ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ 60 ಕೋಟಿ ರೂಪಾಯಿ ಬೆಲೆಬಾಳುವ ಕಾರುಗಳು ಸೀಜ್: ಕಾರಣವೇನು?

ದೇಶದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಲಯದ ಅಧಿಕಾರಿಗಳು ಆಗಾಗ ದಾಳಿ ನಡೆಸುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಇಂತಹ ರೇಡ್ ವೇಳೆ ದೊಡ್ಡ ದೊಡ್ಡ ಕುಳಗಳಿಂದ ಅಧಿಕಾರಿಗಳು ಭಾರೀ ಮೊತ್ತದ ಹಣ, ಚಿನ್ನಾಭರಣ ಹಾಗೂ ವಾಹನಗಳನ್ನು ಸೀಜ್ ಮಾಡುತ್ತಿರುತ್ತಾರೆ.

ಕಳೆದ ಕೆಲವು ದಿನಗಳ ಹಿಂದೆ, ಅಂದರೆ ಜೂನ್ 1 ರಂದು ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೆಹಲಿ ಮತ್ತು ಗುರುಗ್ರಾಮದ ಏಳು ಸ್ಥಳಗಳಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಾದ M3M ಗ್ರೂಪ್ ಮತ್ತು IREO ಗ್ರೂಪ್ ಮೇಲೆ ರೇಡ್ ನಡೆಸಿತ್ತು.

ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ 60 ಕೋಟಿ ರೂಪಾಯಿ ಬೆಲೆಬಾಳುವ ಕಾರುಗಳು ಸೀಜ್: ಕಾರಣವೇನು?

ದಾಳಿಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ರೋಲ್ಸ್ ರಾಯ್ಸ್, ಲಂಬೋರ್ಘಿನಿ, ಫೆರಾರಿ, ಲ್ಯಾಂಡ್ ರೋವರ್, ಬೆಂಟ್ಲಿ, ಮರ್ಸಿಡಿಸ್ ಮೇಬ್ಯಾಕ್ ಸೇರಿದಂತೆ ಹಲವು ದುಬಾರಿ ಬೆಲೆಯ 17 ಐಷಾರಾಮಿ ಕಾರುಗಳು (ಅಂದಾಜು 60 ಕೋಟಿ ರೂಪಾಯಿ ಬೆಲೆ), ರೂ.5.75 ಕೋಟಿ ಮೌಲ್ಯದ ಚಿನ್ನಾಭರಣ, 15 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು.

ಇವತ್ತಿನ ದಿನಗಳಲ್ಲಿ ಐಷಾರಾಮಿ ಕಾರುಗಳು ಮನಿ ಲಾಂಡರಿಂಗ್‌ ಅಥವಾ ಅಕ್ರಮ ಹಣ ವರ್ಗಾವಣೆಯ ಭಾಗವಾಗಿ ಬಿಟ್ಟಿವೆ. ಸಾಮಾನ್ಯವಾಗಿ ಇದನ್ನು ತೆರಿಗೆ ಬಾಷೆಯಲ್ಲಿ ಸ್ಮರ್ಫಿಂಗ್ ಎಂದು ಕರೆಯಲಾಗುತ್ತದೆ. ಉದಾಹರಣೆ: ದೊಡ್ಡ ಹಣದ ಮೊತ್ತವನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ ವರ್ಗಾವಣೆ ಮಾಡುವುದು. ಈ ರೀತಿ ಮಾಡಿದರೆ ಯಾವುದೇ ತರಹ ಅನುಮಾನ ಬರುವುದಿಲ್ಲ ಎಂದು ವಂಚಕರು ಅಂದುಕೊಂಡಿದ್ದಾರೆ.

ಆದರೆ, ಮೋಸ ಮಾಡಲು ಎಂತಹ ಮಾರ್ಗ ಹುಡುಕಿಕೊಂಡರೂ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಆಗುವುದಿಲ್ಲ. ಈ ದಾಳಿಯನ್ನು ಗಮನಿಸಿದಾಗ ವಂಚಕರು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಕೊಂಡುಕೊಳ್ಳಲು ಸ್ಮರ್ಫಿಂಗ್ ದಾರಿಯನ್ನೇ ಕಂಡುಕೊಂಡಿದ್ದಾರೆ. ಇನ್ನು, M3M ಗ್ರೂಪ್‌ ಕಂಪನಿ 400 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿದೆ.

ಇಂತಹ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇಟ್ಟುಕೊಳ್ಳಲಾಗುತ್ತದೆ. ಒಂದೊಮ್ಮೆ ಆರೋಪಗಳು ಸಾಬೀತು ಆಗಲಿಲ್ಲ ಅಂದರೇ ಈ ವಾಹನಗಳನ್ನು ಅದರ ಮಾಲೀಕರಿಗೆ ಹಿಂದಿರುಗಿಸಲಾಗಿತ್ತದೆ. ಸಾಕ್ಷಿ ಸಮೇತ ಆರೋಪಗಳು ಸಾಬೀತುಗೊಂಡರೆ ಇದನ್ನು ಮಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆದರೆ, ಎಷ್ಟೋ ಪ್ರಕರಣಗಳಲ್ಲಿ ಐಷಾರಾಮಿ ವಾಹನಗಳ ಬಿಡಿ, ಭಾಗಗಳು ಕಳ್ಳತನವಾಗಿರುವ ನಿದರ್ಶನಗಳು ನಮ್ಮ ಮುಂದಿವೆ.

ಎಲ್ಲಿಗೆ ಬಂತು ಈ ಪ್ರಕರಣ: ಸದ್ಯ, ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ಇವೆರೆಡು ಕಂಪನಿಗಳ ಮಾಲೀಕರಾದ ಬಸಂತ್ ಬನ್ಸಾಲ್ ಮತ್ತು ಪಂಕಜ್ ಬನ್ಸಾಲ್ ಅವರಿಗೆ ತಲಾ 10 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ನೊಂದಿಗೆ ಷರತ್ತು ಬದ್ದ ಜಾಮೀನು ನೀಡಿದೆ. ಒಟ್ಟಾರೆ, ದೇಶದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Monday, June 12, 2023, 18:49 [IST]
English summary
Ed seizes rolls royce ferrari and more cars delhi details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+