ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಕರೋನಾ ವೈರಸ್ ವೇಗವಾಗಿ ಹರಡುತ್ತಿದೆ. ಕರೋನಾ ವೈರಸ್‌ನಿಂದಾಗಿ ಭಾರತ ಮಾತ್ರವಲ್ಲದೇ ಪ್ರಪಂಚದ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಕಾರಣಕ್ಕೆ ವಿಶ್ವದ ಅನೇಕ ದೇಶಗಳು ಆರ್ಥಿಕ ಕುಸಿತವನ್ನು ಎದುರಿಸುತ್ತಿವೆ.

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಲಾಕ್‌ಡೌನ್‌ನಿಂದಾಗಿ ಕೂಲಿ ಕಾರ್ಮಿಕರು ಹಾಗೂ ಬಡವರ ಮೇಲೆ ಹೆಚ್ಚು ಪರಿಣಾಮ ಉಂಟಾಗಿದೆ. ಅಗತ್ಯ ವಸ್ತುಗಳಿಲ್ಲದೇ ಪರದಾಡುವಂತಾಗಿದೆ. ಸರ್ಕಾರವು ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರೂ ಸಹ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಸರ್ಕಾರವು ನೆರವನ್ನು ಪಡಿತರ ಚೀಟಿಗಳೊಂದಿಗೆ ನೀಡುತ್ತಿದೆ. ಆದರೆ ಅನೇಕ ಜನರ ಬಳಿ ಪಡಿತರ ಚೀಟಿಗಳಿಲ್ಲ. ಇದರಿಂದಾಗಿ ಅನೇಕರಿಗೆ ಸರ್ಕಾರದ ನೆರವು ಪಡೆಯಲು ಸಾಧ್ಯವಾಗಿಲ್ಲ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಈ ಸಂದರ್ಭದಲ್ಲಿ, ಕೆಲ ಖಾಸಗಿ ಸಂಸ್ಥೆಗಳು ಹಾಗೂ ದತ್ತಿ ಸಂಸ್ಥೆಗಳು ನೆರವಿನ ನಿರೀಕ್ಷೆಯಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿವೆ. ಹೀಗೆ ನೆರವನ್ನು ನೀಡುತ್ತಿರುವರಲ್ಲಿ ಆಟೋ ಮೊಬೈಲ್ ಕಂಪನಿಗಳು ಸಹ ಸೇರಿವೆ.

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಈಗ ಸುರಕ್ಷ ಕಾರ್ಯಕ್ರಮದಡಿಯಲ್ಲಿ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ ಕಂಪನಿಗಳು ಮಕ್ಕಳು, ಮಹಿಳೆಯರು ಸೇರಿದಂತೆ ಬಡ ಜನರಿಗೆ ನೆರವಾಗಲು ಮುಂದಾಗಿವೆ. ಈ ಕಾರಣಕ್ಕೆ ಎರಡೂ ಕಂಪನಿಗಳು ಭಾರತ ಸರ್ಕಾರದೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಅದರಲ್ಲೂ ಬಡ ಮಹಿಳೆಯರು ಹಾಗೂ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಒದಗಿಸುವುದಾಗಿ ತಿಳಿಸಿವೆ. ಐಷರ್ ಗ್ರೂಪ್ ಕೆಲವು ಪಡಿತರ ಮತ್ತು ಸುರಕ್ಷತಾ ಸಾಧನಗಳನ್ನು ಒದಗಿಸಲು ನಿರ್ಧರಿಸಿದೆ. ಇದಲ್ಲದೆ, ಸ್ವಚ್ವಗೊಳಿಸುವ ಕಾರ್ಮಿಕರಿಗೆ ಶುಚಿಗೊಳಿಸುವ ಉಪಕರಣಗಳನ್ನು ಒದಗಿಸಲಾಗುವುದು ಎಂದು ಹೇಳಿದೆ.

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಇದರ ಜೊತೆಗೆ ಗರ್ಭಿಣಿಯರು, ಸಣ್ಣ ಅಂಗಡಿಯವರು, ಪ್ರತ್ಯೇಕವಾಗಿರುವ ಮಹಿಳೆಯರು / ಮಕ್ಕಳು ಹಾಗೂ ವೃದ್ಧರಿಗೆ ಸಹಾಯ ಮಾಡುವುದಾಗಿ ಐಷರ್ ಗ್ರೂಪ್ ಘೋಷಿಸಿದೆ. ಪುಣೆ ಹಾಗೂ ಭುವನೇಶ್ವರದಲ್ಲಿರುವ ವಲಸೆ ಕಾರ್ಮಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಈ ಎಲ್ಲಾ ರೀತಿಯ ನೆರವನ್ನು ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ ಜಂಟಿಯಾಗಿ ಒದಗಿಸಲಿವೆ. ಈ ಎಲ್ಲಾ ನೆರವನ್ನು ತೀರಾ ಹಿಂದುಳಿದವರಿಗೆ ನೀಡಲಾಗುವುದೆಂದು ಈ ಕಂಪನಿಗಳು ತಿಳಿಸಿವೆ.

ಲಾಕ್‌ಡೌನ್ ಎಫೆಕ್ಟ್: ಅಸಹಾಯಕರ ನೆರವಿಗೆ ಮುಂದಾದ ಐಷರ್ ಗ್ರೂಪ್ ಹಾಗೂ ಮೆಸ್ಟೋ ಇಂಡಿಯಾ

ಈ ಬಗ್ಗೆ ಮಾತನಾಡಿರುವ ಐಷರ್ ಗ್ರೂಪ್ ಫೌಂಡೇಶನ್‌ನ ನಿರ್ದೇಶಕರಾದ ಜಿ ಐಸ್ನರ್‌ರವರು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರ ಹಾಗೂ ವಿವಿಧ ಎನ್‌ಜಿಒಗಳನ್ನು ಜೊತೆಗೆ ನಾವು ಕೈಜೋಡಿಸಲಿದ್ದೇವೆ ಎಂದು ಹೇಳಿದರು.

Most Read Articles

Kannada
English summary
Eicher Group Mesto India partners to help under project Suraksha. Read in Kannada.
Story first published: Tuesday, April 28, 2020, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X