ಜೀವನಪರ್ಯಾಂತ ಕಷ್ಟದಲ್ಲಿ ದುಡಿದು ನಿವೃತ್ತಿಯ ಬಳಿಕ ಕೊನೆಯಾಸೆ ಈಡೇರಿಸಿ ಕಣ್ಣೀರಿಟ್ಟ ವೃದ್ಧ

ವಯೋವೃದ್ಧರೊಬ್ಬರು ತಮ್ಮ ನಿವೃತ್ತಿಯ ನಂತರ ಹೊಸ ಲ್ಯಾಂಬೋರ್ಗಿನಿ ಕಾರು ಖರೀದಿಸಿ ಸಂಭ್ರಮಿಸುತ್ತಿರುವ ವಿಡಿಯೋವೊಂದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ವೃದ್ಧರೊಬ್ಬರು ತನ್ನ ಹೊಚ್ಚ ಹೊಸ ಬೂದು ಬಣ್ಣದ ಲ್ಯಾಂಬೋರ್ಗಿನಿ ಸೂಪರ್ ಕಾರು ಬಂ ನೋಡುತ್ತಿದ್ದಂತೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿದ್ದಾರೆ

ವಯೋವೃದ್ಧರೊಬ್ಬರು ತಮ್ಮ ನಿವೃತ್ತಿಯ ನಂತರ ಕಾರನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ವೀಡಿಯೊದಲ್ಲಿ ಖುಷಿಯಿಂದ ಸಂಭ್ರಮಾಚರಣೆಯನ್ನು ನೋಡಬಹುದು. ಆದರೆ ವೃದ್ಧ ಲ್ಯಾಂಬೋರ್ಗಿನಿ ಸೂಪರ್ ಕಾರಿನಿಂದ ಹೊರಬರಲು ಹೆಣಗಾಡುತ್ತಿದ್ದಾರೆ. ಕಷ್ಟ ಪಟ್ಟು ಕಾರಿನಿಂದ ಹೊರಬಂದು ಅವರ ಮುಖದಲ್ಲಿದ್ದ ಸಂತೋಷವನ್ನು ನೋಡಬಹುದು. ಆವರು ಸಂತೋಷದಿಂದ ನೆಲಕ್ಕೆ ಹೊಡೆಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು.

Lamborghini

ಈ ವೃದ್ಧ ಖರೀದಿಸಿದ ಕಾರು ಲ್ಯಾಂಬೋರ್ಗಿನಿ ಅವೆಂಟಡಾರ್ SVJ ಆಗಿದೆ. ಈ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.25 ಕೋಟಿಯಾಗಿದೆ. ಈ ವೃದ್ಧ ಸೆಕೆಂಡ್ ಹ್ಯಾಂಡ್ ಲ್ಯಾಂಬೋರ್ಗಿನಿ ಅವೆಂಟಡಾರ್ SVJ ಕಾರು ಖರೀದಿಸಿರಬಹುದು. ವಿಡೀಯೋ ನೋಡಿದರೆ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂ ರೀತಿಯಲ್ಲಿ ಕಾಣುತ್ತದೆ. ಈ ಲ್ಯಾಂಬೋರ್ಗಿನಿ ಅವೆಂಟಡಾರ್ SVJ ಕಾರಿನಲ್ಲಿ 6.5 ಲೀಟರ್ 12 ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ.

ಈ ಎಂಜಿನ್ ಅನ್ನು 8,500 rpm ನಲ್ಲಿ 760 bhp ಮತ್ತು 6,750 rpm ನಲ್ಲಿ 720 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಲ್ಯಾಂಬೋರ್ಗಿನಿ ಅವೆಂಟಡಾರ್ SVJARAI ಪ್ರತಿ ಲೀಟರ್‌ಗೆ ಕೇವಲ 7.69 ಕಿ.ಮೀ ಮೈಲೇಜ್ ನೀಡುತ್ತದೆ.

Lamborghini

ಈಆದರೆ ನಗರ ಪ್ರದೇಶಗಳಲ್ಲಿ ಚಾಲನೆ ಮಾಡುವಾಗ ಈ ಕಾರು ಪ್ರತಿ ಲೀಟರ್ ಗೆ ಕೇವಲ 3 ಕಿ.ಮೀ ಮೈಲೇಜ್ ನೀಡಲಿದೆ ಎನ್ನಲಾಗಿದೆ. ಆದರೆ ಮೈಲೇಜ್‌ಗಾಗಿ ಯಾರೂ ಲ್ಯಾಂಬೋರ್ಗಿನಿ ಅವೆಂಟಡಾರ್ SVJ ಅನ್ನು ಖರೀದಿಸುವುದಿಲ್ಲ. ಅದರ ಅದ್ಭುತ ಕಾರ್ಯಕ್ಷಮತೆಯನ್ನು ಆನಂದಿಸಲು ಅವರು ಅದನ್ನು ಖರೀದಿಸುತ್ತಾರೆ. ಇದು 2-ಸೀಟರ್ ಮಾತ್ರ ಇರುವ ಕಾರು. ಭಾರತದಲ್ಲಿ ಕೆಲವು ಮಿಲಿಯನೇರ್‌ಗಳುಲ್ಯಾಂಬೋರ್ಗಿನಿ ಅವೆಂಟಡಾರ್ SVJ ಕಾರನ್ನು ಹೊಂದಿದ್ದಾರೆ.

ಇನ್ನು ಭಾರತೀಯರ ಫೇವರೀಟ್‌ ಲಕ್ಷುರಿ ಕಾರುಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಲ್ಯಾಂಬೋರ್ಗಿನಿ. ವಿನ್ಯಾಸ, ಪವರ್‌ ಮತ್ತು ಪರ್ಫಾಮೆನ್ಸ್‌ ಭಾರತೀಯರು ಈ ಕಾರನ್ನು ಹೆಚ್ಚು ಇಷ್ಟ ಪಡಲು ಕಾರಣ. ಲ್ಯಾಂಬೋರ್ಗಿನಿಯ ಹಲವಾರು ಮಾಡೆಲ್‌ಗಳು ಭಾರತೀಯರಿಗೆ ಅಚ್ಚು ಮೆಚ್ಚು. ಅದರಲ್ಲಿ ಲ್ಯಾಂಬೋರ್ಗಿನಿ ಉರಸ್‌ ಮತ್ತು ಲ್ಯಾಂಬೋರ್ಗಿನಿ ಅವೆಂಟಡಾರ್‌ ಹೆಚ್ಚು ಪ್ರಸಿದ್ದಿ. ಈ ಸೂಪರ್‌ ಕಾರ್‌ ತಯಾರಿಕಾ ಕಂಪನಿಯು ತನ್ನ ಹೊಸ ಲ್ಯಾಂಬೋರ್ಗಿನಿ ಕಾರಿನ ಬಗ್ಗೆ ಅಪ್‌ಡೇಟ್‌ ಕೊಟ್ಟಿದೆ.

ಅದೇನು ಎಂದು ಗೊತ್ತಾದರೆ ನಿಮಗೆ ಆಶ್ಚರ್ಯವಾಗುವುದಂತೂ ಖಂಡಿತ. ಲ್ಯಾಂಬೋರ್ಗಿನಿಯ ರೆವುಲ್ಟೋ ಎಂಬ ಹೊಸ ಕಾರಿನ ಬಗ್ಗೆ ಮಾಹಿತಿ ನೀಡಿದ್ದು, ಇವರ ಪ್ರಕಾರ 2026 ರವರೆಗೆ ಈ ಕಾರು ಮಾರಾಟವಾಗಿದೆ ಎಂದು ಹೇಳಿದ್ದಾರೆ. ಹೌದು, ಲ್ಯಾಂಬೋರ್ಗಿನಿ ರೆವುಲ್ಟೋ (Lamborghini Revulto) ಕಾರಿನ ಆರ್ಡರ್‌ ಸುಮಾರು 2026 ರ ವರೆಗೆ ಫುಲ್‌ ಆಗಿದ್ದು, ಇನ್ನು ಈ ಕಾರನ್ನು ಕೊಳ್ಳಬೇಕು ಎಂದುಕೊಳ್ಳುವವರು 2026 ರವರೆಗೆ ಕಾಯಲೇ ಬೇಕು.

ಈ ಸೆಗ್ಮೆಂಟ್‌ನ ಲ್ಯಾಂಬೋರ್ಗಿನಿಯ ಮೊದಲ ಪ್ಲಗ್‌ಇನ್‌ ಹೈಬ್ರಿಡ್‌ ಸೂಪರ್‌ ಕಾರ್‌ ಆಗಿದ್ದು ಇದರಲ್ಲಿ ಹೊಸ hybrid V12 ಎಂಜಿನ್‌ ಅನ್ನು ಹೊಂದಿದ್ದು, ಈ ಕಾರಣದಿಂದಲೇ ಲ್ಯಾಂಬೋರ್ಗಿನಿ ರೆವುಲ್ಟೋ ಕಾರಿಗೆ ಇಷ್ಟೊಂದು ಬೇಡಿಕೆ ಹೆಚ್ಚಾಗಿದ್ದು ಎಂಬುದು ಎಲ್ಲರ ಅಭಿಪ್ರಾಯ. ಇದು ಲ್ಯಾಂಬೋರ್ಗಿನಿಯ ಫ್ಲ್ಯಾಗ್‌ಶಿಪ್‌ ಮಾಡೆಲ್‌ ಆಗಿದ್ದು, ಈ ಕಾರಿಗೆ ಎಲೆಕ್ಟ್ರಿಕ್‌ ಅನ್ನು ಸಹ ಸೇರಿಸಿರುವುದರಿಂದ ಈ ಕಾರಿನ ಪರ್ಫಾಮೆನ್ಸ್‌ನಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬ ಅಂಶವನ್ನು ನಾವು ಇಲ್ಲಿ ಗಮನಿಸಬೇಕು.

ಇನ್ನು ಈ ಕಾರಿನಲ್ಲಿ ಪ್ಲಗ್‌ ಇನ್‌ ಹೈಬ್ರಿಡ್‌ ಕಾರ್ಯ ನಿರ್ವಹಿಸಲು ಬ್ಯಾಟರಿಯನ್ನು ಇಟ್ಟಿದ್ದು, ಇದನ್ನು ರೇರ್‌ ಮೋಟಾರ್‌ ಮೂಲಕ ಕೇವಲ ಆರು ನಿಮಿಷಗಳಲ್ಲಿ ಫುಲ್‌ ಚಾರ್ಜ್‌ ಮಾಡಬಹುದಾಗಿದೆ ಎಂದು ಮಾಹಿತಿಗಳು ತಿಳಿಸಿವೆ. ಲ್ಯಾಂಬೋರ್ಗಿನಿಯ ಪ್ರಮುಖರಾದ ವಿಂಕಲ್‌ಮನ್‌ ಈ ಕುರಿತಾಗಿ ಮಾಹಿತಿ ನೀಡಿದ್ದು ಹೊಸ hybrid V12 ಎಂಜಿನ್ ಗ್ರಾಹಕರಿಸಿಗೆ ಹೊಸ ಅನುಭವ ನೀಡಲಿದೆ. ಹೊಸ ನಿಯಮಗಳಿಗೆ ಅನುಸಾರವಾಗಿ ಈ ಎಂಜಿನ್‌ ಅನ್ನು ವಿನ್ಯಾಸಗೊಳಿಸುವಲ್ಲಿ ಕಂಪನಿಯು ಸಾಕಷ್ಟು ಶ್ರಮ ವಹಿಸಿದೆ.

Article Published On: Thursday, August 3, 2023, 8:30 [IST]
English summary
Elder man buys lamborghini supercar after retirement viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+