್ಲ. ಇದೊಂದು ತಾಂತ್ರಿಕ ಸಮಸ್ಯೆ ಅಷ್ಟೇ, ಇದನ್ನು ಸರಿಪಡಿಸಿದರೆ ರೈಲು ಮೊದಲಿನಂತೆ ಓಡುತ್ತದೆ ಎಂದು ಹೇಳಲಾಗಿದೆ.

dwr-vande-bharat-express-fails-heres-real-reason

ಈ ಹಿಂದೆ ಖಡಕ್ ಉತ್ತರ ನೀಡಿದ್ದ ರೈಲ್ವೆ: ಈ ಹಿಂದೆಯೂ Vande Bharat ಎಕ್ಸ್‌ಪ್ರೆಸ್ ರೈಲನ್ನು ಸಾಮಾನ್ಯ ರೈಲು ಎಂಜಿನ್ ಎಳೆದೊಯ್ಯುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ನಿಧಾನವಾಗಿ ಚಲಿಸುವ ರೈಲನ್ನು ವೇಗವಾಗಿ ಚಲಿಸುವ ರೈಲು ಎಳೆದುಕೊಂಡು ಹೋಗುವುದನ್ನು ನೋಡಿ ಯಾರು ನಗುವುದಿಲ್ಲ ಹೇಳಿ? ಎಂದೆಲ್ಲಾ ವ್ಯಂಗ್ಯ ಮಾಡಿ ಸಾಕಷ್ಟು ಮಂದಿ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.

ಕೊನೆಗೂ ರೈಲ್ವೆ ಇಲಾಖೆ, ಸಾಮಾಜಿಕ ಮಾಧ್ಯಮಗಳಲ್ಲಿ ಫುಲ್ ಟ್ರೋಲ್ ಮಾಡಿದವರಿಗೆ ಸ್ಪಷ್ಟನೆ ನೀಡಿತ್ತು. ವಂದೇ ಭಾರತ್ ರೈಲನ್ನು ಸೇವೆಗೆ ತರುವ ಮೊದಲು ಈ ವಿಡಿಯೋವನ್ನು ಮಾಡಲಾಗಿದೆ. ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಆರಂಭದಲ್ಲಿ ಟ್ರ್ಯಾಕ್‌ಗಳಿಗೆ ಸೇರಿಸಿದಾಗ, ಅದರ ಮಾರ್ಗವನ್ನು ನಿರ್ಧರಿಸುವವರೆಗೆ ಅದನ್ನು ಮತ್ತೊಂದು ಎಂಜಿನ್‌ನಿಂದ ಎಳೆಯಲಾಗುತ್ತದೆ. ಗೊತ್ತುಪಡಿಸಿದ ಮಾರ್ಗವನ್ನು ತಿಳಿಯುವವರೆಗೆ ಪ್ರಯೋಗಗಳ ಸಮಯದಲ್ಲಿ ರೈಲನ್ನು ಹೀಗೆ ಕಾರ್ಯಚರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿತ್ತು.

ವಂದೇ ಭಾರತ್‌ನ ಎಂಜಿನ್ ಭಾಗವು ನಮ್ಮ ಸಾಮಾನ್ಯ ರೈಲುಗಳಿಗಿಂತಲೂ ಕಡಿಮೆ ಗೇಜ್ ಹೊಂದಿರುತ್ತದೆ. ಹಾಗೆಯೇ ಕಬ್ಬಿಣದ ಪ್ರಮಾಣವನ್ನು ತಗ್ಗಿಸಿರುವುದರಿಂದ ಗುಣಮಟ್ಟ ಕೂಡ ಕಡಿಮೆ ಇರುತ್ತದೆ. ಇದಕ್ಕೂ ಕಾರಣವಿದೆ ವಂದೇ ಭಾರತ್ ರೈಲು ನಿರ್ದಿಷ್ಟ ವೇಗದಲ್ಲಿ ಪ್ರಯಾಣಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ರೈಲುಗಳಿಗಿಂತ ವೇಗವಾಗಿ ನಿಯಂತ್ರಿಸಲು ಇದು ಅನುಕೂಲಕರವಾಗಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 23, 2023, 13:24 [IST]
English summary
Dwr vande bharat express fails heres real reason
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+